ಅನೇಕರ ಜೀವನದಲ್ಲಿ ಸುಧಾರಣೆ ತಂದ JW.ORG
jw.org ವೆಬ್‌ಸೈಟ್‌ನಿಂದ ಪ್ರಪಂಚದ ಮೂಲೆ ಮೂಲೆಯಲ್ಲಿರುವ ಜನರಿಗೆ ಸಹಾಯವಾಗುತ್ತಿದೆ. ಈ ರೀತಿ ಸಹಾಯ ಪಡೆದ ಅನೇಕರು ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಪತ್ರದ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. ಮೇ 2014ರೊಳಗೆ ಬಂದ ಪತ್ರಗಳಲ್ಲಿ ಕೆಲವನ್ನು ಈ ಕೆಳಗೆ ಕೊಡಲಾಗಿದೆ.
ಚಿಣ್ಣರಿಗೆ
“ನನಗೆ ನರ್ಸರಿಗೆ ಹೋಗುವ ಮಗನಿದ್ದಾನೆ. ಅವನು ಅಲ್ಲಿರುವ ಬೇರೆ ಮಕ್ಕಳ ಪೆನ್ಸಿಲ್, ಆಟದ ಸಾಮಾನು, ಇತರ ವಸ್ತುಗಳನ್ನು ಮನೆಗೆ ತರುತ್ತಿದ್ದ. ‘ನೀನು ಹೀಗೆಲ್ಲಾ ಕದಿಯಬಾರದು, ಹಾಗೆ ಮಾಡುವುದು ತುಂಬ ತಪ್ಪು ಪುಟ್ಟಾ’ ಅಂತ ಎಷ್ಟು ಹೇಳಿದ್ರೂ ಅವನು ಅದನ್ನೇ ಮಾಡುತ್ತಿದ್ದ. ನಮಗಂತೂ ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಒಂದು ಸಾರಿ ನಾವು jw.org ವೆಬ್‌ಸೈಟ್‌ನಲ್ಲಿದ್ದ ಕದಿಯಬಾರದು (ಇಂಗ್ಲಿಷ್) ಅನ್ನೋ ವಿಡಿಯೋ ಡೌನ್‌ಲೋಡ್ ಮಾಡಿ ನಮ್ಮ ಮಗನಿಗೆ ತೋರಿಸಿದೆವು. ಆ ವಿಡಿಯೋ ನೋಡಿದಾಗ, ಕದಿಯುವುದನ್ನು ದೇವರು ಇಷ್ಟಪಡಲ್ಲ, ಅದು ತಪ್ಪು ಅಂತ ಅವನಿಗೆ ಅರ್ಥ ಆಯಿತು. ತಾನು ಮನೆಗೆ ತಂದ ವಸ್ತುಗಳನ್ನೆಲ್ಲಾ ವಾಪಸ್ ಕೊಡುತ್ತೇನೆ ಅಂತ ಅವನು ಹೇಳಿದ. ಅದರ ನಂತರ ಅವನು ಕದಿಯಲೇ ಇಲ್ಲ. ಹೀಗೆ ಈ ವೆಬ್‌ಸೈಟ್‌ನಿಂದ ನಮಗೆ ತುಂಬ ಸಹಾಯವಾಯಿತು.”—ಆಫ್ರಿಕಾದ ಡಿ. ಎನ್.
“jw.org ವೆಬ್‌ಸೈಟ್‌ನಲ್ಲಿದ್ದ ಕದಿಯಬಾರದು (ಇಂಗ್ಲಿಷ್) ಅನ್ನೋ ವಿಡಿಯೋ . . . ನೋಡಿದಾಗ, ಕದಿಯುವುದನ್ನು ದೇವರು ಇಷ್ಟಪಡಲ್ಲ, ಅದು ತಪ್ಪು ಅಂತ ನನ್ನ ಮಗನಿಗೆ ಅರ್ಥ ಆಯಿತು”
“ನನ್ನ ಮಕ್ಕಳಿಗೆ ಈ ವೆಬ್‌ಸೈಟ್ ಅಂದರೆ ತುಂಬ ಇಷ್ಟ. ಅವರು ಅದರಿಂದ ಯಾವಾಗಲೂ ಆ್ಯನಿಮೇಶನ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ ನೋಡುತ್ತಿರುತ್ತಾರೆ. ಸುಳ್ಳುಹೇಳುವ ಮತ್ತು ಕದಿಯುವಂಥ ವಿಷಯಗಳ ಬಗ್ಗೆ ಬೈಬಲ್ ಏನು ಹೇಳುತ್ತದೆ ಅಂತ ತಿಳಿದುಕೊಂಡು, ಅದರ ಪ್ರಕಾರ ನಡೆದುಕೊಳ್ಳಲಿಕ್ಕೆ ಈ ವೆಬ್‌ಸೈಟ್ ಅವರಿಗೆ ತುಂಬ ಸಹಾಯ ಮಾಡುತ್ತಿದೆ. ಜೀವನದಲ್ಲಿ ಬೇಕಾದ ಎಷ್ಟೋ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಕಲಿಸುತ್ತದೆ. ಅಷ್ಟೇ ಅಲ್ಲದೆ ಮುಂದೊಂದು ದಿನ ಅವರು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.”—ವೆಸ್ಟ್ ಇಂಡೀಸ್‌ನ ಓ. ಡಬ್ಲ್ಯೂ.
ಶಾಲೆಗೆ ಹೋಗುವ ಮಕ್ಕಳಿಗೆ
“ಶಾಲೆಗೆ ಹೋಗುವುದೆಂದರೆ ನನಗೆ ಒಂಚೂರು ಇಷ್ಟ ಆಗುತ್ತಿರಲಿಲ್ಲ. ಶಾಲೆಗೆ ಹೋಗುವುದೇ ಬೇಡ ಅಂತ ನಿರ್ಧಾರ ಮಾಡಿದ್ದೆ. ಆದರೆ ಒಮ್ಮೆ ನಾನು jw.org ವೆಬ್‌ಸೈಟ್‌ನಲ್ಲಿ ‘ನಾನು ಶಾಲೆಗೆ ಹೋಗಲೇಬೇಕಾ?’ (ಇಂಗ್ಲಿಷ್) ಎಂಬ ಲೇಖನವನ್ನು ಓದಿದೆ. ಶಾಲೆಗೆ ಹೋಗುವುದರಿಂದ ನನಗೇ ಒಳ್ಳೇದು, ಮುಂದಿನ ಜೀವನಕ್ಕಾಗಿ ತರಬೇತಿ ಸಿಗುತ್ತದೆ ಮತ್ತು ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಅಂತ ಆಗ ನಾನು ತಿಳಿದುಕೊಂಡೆ.”—ಆಫ್ರಿಕಾದ ಎನ್. ಎಫ್.
“ಈ ವೆಬ್‌ಸೈಟ್‌ನಲ್ಲಿ ಯುವ ಜನರಿಗಾಗಿ ಅನೇಕ ಸಲಹೆಗಳಿವೆ. ಶಾಲೆಯಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಲು ಇದು ನನಗೆ ಸಹಾಯ ಮಾಡಿದೆ”
“ಈ ವೆಬ್‌ಸೈಟ್‌ನಲ್ಲಿ ಯುವ ಜನರಿಗಾಗಿ ಅನೇಕ ಸಲಹೆಗಳಿವೆ. ಶಾಲೆಯಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಲು ಇದು ನನಗೆ ಸಹಾಯ ಮಾಡಿದೆ. ಇಲ್ಲ ಸಲ್ಲದ ವಿಷಯಗಳಿಗೆ ಗಮನ ಕೊಡದೆ ನನ್ನ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡುವುದು ಹೇಗೆ ಅಂತ ಇದರಿಂದ ನಾನು ಕಲಿತಿದ್ದೇನೆ.”—ಆಫ್ರಿಕಾದ ಜಿ.
“ನನ್ನ ಸಹೋದ್ಯೋಗಿ ಒಬ್ಬಳ ಮಗಳಿಗೆ ಶಾಲೆಯಲ್ಲಿ ಮಕ್ಕಳು ರ್ಯಾಗಿಂಗ್ ಮಾಡುತ್ತಿದ್ದರು, ಅದರಲ್ಲೂ ಒಂದು ಹುಡುಗಿಯಂತೂ ತುಂಬ ಕಾಟ ಕೊಡುತ್ತಿದ್ದಳು. ಇದರಿಂದ ಅವಳ ಮಗಳು ಎಷ್ಟು ಹೆದರಿದ್ದಳೆಂದರೆ ಕೆಲವು ದಿನಗಳು ಶಾಲೆಗೆ ಹೋಗಲೇ ಇಲ್ಲ. ಆಗ ನಾನು ಆ ಸಹೋದ್ಯೋಗಿಗೆ jw.org ವೆಬ್‌ಸೈಟ್‌ನಲ್ಲಿನ ಬೀಟ್ ಎ ಬುಲ್ಲಿ ವಿದೌಟ್ ಯೂಸಿಂಗ್ ಯುವರ್ ಫಿಸ್ಟ್ಸ್ ಎಂಬ ‘ಚಲಿಸುವ ಚಿತ್ರಗಳಿಂದ ಪಾಠ’ದಲ್ಲಿದ್ದ ಕೆಲವು ಅಂಶಗಳ ಬಗ್ಗೆ ತಿಳಿಸಿದೆ. ಇತರರು ನಮ್ಮನ್ನು ಪೀಡಿಸುವಾಗ ನಾವು ಕೋಪಗೊಳ್ಳದೆ, ನಗುವವರೊಂದಿಗೆ ನಾವೂ ನಗಬೇಕು, ಆಗ ಪೀಡಿಸುವವರಿಗೆ ಏನು ಮಾಡಬೇಕೆಂದು ತಿಳಿಯದೆ ಸುಮ್ಮನಾಗುತ್ತಾರೆ ಎಂಬ ಅಂಶ ಅವಳಿಗೆ ತುಂಬ ಇಷ್ಟವಾಯಿತು. ಆಕೆ ಮನೆಗೆ ಹೋಗಿ ತನ್ನ ಮಗಳಿಗೆ ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕೆಂದು ತಿಳಿಸಿದಳು. ಇದರ ಪರಿಣಾಮ, ಅವಳ ಮಗಳು ಧೈರ್ಯದಿಂದ ಶಾಲೆಗೆ ಹೋದಳು. ದಿನಗಳು ಕಳೆದಂತೆ ಪರಿಸ್ಥಿತಿ ಬದಲಾಯಿತು, ಮುಂಚೆ ಕಾಟ ಕೊಡುತ್ತಿದ್ದ ಹುಡುಗಿ ಅವಳೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಲು ಆರಂಭಿಸಿದಳು.”—ಪೂರ್ವ ಯುರೋಪಿನ ವಿ. ಕೆ.
ಯುವ ಜನರಿಗೆ
“ವೆಬ್‌ಸೈಟ್‌ನಲ್ಲಿದ್ದ ‘ನಾನು ಯಾಕೆ ಬೇಕು ಬೇಕಂತ ಗಾಯ ಮಾಡಿಕೊಳ್ಳುತ್ತೇನೆ?’ (ಇಂಗ್ಲಿಷ್) ಎಂಬ ಲೇಖನಕ್ಕಾಗಿ ನಿಮಗೆ ತುಂಬ ಧನ್ಯವಾದಗಳು. ತುಂಬ ಸಮಯದಿಂದ ನನಗೆ ಈ ಸಮಸ್ಯೆ ಇತ್ತು. ‘ನನಗೆ ಮಾತ್ರ ಈ ಸಮಸ್ಯೆ ಇದೆ, ಆದ್ದರಿಂದ ಇದರ ಬಗ್ಗೆ ಬೇರೆಯವರಿಗೆ ಹೇಳಿದರೆ ಅವರಿಗದು ಅರ್ಥ ಆಗಲ್ಲ’ ಅಂತ ನಾನು ಅಂದುಕೊಂಡಿದ್ದೆ. ಆ ಲೇಖನದಲ್ಲಿದ್ದ ಅನುಭವಗಳಿಂದ ನನಗೆ ತುಂಬ ಸಹಾಯವಾಯಿತು. ನನ್ನನ್ನು ದೇವರು ಅರ್ಥ ಮಾಡಿಕೊಳ್ಳುತ್ತಾನೆ ಅಂತ ಗೊತ್ತಾಯಿತು.”—ಆಸ್ಟ್ರೇಲಿಯಾದ ಒಬ್ಬ ಯುವತಿ.
“ಆ ಲೇಖನದಲ್ಲಿದ್ದ ಅನುಭವಗಳಿಂದ ನನಗೆ ತುಂಬ ಸಹಾಯವಾಯಿತು. ನನ್ನನ್ನು ದೇವರು ಅರ್ಥ ಮಾಡಿಕೊಳ್ಳುತ್ತಾನೆ ಅಂತ ಗೊತ್ತಾಯಿತು”
“ಯುವ ಜನರಿಗೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಬೇಕಾದ ಸಹಾಯವನ್ನು jw.org ವೆಬ್‌ಸೈಟ್‌ನಿಂದ ತುಂಬ ಸುಲಭವಾಗಿ ಪಡೆದುಕೊಳ್ಳಬಹುದು. ಇದರಲ್ಲಿರುವ ಒಂದು ಲೇಖನದಿಂದ, ಜನರು ಹೇಗೆಲ್ಲಾ ಲೈಂಗಿಕ ಕಿರುಕುಳ ಕೊಡುತ್ತಾರೆ ಎಂದು ತಿಳಿದುಕೊಂಡೆ. ಆಗಲೇ ನನಗೆ ಗೊತ್ತಾಗಿದ್ದು, ನನಗೂ ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆಂದು. ಅಷ್ಟೇ ಅಲ್ಲದೆ, ಇದನ್ನು ನಾನು ಹೇಗೆ ಎದುರಿಸಬೇಕು ಎಂದು ಸಹ ಈ ಲೇಖನದಿಂದ ಕಲಿತೆ.”—ವೆಸ್ಟ್ ಇಂಡೀಸ್‌ನ ಟಿ. ಡಬ್ಲ್ಯೂ.
ಹೆತ್ತವರಿಗೆ
“ನನಗೆ ಒಬ್ಬ ಹದಿವಯಸ್ಸಿನ ಮಗನಿದ್ದಾನೆ. ಅವನು ಒಂದು ಸ್ಥಳದಲ್ಲಿ ನಿಲ್ಲುವುದೇ ಇಲ್ಲ. ಅವನು ಯಾವಾಗ ಏನು ಮಾಡುತ್ತಾನೆ ಅಂತ ಗೊತ್ತಾಗುವುದಿಲ್ಲ. ನನಗೆ ಅವನನ್ನು ಹೇಗೆ ಸರಿ ಮಾಡಬೇಕು ಅಂತ ಅರ್ಥನೇ ಆಗುತ್ತಿರಲಿಲ್ಲ. ಇದರಿಂದಾಗಿ ನಮ್ಮಿಬ್ಬರ ಮಧ್ಯೆ ಒಳ್ಳೆಯ ಸಂವಾದ ಇರಲಿಲ್ಲ. ಹೀಗಿರುವಾಗ, ಒಂದು ದಿನ ನಾನು jw.org ವೆಬ್‌ಸೈಟ್‌ನಲ್ಲಿ ದಂಪತಿ ಮತ್ತು ಹೆತ್ತವರಿಗಾಗಿ ಇರುವ ಪುಟವನ್ನು ತೆರೆದು ನೋಡಿದೆ. ಅದರಲ್ಲಿ ನನ್ನ ಪರಿಸ್ಥಿತಿಗೆ ಅನ್ವಯಿಸುವಂಥ ಅನೇಕ ಲೇಖನಗಳು ಇದ್ದವು. ಈ ಲೇಖನಗಳಿಂದ ನಾನು ನನ್ನ ಮಗನ ಜೊತೆ ಹೇಗೆ ಮಾತಾಡಬೇಕು ಅಂತ ಕಲಿತೆ. ಅವನಿಗೂ ಈ ವೆಬ್‌ಸೈಟ್‌ನಿಂದ ತುಂಬ ಪ್ರಯೋಜನವಾಗಿದೆ. ಈಗ ಅವನು ನನ್ನ ಹತ್ತಿರ ಮನಸ್ಸು ಬಿಚ್ಚಿ ಮಾತಾಡುತ್ತಾನೆ. ಎಲ್ಲವನ್ನೂ ನನ್ನ ಹತ್ತಿರ ಹೇಳಿಕೊಳ್ಳುತ್ತಾನೆ.”—ಆಫ್ರಿಕಾದ ಸಿ. ಬಿ.
“ನಮ್ಮ ಮಕ್ಕಳು ಯಾವುದಾದರೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನುವಾಗಲೇ ಈ ವೆಬ್‌ಸೈಟ್‌ನಲ್ಲಿ ಆ ಸಮಸ್ಯೆಯ ಬಗ್ಗೆ ಲೇಖನ ಬರುತ್ತದೆ. ಹೆಚ್ಚಿನ ಸಾರಿ ಇದೇ ರೀತಿ ತಕ್ಕ ಸಮಯಕ್ಕೆ ನಮಗೆ ಲೇಖನಗಳು ಸಿಕ್ಕಿವೆ”
“ನಾವು ಮಕ್ಕಳಿಗೆ jw.org ವೆಬ್‌ಸೈಟ್‌ನಿಂದ ಕಲಿಸುವಾಗ ಅದು ಅವರಿಗೆ ಕಟ್ಟುನಿಟ್ಟಾಗಿ ಇರುವುದಿಲ್ಲ, ಹಾಗಾಗಿ ಅವರದನ್ನು ತುಂಬ ಇಷ್ಟಪಡುತ್ತಾರೆ. ಉದಾಹರಣೆಗೆ, ‘ಚಲಿಸುವ ಚಿತ್ರಗಳಿಂದ ಪಾಠ’ದಲ್ಲಿ ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ಇದ್ದ ವಿಡಿಯೋ ನಮ್ಮ ಮಕ್ಕಳಿಗೆ ತುಂಬ ಸಹಾಯ ಮಾಡಿತು. ಸ್ನೇಹದ ಬಗ್ಗೆ ಸರಿಯಾದ ನೋಟ ಇಟ್ಟುಕೊಳ್ಳಲು ಮತ್ತು ತಮ್ಮ ಮೇಲೆ ಒಳ್ಳೆಯ ಪ್ರಭಾವ ಬೀರುವವರನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಕಲಿತುಕೊಂಡರು. ನಮ್ಮ ಮಕ್ಕಳು ಯಾವುದಾದರೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನುವಾಗಲೇ ಈ ವೆಬ್‌ಸೈಟ್‌ನಲ್ಲಿ ಆ ಸಮಸ್ಯೆಯ ಬಗ್ಗೆ ಲೇಖನ ಬರುತ್ತದೆ. ಹೆಚ್ಚಿನ ಸಾರಿ ಇದೇ ರೀತಿ ತಕ್ಕ ಸಮಯಕ್ಕೆ ನಮಗೆ ಲೇಖನಗಳು ಸಿಕ್ಕಿವೆ. ಇದರಲ್ಲಿ ತುಂಬ ಒಳ್ಳೆಯ ಸಲಹೆಗಳಿವೆ.”—ಯುರೋಪಿನ ಇ. ಎಲ್.
ವಿವಾಹಿತ ದಂಪತಿಗಳಿಗೆ
“ನಮ್ಮ ಮದುವೆ ಆಗಿ ಆರು ವರ್ಷವಾಗಿದೆ. ಎಲ್ಲ ದಂಪತಿಗಳ ಹಾಗೆ ಮದುವೆಯ ಆರಂಭದಲ್ಲಿ ನಮ್ಮಿಬ್ಬರ ಮಾತಾಡುವ ರೀತಿ, ಹಿನ್ನೆಲೆ, ಯೋಚನಾ ರೀತಿ ಭಿನ್ನವಾಗಿದ್ದವು. ನಾವು ಅವುಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. jw.org ವೆಬ್‌ಸೈಟ್‌ನಲ್ಲಿ, ‘ಮಾತು ಕಮ್ಮಿ ಮಾಡಿ ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ?’ ಎಂಬ ಲೇಖನ ನನ್ನ ಕಣ್ಣಿಗೆ ಬಿತ್ತು. ಸಂಗಾತಿ ಮಾತಾಡುವಾಗ ಚೆನ್ನಾಗಿ ಕೇಳಿಸಿಕೊಳ್ಳುವುದು ಹೇಗೆಂದು ಆ ಲೇಖನದಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದರು. ನಾನು ಆ ಲೇಖನವನ್ನು ಓದಿದೆ ಮತ್ತು ಓದಿದ ವಿಷಯವನ್ನು ನನ್ನ ಹೆಂಡತಿಗೂ ಹೇಳಿದೆ. ನಾವಿಬ್ಬರೂ ಆ ಸಲಹೆಗಳನ್ನು ಅನ್ವಯಿಸಿ, ಪ್ರಯೋಜನ ಪಡೆದೆವು.”—ವೆಸ್ಟ್ ಇಂಡೀಸ್‌ನ ಬಿ. ಬಿ.
“ನನ್ನ ವಿವಾಹ ಬಂಧ ಮುರಿಯದೆ ಉಳಿಯಲು ಕಾರಣವೇ ಈ ವೆಬ್‌ಸೈಟ್”
“ನಾನು ಕಳೆದ ವರ್ಷದಿಂದ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸ ಮಾಡುತ್ತಿದ್ದೇನೆ. jw.org ವೆಬ್‌ಸೈಟ್‌ಗಾಗಿ ನಿಮಗೆ ತುಂಬ ಧನ್ಯವಾದ ಹೇಳಲು ಬಯಸುತ್ತೇನೆ. ಈ ವೆಬ್‌ಸೈಟ್‌ನಿಂದ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ. ನನ್ನ ಕೋಪವನ್ನು ಹಿಡಿತದಲ್ಲಿಡುವುದು ಹೇಗೆ?, ಒಳ್ಳೆಯ ಗಂಡ ಮತ್ತು ತಂದೆ ಆಗಿರಲು ನಾನೇನು ಮಾಡಬೇಕು ಎಂದೂ ಕಲಿತೆ. ನನ್ನ ವಿವಾಹ ಬಂಧ ಮುರಿಯದೆ ಉಳಿಯಲು ಕಾರಣವೇ ಈ ವೆಬ್‌ಸೈಟ್.”—ವೆಸ್ಟ್ ಇಂಡೀಸ್‌ನ ಎಲ್. ಜಿ.
ಶ್ರವಣ ದೋಷ ಇರುವವರಿಗೆ
“jw.org ವೆಬ್‌ಸೈಟ್ ನನ್ನಲ್ಲಿ ಜೀವ ತುಂಬಿದೆ. ಅಮೆರಿಕನ್ ಸನ್ನೆ ಭಾಷೆಯ ವಿಡಿಯೋಗಳ ಮೂಲಕ ನನ್ನ ಸನ್ನೆ ಭಾಷೆ ಇನ್ನೂ ಉತ್ತಮವಾಗಿದೆ. ಜೀವನದಲ್ಲಿ ನಾನು ಯಾವುದೇ ಗುರಿಗಳನ್ನಿಟ್ಟರೂ ಅವುಗಳನ್ನು ತಲುಪಲು ಸಾಧ್ಯವಿಲ್ಲ ಅಂತ ನನಗೆ ಅನಿಸುತ್ತಿತ್ತು. ಆದರೆ, ನನ್ನ ಭಾಷೆಯಲ್ಲಿ ದೇವರ ವಾಕ್ಯ (ಇಂಗ್ಲಿಷ್) ಎಂಬ ವಿಡಿಯೋ ನೋಡಿದಾಗ ಅದು ನನ್ನನ್ನು ತುಂಬ ಪ್ರಭಾವಿಸಿತು. ನನ್ನ ಜೀವನದಲ್ಲಿ ಇಲ್ಲದ ವಿಷಯಗಳ ಮೇಲಲ್ಲ, ಬದಲಿಗೆ ಜೀವನದಲ್ಲಿ ನನಗೆ ಏನೆಲ್ಲಾ ಸಿಕ್ಕಿದೆಯೋ ಅವುಗಳ ಮೇಲೆ ನನ್ನ ಗಮನವನ್ನಿಡಬೇಕು ಎಂದು ನಿರ್ಣಯಿಸಿದೆ.”—ಆಫ್ರಿಕಾದ ಜೆ. ಎನ್.
“jw.org ವೆಬ್‌ಸೈಟ್ ನನ್ನಲ್ಲಿ ಜೀವ ತುಂಬಿದೆ”
“ಈ ವೆಬ್‌ಸೈಟ್ ನನಗೆ ಸಿಕ್ಕಿದ ಅಮೂಲ್ಯ ಮುತ್ತು. ನಾನೊಬ್ಬ ಸ್ವಯಂಸೇವಕಿಯಾಗಿದ್ದು ಶ್ರವಣ ದೋಷ ಇರುವವರಿಗೆ, ಅದರಲ್ಲೂ ಮುಖ್ಯವಾಗಿ ಶ್ರವಣ ದೋಷ ಇರುವ ಯುವ ಜನರಿಗೆ ಸಹಾಯ ಮಾಡುತ್ತೇನೆ. ಸನ್ನೆ ಭಾಷೆಯಲ್ಲಿ ಅನೇಕ ವಿಷಯಗಳು ಲಭ್ಯವಿವೆ. ಇವುಗಳು ನನಗೆ ಉತ್ತಮ ರೀತಿಯಲ್ಲಿ ಸನ್ನೆಗಳನ್ನು ಮಾಡಲು ಸಹಾಯ ಮಾಡಿವೆ. ಕುಟುಂಬದ ಜೊತೆ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಬಂಧ ಬೆಳೆಸಿ, ಕಾಪಾಡಿಕೊಳ್ಳಲು ಬಯಸುವವರಿಗೆ ಸಹಾಯ ಮಾಡುವಂತೆ ಈ ವೆಬ್‌ಸೈಟ್ ನನಗೆ ತರಬೇತಿ ಕೊಟ್ಟಿದೆ.”—ವೆಸ್ಟ್ ಇಂಡೀಸ್‌ನ ಕೆ. ಜೆ.
ಅಂಧರಿಗೆ
“ನನಗೆ ಕಣ್ಣು ಕಾಣಿಸುವುದಿಲ್ಲ. ಆದರೂ jw.org ವೆಬ್‌ಸೈಟ್‌ನಿಂದ ತುಂಬ ಪ್ರಯೋಜನವಾಗಿದೆ. ಹೊಸ ಮಾಹಿತಿಗಳನ್ನು ಅಂಚೆ ಮೂಲಕ ಪಡೆಯಲು ತಿಂಗಳಾನುಗಟ್ಟಲೆ ಕಾಯಬೇಕಿತ್ತು. ಆದರೆ ಈಗ jw.org ವೆಬ್‌ಸೈಟ್‌ನಿಂದ ನನಗೆ ಈ ಎಲ್ಲಾ ಮಾಹಿತಿ ತುಂಬ ಬೇಗ ಸಿಗುತ್ತಿದೆ. ನನ್ನ ಕುಟುಂಬ ಜೀವನ ಕೂಡ ಚೆನ್ನಾಗಾಗಿದೆ. ಅಷ್ಟೇ ಅಲ್ಲ, ಸಮಾಜಕ್ಕೆ ಪ್ರಯೋಜನವಾಗುವಂತೆ ನನ್ನನ್ನು ರೂಪಿಸಿದೆ. ದೃಷ್ಟಿ ಇರುವವರಿಗೆ ಹೊಸ ಮಾಹಿತಿ ಯಾವಾಗ ಸಿಗುತ್ತದೋ ಅದೇ ಸಮಯದಲ್ಲಿ ನನಗೂ ಸಿಗುತ್ತಿದೆ.”—ದಕ್ಷಿಣ ಅಮೆರಿಕದ ಸಿ. ಎ.
“ಈ ವೆಬ್‌ಸೈಟ್‌ನಿಂದಾಗಿ ನನ್ನ ಕುಟುಂಬ ಜೀವನ ಕೂಡ ಚೆನ್ನಾಗಾಗಿದೆ. ಅಷ್ಟೇ ಅಲ್ಲ, ಸಮಾಜಕ್ಕೆ ಪ್ರಯೋಜನವಾಗುವಂತೆ ಇದು ನನ್ನನ್ನು ರೂಪಿಸಿದೆ”
“ಬ್ರೇಲ್ ಲಿಪಿ ಓದಲು ಬಾರದವರಿಗೆ ಅಥವಾ ಬ್ರೇಲ್ ಲಿಪಿಯಲ್ಲಿ ಪುಸ್ತಕಗಳನ್ನು ಖರೀದಿಸಲು ಹಣ ಇಲ್ಲದವರಿಗೆ jw.org ವೆಬ್‌ಸೈಟ್ ಒಂದು ಅಮೂಲ್ಯ ಉಡುಗೊರೆಯಾಗಿದೆ. ಆಡಿಯೋ ರೆಕಾರ್ಡಿಂಗ್‌ನ ಮೂಲಕ ಅಂಧರು ಬೇರೆ ಬೇರೆ ವಿಷಯಗಳ ಬಗ್ಗೆ ಹೊಸ ಹೊಸ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ. ಯಾವುದೇ ಪಕ್ಷಪಾತ ಇಲ್ಲದೆ ಎಲ್ಲಾ ರೀತಿಯ ಜನರ ಪ್ರಯೋಜನಕ್ಕಾಗಿ ಈ ವೆಬ್‌ಸೈಟನ್ನು ರೂಪಿಸಲಾಗಿದೆ. ನಮ್ಮಂಥ ಅಂಧರಿಗೆ ಕೂಡ ಸಮಾಜದಲ್ಲಿ ಸ್ಥಾನ-ಮಾನ ಇದೆ ಎಂಬ ಭಾವನೆಯನ್ನು ಈ ವೆಬ್‌ಸೈಟ್ ನಮ್ಮಲ್ಲಿ ಮೂಡಿಸಿದೆ.”—ಆಫ್ರಿಕಾದ ಆರ್. ಡಿ.
ಆಧ್ಯಾತ್ಮಿಕವಾಗಿ ಹಸಿದವರಿಗೆ
“ನಿಮ್ಮ ವೆಬ್‌ಸೈಟ್‌ಗೂ ಇತರ ಧಾರ್ಮಿಕ ವೆಬ್‌ಸೈಟ್‌ಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಆ ವೆಬ್‌ಸೈಟ್‌ಗಳು ಧಾರ್ಮಿಕ ಮುಖಂಡರಿಗೆ ಮಾತ್ರ ಅರ್ಥವಾಗುವಂಥ ಪದಗಳನ್ನು, ವಾಕ್ಯಗಳನ್ನು ಉಪಯೋಗಿಸುತ್ತವೆ. ಆದರೆ ನಿಮ್ಮ ವೆಬ್‌ಸೈಟ್ ಹಾಗಿಲ್ಲ. ಯಾವುದೇ ವಿಷಯವನ್ನು ಮಿತಿಮೀರಿ ವಿವರಿಸುವುದಿಲ್ಲ. ಬದಲಿಗೆ ಅದರಲ್ಲಿರುವ ಮಾಹಿತಿ ತುಂಬ ಸರಳ ಮತ್ತು ನೇರವಾಗಿದೆ. ಅದರಲ್ಲಿ ಕಷ್ಟದ ಪದಗಳಿಲ್ಲ, ತತ್ವಜ್ಞಾನಿಗಳಂತೆ ಬರೆಯಲಾಗಿಲ್ಲ. ಆದ್ದರಿಂದ ಓದುಗರಿಗೆ ‘ಧಾರ್ಮಿಕ ನಂಬಿಕೆಗಳು ಅರ್ಥನೇ ಆಗುವುದಿಲ್ಲ, ತುಂಬ ಕಷ್ಟ’ ಅಂತ ಅನಿಸುವುದಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಸಹ ಧಾರ್ಮಿಕ ವಿಷಯಗಳನ್ನು ಅರ್ಥಮಾಡಿಕೊಂಡು ನಂಬಿಕೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂಬ ಭಾವನೆಯನ್ನು ಮೂಡಿಸುತ್ತದೆ.”—ಏಷ್ಯಾದ ಎ. ಜಿ.
“ನಿಮ್ಮ ವೆಬ್‌ಸೈಟ್‌ನಲ್ಲಿರುವ ಮಾಹಿತಿ ತುಂಬ ಸರಳ ಮತ್ತು ನೇರವಾಗಿದೆ . . . ಒಬ್ಬ ಸಾಮಾನ್ಯ ವ್ಯಕ್ತಿ ಸಹ ಧಾರ್ಮಿಕ ವಿಷಯಗಳನ್ನು ಅರ್ಥಮಾಡಿಕೊಂಡು ನಂಬಿಕೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂಬ ಭಾವನೆಯನ್ನು ಮೂಡಿಸುತ್ತದೆ”
“jw.org ವೆಬ್‌ಸೈಟ್ ಇಲ್ಲದೇ ಇದ್ದಿದ್ದರೆ ನನ್ನ ಜೀವನ ಏನಾಗುತ್ತಿತ್ತೋ ನನಗೇ ಗೊತ್ತಿಲ್ಲ. ಜನರಿಗೆ ದೇವರ ಬಗ್ಗೆ ಸರಿಯಾದ ಜ್ಞಾನ ಇಲ್ಲ, ಆದರೆ ಈ ವೆಬ್‌ಸೈಟ್ ನಮಗದನ್ನು ಕೊಟ್ಟಿದೆ. ಈ ವೆಬ್‌ಸೈಟ್ ಮೂಲಕ ಯಾವುದೇ ಒಂದು ವಿಷಯದ ಬಗ್ಗೆ ದೇವರ ನೋಟ ಏನೆಂದು ಕ್ಷಣ ಮಾತ್ರದಲ್ಲಿ ಓದಲು ಅಥವಾ ಕೇಳಿಸಿಕೊಳ್ಳಲು ಸಾಧ್ಯವಾಗಿದೆ. ಜೀವನದ ಅನೇಕ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಸಿಗುತ್ತದೆ.”—ವೆಸ್ಟ್ ಇಂಡೀಸ್‌ನ ಜೆ. ಸಿ.
“ನಾನು ದಕ್ಷಿಣ ಅಮೆರಿಕದ ಕಾಡಿನ ಮಧ್ಯದಲ್ಲಿ ವಾಸಿಸುತ್ತಿದ್ದರೂ ಈ ವೆಬ್‌ಸೈಟ್ ಮೂಲಕ ನನಗೆ ದೇವರ ಮಾರ್ಗದರ್ಶನ ಸಿಗುತ್ತಿದೆ. ಅದಕ್ಕಾಗಿ ತುಂಬ ಧನ್ಯವಾದಗಳು. ಈ ವೆಬ್‌ಸೈಟ್ ಇಲ್ಲದಿದ್ದರೆ ನನ್ನ ಜೀವನಕ್ಕೆ ಗೊತ್ತು ಗುರಿ ಅನ್ನೋದೇ ಇರುತ್ತಿರಲಿಲ್ಲ.”—ದಕ್ಷಿಣ ಅಮೆರಿಕದ ಎಮ್. ಎಫ್.