ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಮದ್ಯ ಸೇವನೆಯ ಬಗ್ಗೆ ಚೆನ್ನಾಗಿ ಯೋಚಿಸಿ ತೀರ್ಮಾನ ಮಾಡಿ

ಮದ್ಯ ಸೇವನೆಯ ಬಗ್ಗೆ ಚೆನ್ನಾಗಿ ಯೋಚಿಸಿ ತೀರ್ಮಾನ ಮಾಡಿ

ಎಲ್ಲಾ ಕ್ರೈಸ್ತರು ಮದ್ಯ ಸೇವನೆಯ ವಿಷ್ಯದಲ್ಲಿ ಸ್ವನಿಯಂತ್ರಣ ತೋರಿಸಬೇಕು. (ಜ್ಞಾನೋ 23:20, 29-35; 1ಕೊರಿಂ 6:9, 10) ಒಬ್ಬ ಕ್ರೈಸ್ತನು ಮದ್ಯ ಸೇವಿಸಲು ಬಯಸೋದಾದ್ರೆ ಅದನ್ನ ಮಿತಿಮೀರಿ ಸೇವಿಸಬಾರಾದು. ಮದ್ಯ ಸೇವನೆ ಒಂದು ಚಟ ಆಗಬಾರದು. ಮದ್ಯ ಇಲ್ಲದೆ ಜೀವಿಸೋಕೇ ಆಗಲ್ಲ ಅನ್ನೋ ತರ ಇರಬಾರದು. ಅಷ್ಟೇ ಅಲ್ಲ ಅದು ಬೇರೆಯವರನ್ನ ಸಹ ಎಡವಿಸಬಾರದು. (1ಕೊರಿಂ 10:23, 24; 1ತಿಮೊ 5:23) ನಾವು ಯಾರನ್ನೂ ಮದ್ಯ ಸೇವಿಸಲು ಒತ್ತಾಯಿಸಬಾರದು, ವಿಶೇಷವಾಗಿ ಯೌವನಸ್ಥರನ್ನ.

ಕುಡಿಯೋಕೆ ಮುಂಚೆ ಯೋಚನೆ ಮಾಡಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಕುಡಿಯೋದ್ರ ವಿಷ್ಯದಲ್ಲಿ ಸರ್ಕಾರ ಹಾಕುವ ನಿಯಮಗಳನ್ನ ಎಲ್ಲಾ ಕ್ರೈಸ್ತರು ಯಾಕೆ ಪಾಲಿಸಬೇಕು?—ರೋಮ 13:1-4

  • ಬೇರೆಯವರು ನಮ್ಮನ್ನ ಕುಡಿಯೋಕೆ ಒತ್ತಾಯ ಮಾಡಿದ್ರೆ ನಾವು ಯಾಕೆ ‘ಇಲ್ಲ, ನಂಗೆ ಬೇಡ’ ಅಂತ ಹೇಳಬೇಕು?—ರೋಮ 6:16

  • ಮದ್ಯ ಸೇವನೆಯಿಂದ ಆಗೋ ಕೆಟ್ಟ ಪರಿಣಾಮಗಳಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದು?