ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 6-7

ನಾನು ಫರೋಹನಿಗೆ ಏನು ಮಾಡ್ತೀನಿ ಅಂತ ನಿನಗೆ ತೋರಿಸ್ತೀನಿ

ನಾನು ಫರೋಹನಿಗೆ ಏನು ಮಾಡ್ತೀನಿ ಅಂತ ನಿನಗೆ ತೋರಿಸ್ತೀನಿ

6:1, 6, 7; 7:4, 5

ಈಜಿಪ್ಟಿನಲ್ಲಿ ಬಾಧೆಗಳನ್ನ ತರ್ತೀನಿ ಮತ್ತು ಇಸ್ರಾಯೇಲ್ಯರನ್ನು ಗುಲಾಮಗಿರಿಯಿಂದ ಬಿಡಿಸ್ತೀನಿ ಅಂತ ಯೆಹೋವನು ಇಸ್ರಾಯೇಲ್ಯರಿಗೆ ಮೊದಲೇ ಹೇಳಿದ್ದನು. ಇಸ್ರಾಯೇಲ್ಯರು ಹಿಂದೆಂದೂ ನೋಡಿರದ ವಿಧಗಳಲ್ಲಿ ಯೆಹೋವನು ತನ್ನ ಶಕ್ತಿಯನ್ನ ಪ್ರದರ್ಶಿಸಲಿದ್ದನು. ಅಷ್ಟೇ ಅಲ್ಲ ಈಜಿಪ್ಟಿನ ಜನರಿಗೆ ಯೆಹೋವನೇ ಸತ್ಯ ದೇವರು ಅನ್ನೋ ನಿಜಾಂಶ ಗೊತ್ತಾಗಲಿತ್ತು. ಯೆಹೋವನು ಕೊಟ್ಟ ಮಾತು ನೆರವೇರೋದನ್ನು ನೋಡುವಾಗ ಇಸ್ರಾಯೇಲ್ಯರ ನಂಬಿಕೆ ಇನ್ನಷ್ಟು ಹೆಚ್ಚಾಯ್ತು. ಈಜಿಪ್ಟಿನವರ ಆರಾಧನಾ ರೀತಿಯನ್ನು ಬಿಟ್ಟುಬಿಡಲು ಸಹ ಇಸ್ರಾಯೇಲ್ಯರಿಗೆ ಇದು ಸಹಾಯ ಮಾಡಿತು.

ಬೈಬಲಿನಲ್ಲಿ ಇರೋ ಈ ಘಟನೆ ನಿಮ್ಮ ನಂಬಿಕೆಯನ್ನು ಹೇಗೆ ಬಲಪಡಿಸುತ್ತೆ?