ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

“ಕೊನೆ ದಿನಗಳ” ಕೊನೆ ಭಾಗದಲ್ಲಿರುವಾಗ ತಯಾರಾಗಿರಿ

“ಕೊನೆ ದಿನಗಳ” ಕೊನೆ ಭಾಗದಲ್ಲಿರುವಾಗ ತಯಾರಾಗಿರಿ

ನಾವು “ಕೊನೆ ದಿನಗಳ” ಕೊನೆ ಭಾಗದಲ್ಲಿ ಇರೋದ್ರಿಂದ ಕಷ್ಟ, ತೊಂದರೆಗಳು ಇನ್ನೂ ಜಾಸ್ತಿಯಾಗುತ್ತೆ ಅಂತ ಗೊತ್ತು. (2ತಿಮೊ 3:1; ಮತ್ತಾ 24:8 ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ) ವಿಪತ್ತಿನ ಸಮಯದಲ್ಲಿ ನಮ್ಮ ಜೀವಗಳನ್ನ ಕಾಪಾಡಿಕೊಳ್ಳಲು ಬೇಕಾದ ನಿರ್ದೇಶನಗಳು ಸಂಘಟನೆಯಿಂದ ಸರಿಯಾದ ಸಮಯಕ್ಕೆ ಸಿಗುತ್ತೆ. ವಿಪತ್ತು ಬಂದಾಗ ನಮ್ಮ ಜೀವ ಉಳಿಬೇಕಂದ್ರೆ ಈಗ ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಿದ್ಧರಾಗಿರಲು ಸಂಘಟನೆ ಕೊಟ್ಟಿರೋ ನಿರ್ದೇಶನಗಳನ್ನ ಯಾವಾಗಲೂ ಪಾಲಿಸಬೇಕು.—ಲೂಕ 16:10.

 • ಆಧ್ಯಾತ್ಮಿಕವಾಗಿ ತಯಾರಾಗಿರಿ: ಒಳ್ಳೇ ಆಧ್ಯಾತ್ಮಿಕ ರೂಢಿ ಬೆಳೆಸಿಕೊಳ್ಳಿ. ಬೇರೆ ಬೇರೆ ವಿಧಾನಗಳಲ್ಲಿ ಸೇವೆ ಮಾಡೋದನ್ನ ಕಲಿಯಿರಿ. ಸಹೋದರ ಸಹೋದರಿಯರಿಂದ ಸ್ವಲ್ಪ ಸಮಯ ದೂರವಿರಬೇಕಾದ ಪರಿಸ್ಥಿತಿಯಲ್ಲೂ ಭಯಪಡಬೇಡಿ. (ಯೆಶಾ 30:15) ಸಹೋದರ ಸಹೋದರಿಯರು ನಮ್ಮಿಂದ ದೂರ ಇದ್ರೂ ಯೆಹೋವ ಮತ್ತು ಯೇಸು ಕ್ರಿಸ್ತ ಯಾವಾಗಲೂ ನಮ್ಮ ಜೊತೆ ಇರ್ತಾರೆ ಅಂತ ನೆನಪಲ್ಲಿಡಿ.—ಸಂಘಟಿತರು ಪುಟ 162 ಪ್ಯಾರ 15-17

 • ಶಾರೀರಿಕವಾಗಿ ತಯಾರಾಗಿರಿ: ಪ್ರತಿ ಕುಟುಂಬ ಎಮರ್ಜೆನ್ಸಿ ಬ್ಯಾಗ್‌ ಅಥವಾ ಗೋ ಬ್ಯಾಗ್‌ ರೆಡಿ ಇಡೋದ್ರ ಜೊತೆಗೆ ಸಾಕಷ್ಟು ಆಹಾರ, ನೀರು, ಔಷಧಿ ಮತ್ತು ಇತರ ಅವಶ್ಯ ವಸ್ತುಗಳನ್ನೂ ಶೇಖರಿಸಿಡಬೇಕು. ಹೀಗೆ ಮಾಡಿದ್ರೆ ತುಂಬಾ ಸಮಯದವರೆಗೆ ಬೇರೆ ಕಡೆ ಆಶ್ರಯ ಪಡೆಯುವ ಪರಿಸ್ಥಿತಿ ಬಂದಾಗ ಸಹಾಯ ಆಗುತ್ತೆ.—ಜ್ಞಾನೋ 22:3; ಎಚ್ಚರ!17.5-E ಪುಟ 4, 6

ವಿಪತ್ತು ಬರುವ ಮುಂಚೆನೇ ತಯಾರಾಗಿರಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ :

 • ವಿಪತ್ತಿನ ಸಮಯದಲ್ಲಿ ಯೆಹೋವನ ಸಹಾಯ ಪಡೀಬೇಕಂದ್ರೆ ನಾವೇನು ಮಾಡಬೇಕು?

 • ನಾವು ಯಾಕೆ . . .

  • ಹಿರಿಯರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು?

  • ಒಂದು ಎಮರ್ಜೆನ್ಸಿ ಬ್ಯಾಗ್‌ ರೆಡಿ ಇಟ್ಟುಕೊಳ್ಳಬೇಕು?

  • ಮುಂಚೆನೇ ಬೇರೆ ಬೇರೆ ತುರ್ತು ಸನ್ನಿವೇಶಗಳ ಬಗ್ಗೆ ಚರ್ಚಿಸಿ ಅಂಥ ಸಮಯಗಳಲ್ಲಿ ಏನು ಮಾಡಬೇಕು ಅಂತ ನಿರ್ಧರಿಸಬೇಕು?

 • ವಿಪತ್ತಿನ ಸಮಯದಲ್ಲಿ ನಾವು ಬೇರೆಯವರಿಗೆ ಯಾವ ಮೂರು ವಿಧಗಳಲ್ಲಿ ಸಹಾಯ ಮಾಡಬಹುದು?

ನಿಮ್ಮನ್ನೇ ಕೇಳಿಕೊಳ್ಳಿ, ‘ಕೋವಿಡ್‌-19 ಮಹಾ ಪಿಡುಗಿನಿಂದ ನಾನೇನು ಕಲಿತೆ? ಯಾವುದೇ ರೀತಿಯ ವಿಪತ್ತು ಬರುವ ಮುಂಚೆ ನಾನು ಹೇಗೆ ತಯಾರಿರಬಹುದು?’