ಮಾಹಿತಿ ಇರುವಲ್ಲಿ ಹೋಗಲು

ಮುಖ್ಯ ಕಾರ್ಯಾಲಯ-ಒಂದು ಐತಿಹಾಸಿಕ ನಿರ್ಮಾಣಕಾರ್ಯ

ಮುಖ್ಯ ಕಾರ್ಯಾಲಯ-ಒಂದು ಐತಿಹಾಸಿಕ ನಿರ್ಮಾಣಕಾರ್ಯ

ನ್ಯೂಯಾರ್ಕ್‌ನ ವಾರ್ವಿಕ್‌ನಲ್ಲಿ ಯೆಹೋವನ ಸಾಕ್ಷಿಗಳ ಹೊಸ ಮುಖ್ಯ ಕಾರ್ಯಾಲಯದ ನಿರ್ಮಾಣಕಾರ್ಯ ಸಾಗುತ್ತಿದೆ. ಶೆಡ್ಯೂಲಿಗನುಸಾರ ಎಲ್ಲಾ ಕೆಲಸ ಬರದಿಂದ ನಡೆಯಬೇಕಾಗಿದೆ. ಆ ಕಾರಣ ಅಮೆರಿಕದ ಮೂಲೆ ಮೂಲೆಯಿಂದ ಸ್ವಯಂಸೇವಕರು ಬಂದು ನೆರವು ನೀಡುತ್ತಿದ್ದಾರೆ. ಅವರು ಈ ಕೆಲಸವನ್ನು ಮನಪೂರ್ವಕವಾಗಿ, ಕಷ್ಟಪಟ್ಟು, ಸಂಬಳವನ್ನು ಸಹ ಅಪೇಕ್ಷಿಸದೇ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ಈ ಸೇವೆಯನ್ನು ದೇವರಿಗೆ ನೀಡುತ್ತಿರುವ ಕಾಣಿಕೆಯಾಗಿಯೂ ವೀಕ್ಷಿಸುತ್ತಾರೆ. ಇಂಥ ಮನೋಭಾವ ಅಪರೂಪವೇ ಸರಿ. ಈ ನಿರ್ಮಾಣಕಾರ್ಯದಲ್ಲಿ ಅವರು ಸಾಧಿಸುತ್ತಿರುವ ವಿಷಯಗಳನ್ನು ನೋಡಿ!