ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಫಿ ನಿಮ್ಮ ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುತ್ತಿದೆಯೋ?

ಕಾಫಿ ನಿಮ್ಮ ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುತ್ತಿದೆಯೋ?

ಕಾಫಿ ನಿಮ್ಮ ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುತ್ತಿದೆಯೋ?

ಬ್ರೆಸಿಲಿನ ಎಚ್ಚರ! ಸುದ್ದಿಗಾರರಿಂದ

ಸೋಸದ ಕಾಫಿಯನ್ನು ಕುಡಿಯುವುದರಿಂದ ನಿಮ್ಮ ಕೊಲೆಸ್ಟರಾಲ್‌ ಮಟ್ಟವು ಹೆಚ್ಚುತ್ತದೆ, ಎಂದು ನೆದರ್ಲೆಂಡ್ಸ್‌ನ ವಾಕನಿಂಗನ್‌ ಅಗ್ರಿಕಲ್ಚರ್‌ ಯೂನಿವರ್ಸಿಟಿಯಲ್ಲಿರುವ ಸಂಶೋಧಕರು ಹೇಳುತ್ತಾರೆ.

“ಸೋಸದ” ಎಂಬುದೇ ಅತಿ ಮುಖ್ಯ ಪದವಾಗಿದೆ. ಏಕೆ? ಕಾಫಿ ಬೀಜವು ಕೊಲೆಸ್ಟರಾಲ್‌ ಅನ್ನು ಹೆಚ್ಚಿಸುವ ಕೆಫೆಸ್ಟೋಲ್‌ ಎಂಬ ಪದಾರ್ಥವನ್ನು ಹೊಂದಿದೆ ಎಂದು ವೈಜ್ಞಾನಿಕ ಸಂಶೋಧನೆಗಾಗಿರುವ ನೆದರ್ಲೆಂಡ್ಸ್‌ ಸಂಸ್ಥೆಯ ವಾರ್ತಾಪತ್ರವಾದ ರೀಸರ್ಚ್‌ ರಿಪೋರ್ಟ್ಸ್‌ ಹೇಳುತ್ತದೆ. ಕಾಫಿ ಪುಡಿಗೆ ನೇರವಾಗಿ ಬಿಸಿ ನೀರನ್ನು ಹಾಕುವಾಗ ಕೆಫೆಸ್ಟೋಲ್‌ ಸಿಗುತ್ತದೆ. ಅದೇ ರೀತಿಯಲ್ಲಿ, ಟರ್ಕಿಷ್‌ ಕಾಫಿಯಂತೆ ಕಾಫಿ ಪುಡಿಯನ್ನು ನೀರಿನಲ್ಲಿ ಹಲವಾರು ಬಾರಿ ಕುದಿಸುವಾಗ ಅಥವಾ ಫ್ರೆಂಚ್‌ ಪ್ರೆಸ್‌ನಂತೆ ತೆಳು ಕಾಗದದ ಶೋಧಕವನ್ನು ಉಪಯೋಗಿಸದೆ ಲೋಹದ ಶೋಧಕವನ್ನು ಉಪಯೋಗಿಸುವಾಗ ಕೆಫೆಸ್ಟೋಲ್‌ ಸಿಗುತ್ತದೆ. ತೆಳು ಕಾಗದದ ಶೋಧಕವನ್ನು ಉಪಯೋಗಿಸದೇ ಇರುವಾಗ, ಕೆಫೆಸ್ಟೋಲ್‌ ಕುದಿಸಿದ ಕಾಫಿಯಲ್ಲೇ ಉಳಿದುಬಿಡುತ್ತದೆ.

ಸೋಸದ ಒಂದು ಕಪ್‌ ಕಾಫಿಯಲ್ಲಿ, ಸುಮಾರು ನಾಲ್ಕು ಮಿಲಿಗ್ರ್ಯಾಮ್‌ಗಳಷ್ಟು ಕೆಫೆಸ್ಟೋಲ್‌ ಇರುತ್ತದೆ. ಮತ್ತು ಇದು ಸುಮಾರು 1 ಪ್ರತಿಶತದಷ್ಟು ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುತ್ತದೆ. ಎಸ್‌ಪ್ರೆಸೊ ಕಾಫಿ ಸಹ ಕೆಫೆಸ್ಟೋಲ್‌ ಅನ್ನು ಹೊಂದಿದೆ, ಏಕೆಂದರೆ ತೆಳು ಕಾಗದದ ಶೋಧಕವನ್ನು ಉಪಯೋಗಿಸದೆ ಇದನ್ನು ತಯಾರಿಸಲಾಗುತ್ತದೆ. ಆದರೆ, ನೀವು ಒಂದು ಚಿಕ್ಕ ಕಪ್ಪನ್ನು ಉಪಯೋಗಿಸುವಲ್ಲಿ, ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುವ ಅದರ ಪ್ರಭಾವವು ಕಡಿಮೆಯಾಗಿರುತ್ತದೆ. ಕಡಿಮೆ ಎಸ್‌ಪ್ರೆಸೊ ಕಾಫಿಯಲ್ಲಿ ಕಡಿಮೆ ಕೆಫೆಸ್ಟೋಲ್‌ ಇರುತ್ತದೆ. ಅಂದರೆ, ಒಂದು ಕಪ್‌ ಕಾಫಿ ಒಂದೆರಡು ಮಿಲಿಗ್ರ್ಯಾಮ್‌ಗಳಷ್ಟು ಕೆಫೆಸ್ಟೋಲ್‌ ಅನ್ನು ಹೊಂದಿರುತ್ತದೆ. ಆದರೆ, ದಿನಕ್ಕೆ ಐದು ಬಾರಿ ಚಿಕ್ಕ ಕಪ್‌ನಲ್ಲಿ ಎಸ್‌ಪ್ರೆಸೊ ಕಾಫಿಯನ್ನು ಕುಡಿಯುವಲ್ಲಿ, ಇದು ದೇಹದ ಕೊಲೆಸ್ಟರಾಲ್‌ ಮಟ್ಟವನ್ನು 2 ಪ್ರತಿಶತದಷ್ಟು ಹೆಚ್ಚಿಸಬಲ್ಲದು ಎಂಬುದಾಗಿ ರೀಸರ್ಚ್‌ ರಿಪೋರ್ಟ್ಸ್‌ ವಾರ್ತಾಪತ್ರವು ಎಚ್ಚರಿಸುತ್ತದೆ.

ತೆಳು ಕಾಗದದ ಶೋಧಕವನ್ನು ಉಪಯೋಗಿಸಿ ಮಾಡಿದ ಕಾಫಿಯು ಕೆಫೆಸ್ಟೋಲ್‌ರಹಿತವಾಗಿರುತ್ತದೆ ಎಂಬುದೇ ಇದರ ಸಾರವಾಗಿದೆ.