ಯೇಸುವಿನ ಜೀವನಕಥೆ
ದೇವರ ಮಗ ಮತ್ತು ನಮ್ಮ ರಕ್ಷಕನಾಗಿರೋ ಯೇಸು ಕ್ರಿಸ್ತನ ಬಗ್ಗೆ ಈ ವಿಡಿಯೋ ಸರಣಿಯಲ್ಲಿ ಕಲಿರಿ.
ಸಂಚಿಕೆ 1: ಲೋಕದ ನಿಜವಾದ ಬೆಳಕು
ಆದಾಮನಿಂದ ಬಂದ ಪಾಪದಿಂದ ಮನುಷ್ಯರನ್ನ ಯಾರು ಕಾಪಾಡ್ತಾರೆ? ಮೆಸ್ಸೀಯ ಒಬ್ಬನೇ ಅದಕ್ಕೆ ದಾರಿ.
ಸಂಚಿಕೆ 2: “ಇವನು ನನ್ನ ಪ್ರೀತಿಯ ಮಗ”
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮೆಸ್ಸೀಯನಿಗಾಗಿ ದಾರಿ ಸಿದ್ಧ ಮಾಡ್ತಾನೆ. ಯೇಸು ಭೂಮಿ ಮೇಲೆ ಸೇವೆ ಮಾಡಿದಾಗ ನಡೆದ ಅದ್ಭುತವಾದ ಘಟನೆಗಳನ್ನ ನೋಡಿ!
ಸಂಚಿಕೆ 3: “ನಾನೇ ಅವನು”
ಯೇಸು ಮೆಸ್ಸೀಯನಾಗಿ ತನ್ನ ಪಾತ್ರದ ಬಗ್ಗೆ ನಿಕೊದೇಮನಿಗೆ, ಸಮಾರ್ಯದ ಒಬ್ಬ ಸ್ತ್ರೀಗೆ ಮತ್ತು ನಜರೇತಿನ ಜನ್ರಿಗೆ ಹೇಳ್ತಾನೆ. ಆದ್ರೆ ಕೆಲವು ಒಳ್ಳೆ ಮನಸ್ಸಿನ ಜನ್ರು ಮಾತ್ರ ಆತನನ್ನ ಮೆಸ್ಸೀಯ ಅಂತ ಒಪ್ಕೊಳ್ತಾರೆ. ಯೇಸು ಒಂದು ದೊಡ್ಡ ಅದ್ಭುತ ಮಾಡಿದ್ಮೇಲೆ ದೀನರಾಗಿದ್ದ ಮೀನುಗಾರರನ್ನ ತನ್ನ ಶಿಷ್ಯರಾಗೋಕೆ ಕರೆದನು.

