ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಊಟದ ಸಮಯ ತಿನ್ನಲಿಕ್ಕಾಗಿರುವ ಸಮಯ ಮಾತ್ರವೇ ಅಲ್ಲ!

ಊಟದ ಸಮಯ ತಿನ್ನಲಿಕ್ಕಾಗಿರುವ ಸಮಯ ಮಾತ್ರವೇ ಅಲ್ಲ!

ಊಟದ ಸಮಯ ತಿನ್ನಲಿಕ್ಕಾಗಿರುವ ಸಮಯ ಮಾತ್ರವೇ ಅಲ್ಲ!

ಎಲ್ಲರೂ ರುಚಿಕರವಾದ ಊಟವನ್ನು ತಿನ್ನುವುದರಲ್ಲಿ ಆನಂದಿಸುತ್ತಾರೆ. ಆದರೆ ಆ ಊಟದ ಸಮಯದಲ್ಲಿ ನಿಮ್ಮ ಪ್ರಿಯ ವ್ಯಕ್ತಿಗಳೊಂದಿಗಿನ ಒಳ್ಳೆಯ ಸಂಭಾಷಣೆ ಮತ್ತು ಬೆಚ್ಚಗಿನ ಸಾಂಗತ್ಯವೂ ಸೇರಿರುವುದಾದರೆ ಆಗ ಆ ಊಟವು ನಿಮ್ಮ ಹಸಿವೆಯನ್ನು ತಣಿಸುವುದಷ್ಟೇ ಅಲ್ಲ ಆ ಸಮಯವನ್ನು ಒಂದು ಆಹ್ಲಾದಕರ ಸಂದರ್ಭವನ್ನಾಗಿಯೂ ಮಾಡುತ್ತದೆ. ಅನೇಕ ಕುಟುಂಬಗಳು ದಿನದಲ್ಲಿ ಕಡಿಮೆಪಕ್ಷ ಒಮ್ಮೆಯಾದರೂ ಒಟ್ಟುಸೇರಿ ಊಟಮಾಡುವುದನ್ನು ರೂಢಿಯಾಗಿ ಮಾಡಿಕೊಂಡಿವೆ. ಊಟದ ಸಮಯವು ದಿನದ ಘಟನೆಗಳ ಕುರಿತು ಅಥವಾ ಯೋಜನೆಗಳ ಕುರಿತು ಚರ್ಚಿಸಲು ಕುಟುಂಬಕ್ಕೆ ಒಂದು ಅವಕಾಶವನ್ನು ಮಾಡಿಕೊಡುತ್ತದೆ. ಮಕ್ಕಳ ಹೇಳಿಕೆಗಳು ಮತ್ತು ಅಭಿವ್ಯಕ್ತಿಗಳಿಗೆ ಕಿವಿಗೊಡುವ ಹೆತ್ತವರಿಗೆ ತಮ್ಮ ಎಳೆಯರ ಆಲೋಚನೆ ಮತ್ತು ಭಾವನೆಗಳ ನಸುನೋಟ ಸಿಗುತ್ತದೆ. ಸಮಯ ದಾಟಿದಂತೆ, ಊಟದ ಸಮಯದಲ್ಲಿ ಆನಂದಿಸಲಾಗುವ ಸಂತಸದ ನಿರಾಳವಾದ ಸಹವಾಸವು ಕುಟುಂಬದಲ್ಲಿ ಭದ್ರತೆ, ಭರವಸೆ ಮತ್ತು ಪ್ರೀತಿಯ ಭಾವವನ್ನು ಪ್ರವರ್ಧಿಸುತ್ತದೆ ಮತ್ತು ಇದು ಕುಟುಂಬ ಏರ್ಪಾಡಿಗೆ ಸ್ಥಿರತೆಯನ್ನು ಕೂಡಿಸುತ್ತದೆ.

ಇಂದು, ಅನೇಕ ಕುಟುಂಬ ಸದಸ್ಯರು ಕಾರ್ಯನಿರತರಾಗಿರುವುದರಿಂದ ಮತ್ತು ಅತ್ತಿತ್ತ ಹೋಗಬೇಕಾಗಿರುವುದರಿಂದ ಒಂದು ಊಟಕ್ಕಾಗಿ ಒಟ್ಟುಸೇರುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. ಲೋಕದ ಕೆಲವು ಭಾಗಗಳಲ್ಲಿ ಸ್ಥಳಿಕ ಸಂಸ್ಕೃತಿಗಳು, ಒಂದು ಕುಟುಂಬವು ಒಟ್ಟಿಗೆ ಕುಳಿತು ಊಟಮಾಡುವುದನ್ನು ಅಥವಾ ಊಟದ ಸಮಯದಲ್ಲಿ ಮಾತಾಡುವುದನ್ನೂ ನಿರುತ್ತೇಜಿಸುತ್ತವೆ. ಇತರ ಕುಟುಂಬಗಳಿಗೆ ಊಟದ ಸಮಯದಲ್ಲಿ ಟೀವಿಯನ್ನು ಹಾಕಿಕೊಳ್ಳುವ ಅಭ್ಯಾಸವಿರುತ್ತದೆ, ಮತ್ತು ಹೀಗೆ ಅರ್ಥಭರಿತ ಸಂವಾದದಲ್ಲಿ ತೊಡಗುವ ಯಾವುದೇ ಅವಕಾಶವನ್ನು ಅವರು ಸ್ವತಃ ಹೋಗಲಾಡಿಸಿಕೊಳ್ಳುತ್ತಾರೆ.

ಆದರೆ, ಕ್ರೈಸ್ತ ಹೆತ್ತವರು ತಮ್ಮ ಮನೆವಾರ್ತೆಗಳನ್ನು ಕಟ್ಟುವ ಸಂದರ್ಭಗಳಿಗಾಗಿ ಯಾವಾಗಲೂ ಹುಡುಕುತ್ತಿರುತ್ತಾರೆ. (ಜ್ಞಾನೋಕ್ತಿ 24:27) ತುಂಬ ಕಾಲದ ಹಿಂದೆ, ಮಕ್ಕಳಿಗೆ ದೇವರ ವಾಕ್ಯವನ್ನು ದಾಟಿಸುವ ಅತ್ಯುತ್ತಮ ಸಂದರ್ಭಗಳಲ್ಲಿ ಒಂದು, ಅವರು ತಮ್ಮ “ಮನೆಯಲ್ಲಿ ಕೂತಿರುವಾಗ” ಎಂದು ಹೆತ್ತವರಿಗೆ ಹೇಳಲಾಯಿತು. (ಧರ್ಮೋಪದೇಶಕಾಂಡ 6:7) ಕ್ರಮವಾಗಿ ಒಂದು ಊಟಕ್ಕಾಗಿ ಒಟ್ಟಿಗೆ ಕೂತುಕೊಳ್ಳುವುದು ಹೆತ್ತವರಿಗೆ ತಮ್ಮ ಮಕ್ಕಳಲ್ಲಿ ಯೆಹೋವನಿಗಾಗಿಯೂ ಆತನ ನೀತಿಯುತ ಮೂಲತತ್ತ್ವಗಳಿಗಾಗಿಯೂ ಹೆಚ್ಚು ಗಾಢವಾದ ಪ್ರೀತಿಯನ್ನು ಬೆಳೆಸುವ ಅದ್ವಿತೀಯ ಅವಕಾಶವನ್ನು ಮಾಡಿಕೊಡುತ್ತದೆ. ಸಂತೋಷಕರ ಮತ್ತು ನಿರಾಳವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ, ನೀವು ಊಟದ ಸಮಯವನ್ನು ನಿಮ್ಮ ಕುಟುಂಬಕ್ಕೆ ಸಹ ಆನಂದದಾಯಕವಾದ ಆತ್ಮೋನ್ನತಿ ಮಾಡುವ ಸಂದರ್ಭವನ್ನಾಗಿ ಮಾಡಬಲ್ಲಿರಿ. ಹೌದು ಊಟದ ಸಮಯವನ್ನು ತಿನ್ನಲಿಕ್ಕಾಗಿರುವ ಸಮಯಕ್ಕಿಂತಲೂ ಹೆಚ್ಚಿನದ್ದಾಗಿ ಮಾಡಿರಿ!