ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಶ್ಚಯವಾಗಿಯೂ ಇದು ದೇವರ ಅತಿ ಪವಿತ್ರ ಹಾಗೂ ಮಹೋನ್ನತ ಹೆಸರು”

“ನಿಶ್ಚಯವಾಗಿಯೂ ಇದು ದೇವರ ಅತಿ ಪವಿತ್ರ ಹಾಗೂ ಮಹೋನ್ನತ ಹೆಸರು”

“ನಿಶ್ಚಯವಾಗಿಯೂ ಇದು ದೇವರ ಅತಿ ಪವಿತ್ರ ಹಾಗೂ ಮಹೋನ್ನತ ಹೆಸರು”

ಈ ಮಾತುಗಳನ್ನು, 1430ರಲ್ಲಿ ಕ್ಯುಸಾದ ನಿಕ್ಲಸ್‌ ಎಂಬವರು ತಮ್ಮ ಪ್ರಸಂಗದಲ್ಲಿ ಹೇಳಿದರು. * ಇವರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು. ಉದಾಹರಣೆಗೆ ಅವರು ಗ್ರೀಕ್‌ ಹಾಗೂ ಹೀಬ್ರು ಭಾಷಾ ಸಂಶೋಧನೆಯಲ್ಲಿ ಮತ್ತು ತತ್ತ್ವಜ್ಞಾನ, ದೇವತಾಜ್ಞಾನ, ಗಣಿತಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಅಧ್ಯಯನದಲ್ಲಿ ತಲ್ಲೀನರಾದರು. 22ನೇ ವಯಸ್ಸಿನಲ್ಲಿ ಅವರು ರೋಮನ್‌ ಕ್ಯಾಥೊಲಿಕ್‌ ಚರ್ಚ್‌ನ ಕಾನೂನು ಪಂಡಿತರಾದರು. 1448ರಲ್ಲಿ ಅವರು ಪೋಪರ ಸಚಿವರಾಗಿ (ಕಾರ್ಡಿನಲ್‌) ನೇಮಕಹೊಂದಿದರು.

ಕುಸ್‌ ಪಟ್ಟಣದಲ್ಲಿ ಸುಮಾರು 550 ವರ್ಷಗಳ ಹಿಂದೆ ಕ್ಯೂಸಾದ ನಿಕ್ಲಸ್‌ ಒಂದು ವೃದ್ಧಾಶ್ರಮ ಆರಂಭಿಸಿದರು. ಈಗ ಈ ಪಟ್ಟಣಕ್ಕೆ ಬರ್ನ್‌ಕಾಸ್ಟೆಲ್‌-ಕುಸ್‌ ಎಂಬ ಹಸರಿದೆ. ಇದು ಜರ್ಮನಿಯ ಬಾನ್‌ ಎಂಬಲ್ಲಿಂದ ದಕ್ಷಿಣಕ್ಕೆ ಸುಮಾರು 130 ಕಿ.ಮೀ. ದೂರದಲ್ಲಿದೆ. ಈಗ ಅದೇ ವೃದ್ಧಾಶ್ರಮದ ಕಟ್ಟಡದಲ್ಲಿ, 310ಕ್ಕಿಂತಲೂ ಹೆಚ್ಚು ಹಸ್ತಪ್ರತಿಗಳನ್ನೊಳಗೊಂಡ ಕ್ಯೂಸಾ ಅವರ ಗ್ರಂಥಾಲಯವಿದೆ. ಈ ಹಸ್ತಪ್ರತಿಗಳಲ್ಲಿ ಒಂದಾದ ‘ಕೋಡೆಕ್ಸ್‌ ಕ್ಯೂಸಾನಸ್‌ 220’ರಲ್ಲಿ, ಕ್ಯೂಸಾ ಅವರು 1430ರಲ್ಲಿ ಕೊಟ್ಟ ಪ್ರಸಂಗ ಅಡಕವಾಗಿದೆ. ಇನ್‌ ಪ್ರಿನ್ಸಿಪ್ಯೋ ಈರಾಟ್‌ ವರ್ಬಮ್‌ (ಆದಿಯಲ್ಲಿ ವಾಕ್ಯವಿತ್ತು) ಎಂಬ ಶೀರ್ಷಿಕೆಯ ಆ ಪ್ರಸಂಗದಲ್ಲಿ, ಕ್ಯೂಸಾದ ನಿಕ್ಲಸ್‌ ‘ಯೆಹೋವ’ ಎಂಬ ಹೆಸರಿಗೆ ‘ಈಓವಾ’ ಎಂಬ ಲ್ಯಾಟಿನ್‌ ಭಾಷೆಯ ಕಾಗುಣಿತ ಬಳಸಿದರು. * ಪುಟ 56ರಲ್ಲಿ ದೇವರ ಹೆಸರಿನ ಕುರಿತ ಈ ಹೇಳಿಕೆಯಿದೆ: “ಅದು ದೇವದತ್ತ ನಾಮವಾಗಿದೆ. ಅದು ಚತುರಕ್ಷರಿ ಆಗಿದೆ, ಅಂದರೆ ಆ ಹೆಸರಿನಲ್ಲಿ ನಾಲ್ಕು ಅಕ್ಷರಗಳಿವೆ. ... ನಿಶ್ಚಯವಾಗಿಯೂ ಇದು ದೇವರ ಅತಿ ಪವಿತ್ರ ಹಾಗೂ ಮಹೋನ್ನತ ಹೆಸರು ಆಗಿದೆ.” ಕ್ಯೂಸಾದ ನಿಕ್ಲಸ್‌ರ ಈ ಹೇಳಿಕೆಯು, ಹೀಬ್ರೂ ಶಾಸ್ತ್ರಗಳ ಆದಿ ಗ್ರಂಥಪಾಠದಲ್ಲಿ ದೇವರ ಹೆಸರಿತ್ತು ಎಂಬ ವಾಸ್ತವಾಂಶವನ್ನು ದೃಢೀಕರಿಸುತ್ತದೆ.—ವಿಮೋ. 6:3.

ಈಗಲೂ ಅಸ್ತಿತ್ವದಲ್ಲಿರುವ ಮತ್ತು ಚತುರಕ್ಷರಿಯನ್ನು “ಈಓವಾ” ಎಂದು ಭಾಷಾಂತರಿಸಿರುವ ಅತೀ ಪ್ರಾಚೀನ ದಾಖಲೆಗಳಲ್ಲಿ ಹದಿನೈದನೆಯ ಶತಮಾನದ ಆದಿಭಾಗಕ್ಕೆ ಸೇರಿದ ಈ ಕೋಡೆಕ್ಸ್‌ ಒಂದಾಗಿದೆ. ಈ ಲಿಖಿತ ಸಾಕ್ಷ್ಯವು, “ಯೆಹೋವ” ಎಂಬ ಹೆಸರಿಗೆ ಹೋಲುವಂಥ ಇತರ ರೂಪಗಳು, ಶತಮಾನಗಳಿಂದಲೂ ದೇವರ ಹೆಸರಿನ ಅತಿ ಸಾಮಾನ್ಯ ಬರಹರೂಪಗಳಾಗಿದ್ದವು ಎಂಬುದಕ್ಕೆ ಹೆಚ್ಚಿನ ಪುರಾವೆ ಕೊಡುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 2 ನಿಕೊಲಾಸ್‌ ಕ್ರಿಫ್ಟ್ಸ್‌ (ಕ್ರೇಪ್ಸ್‌), ನಿಕೊಲಾಸ್‌ ಕ್ಯೂಸಾನಸ್‌ ಮತ್ತು ನಿಕೊಲಾಸ್‌ ವಾನ್‌ ಕುಸ್‌ ಎಂಬ ಹೆಸರುಗಳಿಂದಲೂ ಕ್ಯೂಸಾದ ನಿಕ್ಲಸ್‌ ಪ್ರಸಿದ್ಧರಾಗಿದ್ದರು. ಕುಸ್‌ ಎಂಬುದು ಅವರು ಹುಟ್ಟಿದ ಜರ್ಮನ್‌ ಪಟ್ಟಣದ ಹೆಸರಾಗಿತ್ತು.

^ ಪ್ಯಾರ. 3 ಈ ಪ್ರಸಂಗ ತ್ರಯೈಕ್ಯದ ಸಮರ್ಥನೆಗಾಗಿ ಕೊಡಲಾಗಿತ್ತು.

[ಪುಟ 16ರಲ್ಲಿರುವ ಚಿತ್ರ]

ಕ್ಯೂಸಾ ಅವರ ಗ್ರಂಥಾಲಯ