ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಿಶಾಚನು ನೈಜ ವ್ಯಕ್ತಿಯಾಗಿದ್ದಾನೊ?

ಪಿಶಾಚನು ನೈಜ ವ್ಯಕ್ತಿಯಾಗಿದ್ದಾನೊ?

ಪಿಶಾಚನು ನೈಜ ವ್ಯಕ್ತಿಯಾಗಿದ್ದಾನೊ?

ಪಿಶಾಚನ ಕುರಿತು ನಿಮ್ಮ ಅಭಿಪ್ರಾಯವೇನು? ಅವನು, ದುಷ್ಟ ವಿಷಯಗಳನ್ನು ಮಾಡುವಂತೆ ಜನರನ್ನು ಪ್ರೇರೇಪಿಸುವ ಒಬ್ಬ ನೈಜ ವ್ಯಕ್ತಿಯಾಗಿದ್ದಾನೆಂದು ನೀವು ನೆನಸುತ್ತೀರೊ? ಇಲ್ಲವೆ, ಕೆಡುಕೆಂಬ ಧಾತುವನ್ನು ಸೂಚಿಸುತ್ತಾನೆಂದು ನೆನಸುತ್ತೀರೊ? ಪಿಶಾಚನು, ನೀವು ಭಯಪಡಬೇಕಾದ ಒಬ್ಬ ವ್ಯಕ್ತಿಯಾಗಿದ್ದಾನೊ? ಅಥವಾ, ಅದೊಂದು ಬರಿಯ ಮೂಢನಂಬಿಕೆ ಇಲ್ಲವೆ ಅವನೊಬ್ಬ ದಂತಕಥೆಗಳ ವ್ಯಕ್ತಿ ಎಂಬುದಾಗಿ ನೆನಸಿ ಆ ವಿಚಾರವನ್ನು ನೀವು ತಳ್ಳಿಬಿಡುತ್ತೀರೊ? “ಪಿಶಾಚ” ಎಂಬ ಪದವು, ವಿಶ್ವದಲ್ಲಿರುವ ಯಾವುದೊ ಒಂದು ಅಗೋಚರವಾದ ನಾಶಕಾರಕ ಶಕ್ತಿಯನ್ನು ಸೂಚಿಸುತ್ತದೊ? ಅಥವಾ ಆ ಪದವು, ಆಧುನಿಕ ದಿನದ ಅನೇಕ ದೇವತಾಶಾಸ್ತ್ರಜ್ಞರು ವಾದಿಸುವಂತೆ, ಮಾನವನಲ್ಲಿರುವ ದುಷ್ಟ ಗುಣಲಕ್ಷಣಗಳ ಬರಿಯ ಸಂಕೇತವಾಗಿರಸಾಧ್ಯವಿದೆಯೊ?

ಪಿಶಾಚನು ಯಾರು ಎಂಬ ವಿಷಯದಲ್ಲಿ ಮಾನವಕುಲವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ವೇಷಹಾಕಿಕೊಳ್ಳುವುದರಲ್ಲಿ ನಿಪುಣನಾಗಿರುವ ಒಬ್ಬ ವ್ಯಕ್ತಿಯ ಗುರುತನ್ನು ಕಂಡುಹಿಡಿಯುವುದು ಎಷ್ಟು ಕಷ್ಟಕರವಾಗಿರಸಾಧ್ಯವಿದೆ ಎಂಬುದನ್ನು ಕಲ್ಪಿಸಿಕೊಳ್ಳಿರಿ! ಅದರಲ್ಲಿಯೂ ಮುಖ್ಯವಾಗಿ ಆ ವ್ಯಕ್ತಿ ಮುಖವಾಡವನ್ನು ಹಾಕಿಕೊಂಡು ತನ್ನ ನಿಜ ಗುರುತನ್ನು ಮರೆಮಾಚಲು ದೃಢತೀರ್ಮಾನ ಮಾಡಿರುವುದಾದರೆ ಅದು ಇನ್ನಷ್ಟು ಕಷ್ಟಕರವಾಗಿರುತ್ತದೆ. ಬೈಬಲ್‌ ಪಿಶಾಚನನ್ನು ಅದೇ ರೀತಿಯ ಒಬ್ಬ ವ್ಯಕ್ತಿಯಾಗಿ ವರ್ಣಿಸುತ್ತದೆ. ಅವನನ್ನು ಸೈತಾನ ಎಂದು ಕರೆಯುತ್ತಾ ಅದು ಹೇಳುವುದು: ‘ಸೈತಾನನು ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ.’ (2 ಕೊರಿಂಥ 11:14) ಅವನು ದುಷ್ಟನಾಗಿದ್ದರೂ ಇತರರನ್ನು ವಂಚಿಸಲು ಒಳ್ಳೆಯವನೆಂಬ ಸೋಗನ್ನು ಹಾಕಿಕೊಳ್ಳುತ್ತಾನೆ. ಅಲ್ಲದೆ, ಒಂದುವೇಳೆ ಅವನು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಜನರು ನಂಬುವಂತೆ ಮಾಡಬಲ್ಲನಾದರೆ, ತನ್ನ ಉದ್ದೇಶದಲ್ಲಿ ಅವನು ಇನ್ನಷ್ಟು ಸಫಲನಾಗುತ್ತಾನೆ.

ಹಾಗಾದರೆ, ನಿಜವಾಗಿಯೂ ಪಿಶಾಚನು ಯಾರಾಗಿದ್ದಾನೆ? ಅವನು ಯಾವಾಗ ಮತ್ತು ಹೇಗೆ ಅಸ್ತಿತ್ವಕ್ಕೆ ಬಂದನು? ಇಂದು ಅವನು ಮಾನವಕುಲವನ್ನು ಹೇಗೆ ಪ್ರಭಾವಿಸುತ್ತಿದ್ದಾನೆ? ಆ ಪ್ರಭಾವವನ್ನು ಪ್ರತಿರೋಧಿಸಲು ನಾವೇನಾದರು ಮಾಡಸಾಧ್ಯವಿದೆಯೊ? ಬೈಬಲಿನಲ್ಲಿ ಪಿಶಾಚನ ಅತ್ಯಾರಂಭದ ನಿಷ್ಕೃಷ್ಟ ಇತಿಹಾಸವು ಕೊಡಲ್ಪಟ್ಟಿದೆ ಮತ್ತು ಅದು ಈ ಎಲ್ಲ ಪ್ರಶ್ನೆಗಳಿಗೆ ಸತ್ಯವಾದ ಉತ್ತರಗಳನ್ನು ನೀಡುತ್ತದೆ.

[ಪುಟ 3ರಲ್ಲಿರುವ ಚಿತ್ರ]

ಮುಖವಾಡವನ್ನು ಹಾಕಿಕೊಂಡು ತನ್ನನ್ನು ಮರೆಮಾಚಲು ದೃಢತೀರ್ಮಾನ ಮಾಡಿರುವ ವ್ಯಕ್ತಿಯ ಗುರುತನ್ನು ಕಂಡುಹಿಡಿಯುವುದು ಎಷ್ಟು ಕಷ್ಟಕರವಾಗಿರಬಲ್ಲದು!