ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಡು-ನಿವಾಸಿಗಳು

ಇಂಡೊನೇಶಿಯ! ಹೋಗೋಣವೇ?

ಇಂಡೊನೇಶಿಯ! ಹೋಗೋಣವೇ?

ಇಂಡೊನೇಶಿಯ ರಾಷ್ಟ್ರದಲ್ಲಿ ಸುಮಾರು 17,000 ದ್ವೀಪಗಳಿವೆ. ಇಲ್ಲಿನ ಜನರು ಸ್ನೇಹಭಾವ, ಸಹನೆ, ಸಭ್ಯತೆ ಮತ್ತು ಅತಿಥಿಸತ್ಕಾರಕ್ಕೆ ಹೆಸರುವಾಸಿ.

ಇವರ ಮುಖ್ಯ ಆಹಾರ ಅನ್ನ. ಅದರ ಜತೆಗೆ ಇತರ ಭಕ್ಷ್ಯಗಳು ಮತ್ತು ಹಣ್ಣುಗಳು. ಭಕ್ಷ್ಯಗಳಲ್ಲಿ ಹೆಚ್ಚಾಗಿ ಸಂಬಾರ ಪದಾರ್ಥಗಳನ್ನು ಬಳಸುತ್ತಾರೆ. ಇಂಡೊನೇಶಿಯದ ಕೆಲವೆಡೆ ನೆಲದ ಮೇಲೆ ಚಾಪೆ ಹಾಸಿ ಮನೆಮಂದಿಯೆಲ್ಲ ಕೂತು ಊಟಮಾಡುತ್ತಾರೆ. ಅನ್ನವನ್ನು ಕೈಯಿಂದ ತಿನ್ನುತ್ತಾರೆ. ಹೀಗೆ ತಿಂದರೆ ರುಚಿ ಹೆಚ್ಚು ಎನ್ನುತ್ತಾರೆ ಅಲ್ಲಿನ ಜನರು.

ಇಂಡೊನೇಶಿಯನ್ನರು ಕಲೆ, ನೃತ್ಯ, ಸಂಗೀತ ಪ್ರಿಯರು. ಆ್ಯಂಕ್‌ಲಾನ್‌ ಎನ್ನುವುದು ಅವರು ಬಳಸುವ ಒಂದು ವಿಶೇಷ ಸಂಗೀತ ಸಾಧನ. ಇದನ್ನು ಹೇಗೆ ಮಾಡುತ್ತಾರೆಂದರೆ, ಬಿದಿರಿನ ಕೊಳವೆಗಳನ್ನು ಚೌಕಟ್ಟೊಂದಕ್ಕೆ ಸಡಿಲವಾಗಿ ಕಟ್ಟುತ್ತಾರೆ. ಇದನ್ನು ಕುಲುಕಿದಾಗ ಒಂದು ಇಂಪಾದ ಸ್ವರ ಹೊರಬರುತ್ತೆ. ಹೀಗೆ ಅನೇಕ ಸ್ವರಗಳು ಸೇರಿ ಒಂದು ಹಾಡು ಹೊರಬರಬೇಕಾದರೆ ತುಂಬ ವಾದ್ಯಗಾರರು ಸೇರಿ ತಮ್ಮ ತಮ್ಮ ಆ್ಯಂಕ್‌ಲಾನ್‌ ಅನ್ನು ಒಮ್ಮೆಲೆ ನುಡಿಸಬೇಕಾಗುತ್ತೆ.

15ನೇ ಶತಮಾನದ ವರೆಗೆ ಇಂಡೊನೇಶಿಯದಲ್ಲಿ ಹಿಂದೂಗಳು ಮತ್ತು ಬೌದ್ಧರೇ ಜಾಸ್ತಿ ಇದ್ದರು. 16ನೇ ಶತಮಾನದಷ್ಟಕ್ಕೆ ಮುಸ್ಲಿಮರು ಮೇಲುಗೈ ಸಾಧಿಸಿದರು. ಅದೇ ಸಮಯದಲ್ಲಿ ಸಂಬಾರ ಪದಾರ್ಥಗಳಿಗಾಗಿ ಇಂಡೊನೇಶಿಯಕ್ಕೆ ಬಂದ ಯುರೋಪಿಯನ್ನರು ಕ್ರೈಸ್ತತ್ವವನ್ನು ಪರಿಚಯಿಸಿದರು.

ಯೆಹೋವನ ಸಾಕ್ಷಿಗಳು ತಮ್ಮ ಬೈಬಲ್‌ ಶಿಕ್ಷಣ ಕಾರ್ಯದಿಂದಾಗಿ ಜಗತ್ತಿನಲ್ಲಿ ಪ್ರಸಿದ್ಧರು. 1931ರಿಂದ ಇಂಡೊನೇಶಿಯದಲ್ಲೂ ಉತ್ಸುಕತೆಯಿಂದ ಈ ಸೇವೆಯನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಅಲ್ಲಿ ಅವರ ಸಂಖ್ಯೆ 22,000 ಮೀರಿದೆ. ಶ್ರವಣ ವೈಕಲ್ಯವಿರುವ ಜನರಿಗೆ ಆಧ್ಯಾತ್ಮಿಕ ಸಹಾಯ ನೀಡಲು ತುಂಬ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಯೇಸು ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮವನ್ನು ಯೆಹೋವನ ಸಾಕ್ಷಿಗಳು ಸನ್ನೆ ಭಾಷೆಯಲ್ಲೂ ಏರ್ಪಡಿಸಿದ್ದರು. ಅದಕ್ಕೆ 500ಕ್ಕೂ ಹೆಚ್ಚು ಜನ ಹಾಜರಾಗಿದ್ದರು. (g13-E 04)

ಎಚ್ಚರ! ಪತ್ರಿಕೆ 98 ಭಾಷೆಗಳಲ್ಲಿ ಲಭ್ಯವಾಗುತ್ತಿದೆ. ಅದರಲ್ಲಿ ಬಹಾಸ ಇಂಡೊನೇಶಿಯ ಭಾಷೆ ಕೂಡ ಒಂದು