ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಊಟದ ಸಮಯಗಳು ನಮ್ಮನ್ನು ಇನ್ನೂ ಹತ್ತಿರಕ್ಕೆ ತರುತ್ತವೆ”

“ಊಟದ ಸಮಯಗಳು ನಮ್ಮನ್ನು ಇನ್ನೂ ಹತ್ತಿರಕ್ಕೆ ತರುತ್ತವೆ”

“ಊಟದ ಸಮಯಗಳು ನಮ್ಮನ್ನು ಇನ್ನೂ ಹತ್ತಿರಕ್ಕೆ ತರುತ್ತವೆ”

ನೀವು ಕುಟುಂಬವಾಗಿ ದಿನಕ್ಕೆ ಒಂದು ಹೊತ್ತಿನ ಊಟವನ್ನಾದರೂ ಜೊತೆಯಾಗಿ ಕುಳಿತು ಮಾಡುತ್ತೀರೊ? ವಿಷಾದಕರವಾಗಿ, ತರಾತುರಿಯ ಇಂದಿನ ಲೋಕದಲ್ಲಿ ಹೆಚ್ಚಿನ ಮನೆಗಳಲ್ಲಿ ಊಟಮಾಡುವುದು, ಯೋಜಿಸಿ ಮಾಡುವ ವಿಷಯವಾಗಿರದೆ ಎಲ್ಲರೂ ತಮಗಿಷ್ಟಬಂದಾಗ ತಮ್ಮಷ್ಟಕ್ಕೆ ಮಾಡುವ ವಿಷಯವಾಗಿಬಿಟ್ಟಿದೆ. ಆದರೆ ಒಂದು ಕುಟುಂಬವು ಜೊತೆಯಾಗಿ ಕುಳಿತು ಊಟಮಾಡುವುದು ಶಾರೀರಿಕ ಹಸಿವನ್ನು ತಣಿಸುತ್ತದೆ ಮಾತ್ರವಲ್ಲ, ಹಾರ್ದಿಕ ಸಂವಾದ ಮತ್ತು ಕೌಟುಂಬಿಕ ಬಂಧವನ್ನು ಬೆಸೆಯುವುದರಂಥ ಹೆಚ್ಚು ಪ್ರಾಮುಖ್ಯವಾದ ಇನ್ನಿತರ ಅವಶ್ಯಕತೆಗಳನ್ನು ಸಹ ಪೂರೈಸುತ್ತದೆ.

ಉತ್ತರ ಯುರೋಪಿನ ಲಿತ್ಯುಏನಿಯಾದಲ್ಲಿ ಆಲ್ಗಿರ್‌ದಾಸ್‌ ಎಂಬವರು ತಮ್ಮ ಹೆಂಡತಿ ರಿಮ ಮತ್ತು ಮೂವರು ಹೆಣ್ಣುಮಕ್ಕಳೊಂದಿಗೆ ಜೀವಿಸುತ್ತಿದ್ದಾರೆ. ಅವರು ಹೇಳುವುದು: “ನಾನು ಇಡೀ ದಿನ ಕೆಲಸದ ಸ್ಥಳದಲ್ಲಿರುತ್ತೇನೆ ಮತ್ತು ಮಕ್ಕಳು ಶಾಲೆಯಲ್ಲಿರುತ್ತಾರೆ. ಆದರೆ ರಾತ್ರಿಗೆ ನಾವೆಲ್ಲರೂ ಒಟ್ಟಿಗೆ ಕುಳಿತು ಊಟಮಾಡುವಂತೆ ನಮ್ಮ ಕಾಲತಖ್ತೆಯನ್ನು ಹೊಂದಿಸಿಕೊಂಡಿದ್ದೇವೆ. ಊಟದ ಸಮಯದಲ್ಲಿ ಪ್ರತಿಯೊಬ್ಬರು ಇಡೀ ದಿನ ನಡೆದ ಸಂಗತಿಗಳ ಬಗ್ಗೆ ಮತ್ತು ನಮ್ಮನಮ್ಮ ಸಮಸ್ಯೆಗಳ, ಆಲೋಚನೆಗಳ, ಯೋಜನೆಗಳ, ಇಷ್ಟಾನಿಷ್ಟಗಳ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಮಾತಾಡುತ್ತೇವೆ. ಈ ಸಮಯದಲ್ಲಿ ಆಧ್ಯಾತ್ಮಿಕ ಚರ್ಚೆಗಳನ್ನೂ ಮಾಡುತ್ತೇವೆ. ಹೌದು ನಿಸ್ಸಂದೇಹವಾಗಿ, ಊಟದ ಸಮಯಗಳು ನಮ್ಮನ್ನು ಇನ್ನೂ ಹತ್ತಿರಕ್ಕೆ ತರುತ್ತವೆ.”

ರಿಮ ಕೂಡಿಸಿ ಹೇಳುವುದು: “ನನ್ನ ಹುಡುಗಿಯರೊಂದಿಗೆ ಜೊತೆಗೂಡಿ ಅಡುಗೆ ಮಾಡುವುದು ಆಪ್ತ ಮಾತುಕತೆಗೆ ಅವಕಾಶಮಾಡಿಕೊಡುತ್ತದೆ. ಅಡುಗೆ ಕೋಣೆಯಲ್ಲಿ ಒಟ್ಟಾಗಿ ಕೆಲಸಮಾಡಲು ಅವರು ತುಂಬ ಇಷ್ಟಪಡುತ್ತಾರೆ, ಮತ್ತು ಅದೇ ಸಮಯದಲ್ಲಿ ಆವಶ್ಯಕವಾದ ಕೌಶಲಗಳನ್ನು ಕಲಿತುಕೊಳ್ಳುತ್ತಿದ್ದಾರೆ. ಹೀಗೆ ಕೆಲಸವೂ ಆಗುತ್ತದೆ ಸಂತೋಷವೂ ಆಗುತ್ತದೆ.”

ಆಲ್ಗಿರ್‌ದಾಸ್‌, ರಿಮ ಮತ್ತು ಅವರ ಮಕ್ಕಳು ಒಟ್ಟಾಗಿ ಕುಳಿತು ಊಟಮಾಡಲು ಸಮಯತೆಗೆದುಕೊಳ್ಳುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಒಂದುವೇಳೆ ನೀವು ಇಷ್ಟರವರೆಗೆ ಇದನ್ನು ಮಾಡಿರದಿದ್ದಲ್ಲಿ, ದಿನದಲ್ಲಿ ಒಮ್ಮೆಯಾದರೂ ಇಡೀ ಕುಟುಂಬ ಜೊತೆಯಾಗಿ ಕುಳಿತು ಊಟಮಾಡುವಂತೆ ಏಕೆ ಏರ್ಪಾಡುಮಾಡಬಾರದು? ನೀವು ಒಂಟಿ ಹೆತ್ತವರಾಗಿರುವುದಾದರೂ ಹೀಗೆ ಮಾಡಬಹುದು. ನೀವು ಮಾಡುವ ಯಾವುದೇ ತ್ಯಾಗಗಳಿಗಿಂತ ನಿಮಗೆ ದೊರಕುವ ಲಾಭಗಳೇ ಹೆಚ್ಚಾಗಿರುವವು. (g 11/06)