ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮರೆಯಲ್ಪಟ್ಟ ಬಲಿಗಳು” ಜ್ಞಾಪಿಸಿಕೊಳ್ಳಲ್ಪಡುತ್ತಾರೆ

“ಮರೆಯಲ್ಪಟ್ಟ ಬಲಿಗಳು” ಜ್ಞಾಪಿಸಿಕೊಳ್ಳಲ್ಪಡುತ್ತಾರೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

“ಮರೆಯಲ್ಪಟ್ಟ ಬಲಿಗಳು” ಜ್ಞಾಪಿಸಿಕೊಳ್ಳಲ್ಪಡುತ್ತಾರೆ

ಇಸವಿ 2001ರ ಆರಂಭದಲ್ಲಿ, 15 ವರ್ಷ ಪ್ರಾಯದ ಹೈಗಾಸ್‌ ಎಂಬ ಯೆಹೋವನ ಸಾಕ್ಷಿಯೊಬ್ಬನು ಸ್ವಿಟ್ಸರ್ಲೆಂಡ್‌ನ ಬರ್ನ್‌ನಲ್ಲಿರುವ “ಮರೆಯಲ್ಪಟ್ಟ ಬಲಿಗಳು” ಎಂಬ ವಸ್ತುಪ್ರದರ್ಶನಕ್ಕೆ ಭೇಟಿಯನ್ನಿತ್ತನು. ಇದು ಯೆಹೋವನ ಸಾಕ್ಷಿಗಳ ನಾಸಿ ಹಿಂಸೆಗೆ ಸಂಬಂಧಿಸಿದ್ದಾಗಿತ್ತು. ತನ್ನ ಭೇಟಿಯ ಕೊನೆಯಲ್ಲಿ ಹೈಗಾಸ್‌ ಹೇಳಿದ್ದು: “ನಾಸಿ ಆಳ್ವಿಕೆಯ ಕೆಳಗೆ ಯೆಹೋವನ ಸಾಕ್ಷಿಗಳು ಅನುಭವಿಸಿದ ಅಮಾನುಷ ದೌರ್ಜನ್ಯ ಹಾಗೂ ಕಷ್ಟಗಳ ಕುರಿತು ನಾನು ಕೇಳಿದ್ದೆ, ಆದರೆ ಆ ಕಾಲದ ವಿಶ್ವಾಸಾರ್ಹ ದಾಖಲೆಪತ್ರಗಳು ಹಾಗೂ ಛಾಯಾಚಿತ್ರಗಳನ್ನು ನಾನು ನೋಡಿದ್ದು ಇದೇ ಪ್ರಥಮ ಬಾರಿಯಾಗಿತ್ತು. ಅಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದ್ದ ವಸ್ತುಗಳು, ಪ್ರತ್ಯಕ್ಷ ಸಾಕ್ಷಿಗಳ ವರದಿಗಳು, ಮತ್ತು ಇತಿಹಾಸಗಾರರ ಹೇಳಿಕೆಗಳು ನನ್ನ ಹೃದಮನಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಿವೆ.”

ಸಮಯಾನಂತರ, ಪ್ರೌಢ ಶಾಲೆಯಲ್ಲಿರುವ ತನ್ನ ಸಹಪಾಠಿಗಳಿಗಾಗಿ ಒಂದು ವರದಿಯನ್ನು ಬರೆಯುವ ನೇಮಕವು ಹೈಗಾಸ್‌ಗೆ ಕೊಡಲ್ಪಟ್ಟಾಗ, ಅವನು “ಯೆಹೋವನ ಸಾಕ್ಷಿಗಳು​—⁠ನಾಸಿಪಂಥದ ಮರೆಯಲ್ಪಟ್ಟ ಬಲಿಗಳು” ಎಂಬ ಮುಖ್ಯ ವಿಷಯವನ್ನು ಆಯ್ಕೆಮಾಡಿದನು. ಹೈಗಾಸ್‌ನ ಶಿಕ್ಷಕರು ಈ ಮುಖ್ಯ ವಿಷಯಕ್ಕೆ ಒಪ್ಪಿಗೆಯನ್ನಿತ್ತರಾದರೂ, ಅವನು ಯಾವುದರಿಂದ ವಿಷಯಗಳನ್ನು ಸಂಗ್ರಹಿಸುತ್ತಾನೋ ಅದರಲ್ಲಿ ಐಹಿಕ ಸಾಹಿತ್ಯವೂ ಸೇರಿರಬೇಕೆಂದು ಅವನಿಗೆ ಹೇಳಿದರು. ಹೈಗಾಸ್‌ ಇದಕ್ಕೆ ಸಂತೋಷದಿಂದ ಒಪ್ಪಿಕೊಂಡನು. “ನಾಸಿ ಯುಗದಲ್ಲಿನ ಯೆಹೋವನ ಸಾಕ್ಷಿಗಳ ಕುರಿತಾಗಿ ನಾನು ಅಧ್ಯಯನ ಮಾಡಿದ ಕೆಲವು ಪುಸ್ತಕಗಳಿಂದ ಒಂದು ಸಾರಾಂಶವನ್ನು ಬರೆದೆ. ‘ಮರೆಯಲ್ಪಟ್ಟ ಬಲಿಗಳು’ ವಸ್ತುಪ್ರದರ್ಶನದ ಕುರಿತಾದ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಸಹ ನಾನು ವಿವರವಾಗಿ ಬರೆದೆ. ಈ 43-ಪುಟದ ವರದಿಯಲ್ಲಿ ವಿವರಣಾತ್ಮಕ ಚಿತ್ರಗಳು ಹಾಗೂ ಛಾಯಾಚಿತ್ರಗಳು ಒಳಗೂಡಿದ್ದವು.”

ಇಸವಿ 2002ರ ನವೆಂಬರ್‌ನಲ್ಲಿ ಹೈಗಾಸ್‌ ತನ್ನ ವರದಿಯನ್ನು ಸಹಪಾಠಿಗಳು, ಶಿಕ್ಷಕರು, ಕುಟುಂಬ, ಹಾಗೂ ಸ್ನೇಹಿತರ ಮುಂದೆ ಸಾದರಪಡಿಸಿದನು. ತದನಂತರ, ಒಂದು ಪ್ರಶ್ನೋತ್ತರ ಚರ್ಚೆಯು ಸಹ ನಡೆಸಲ್ಪಟ್ಟಿತು, ಮತ್ತು ಇದು ತನ್ನ ಬೈಬಲಾಧಾರಿತ ನಂಬಿಕೆಗಳನ್ನು ವಿವರಿಸಲು ಅವನಿಗೆ ಸದವಕಾಶವನ್ನು ನೀಡಿತು. ಅವನು ಈ ವಿಷಯವನ್ನೇ ಏಕೆ ಆಯ್ಕೆಮಾಡಿದನೆಂದು ಸಭಿಕರಲ್ಲಿದ್ದ ಹುಡುಗಿಯೊಬ್ಬಳು ಪ್ರಶ್ನಿಸಿದಾಗ, ಇತಿಹಾಸದ ಅನೇಕ ಪುಸ್ತಕಗಳು ಯೆಹೋವನ ಸಾಕ್ಷಿಗಳ ಕುರಿತು ಪ್ರಸ್ತಾಪಿಸುವುದಿಲ್ಲ ಹಾಗೂ ಸಾಕ್ಷಿಗಳು ತಮ್ಮ ಕ್ರೈಸ್ತ ನಂಬಿಕೆಯನ್ನು ಎಷ್ಟು ಧೈರ್ಯದಿಂದ ಸಮರ್ಥಿಸಿದರು ಎಂಬುದನ್ನು ಜನರು ತಿಳಿಯಬೇಕೆಂಬುದು ತನ್ನ ಬಯಕೆ ಎಂದು ಹೈಗಾಸ್‌ ವಿವರಿಸಿದನು. ಈ ಸಾದರಪಡಿಸುವಿಕೆಯ ಫಲಿತಾಂಶವೇನಾಗಿತ್ತು?

ಹೈಗಾಸ್‌ ಹೇಳಿದ್ದು: “ನನ್ನ ಸಹಪಾಠಿಗಳು ಬಹಳ ವಿಸ್ಮಯಗೊಂಡರು. ಒಂದು ಗುಂಪಿನೋಪಾದಿ ಯೆಹೋವನ ಸಾಕ್ಷಿಗಳನ್ನು ಕ್ರೂರವಾದ ರೀತಿಯಲ್ಲಿ ಹಿಂಸಿಸಲಾಗಿತ್ತು ಎಂಬುದು ಅವರಿಗೆ ಗೊತ್ತಿರಲಿಲ್ಲ. ಅಷ್ಟುಮಾತ್ರವಲ್ಲ, ನಾಸಿ ಕೂಟಶಿಬಿರಗಳಲ್ಲಿ ಬಂಧಿತರಾಗಿದ್ದ ಸಾಕ್ಷಿಗಳು ಒಂದು ವಿಶೇಷ ರೀತಿಯ ಗುರುತು ಚಿಹ್ನೆಯನ್ನು, ಅಂದರೆ ಕೆನ್ನೀಲಿ ಬಣ್ಣದ ತ್ರಿಕೋನವನ್ನು ಧರಿಸುತ್ತಿದ್ದರು ಎಂಬುದು ಸಹ ಅನೇಕರಿಗೆ ಗೊತ್ತಿರಲಿಲ್ಲ.”

ಹೈಗಾಸನು ತನ್ನ ವರದಿಯನ್ನು ಪ್ರಸ್ತುತಪಡಿಸಿದ ಬಳಿಕ, ತನ್ನ ಸಹಪಾಠಿಗಳೊಂದಿಗೆ ಮಾತಾಡಲು ಮತ್ತು ರಕ್ತಪೂರಣ, ಮದ್ಯಪಾನ, ಹಾಗೂ ನೈತಿಕತೆಗಳ ಕುರಿತಾದ ಸಾಕ್ಷಿಗಳ ಬೈಬಲಾಧಾರಿತ ನಿಲುವಿನ ಬಗ್ಗೆ ಚರ್ಚಿಸಲು ಅವನಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆತವು. “ನನ್ನ ಸಹಪಾಠಿಗಳಲ್ಲಿ ಯಾರೂ ನನ್ನನ್ನು ಗೇಲಿಮಾಡಲಿಲ್ಲ ಅಥವಾ ಅಪಹಾಸ್ಯಮಾಡಲಿಲ್ಲ” ಎಂದು ಹೈಗಾಸ್‌ ತಿಳಿಸಿದನು. ಇದಲ್ಲದೆ, ಅವನ ವರದಿಯು ಈಗ ಶಾಲೆಯ ಗ್ರಂಥಾಲಯದಲ್ಲಿ ಇಡಲ್ಪಟ್ಟಿದೆ. ಯೆಹೋವನ ಸಾಕ್ಷಿಗಳ ದಿಟ್ಟ ನಿಲುವು ಎಂದೂ ಮರೆಯಲ್ಪಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಲು ಇದು ಸಹಾಯಮಾಡುವುದು.