ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

“ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”

“ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”

ಯೆಹೋವನ ಮಾತಿಗೆ ವಿಧೇಯರಾಗಿ. ನಮ್ಮ ವಿಧೇಯತೆಗೆ ಮುಖ್ಯ ಕಾರಣ ಆತನ ಮೇಲಿರೋ ಪ್ರೀತಿ ಮತ್ತು ಗೌರವ ಆಗಿರಬೇಕು (ಧರ್ಮೋ 10:12; ಕಾವಲಿನಬುರುಜು10 7/1 ಪುಟ 16 ಪ್ಯಾರ 3-4)

ನಾವು ವಿಧೇಯತೆ ತೋರಿಸಿದ್ರೆ ಯೆಹೋವನು ನಮ್ಮನ್ನ ಆಶೀರ್ವದಿಸುತ್ತಾನೆ (ಧರ್ಮೋ 10:13; ಕಾವಲಿನಬುರುಜು10 7/1 ಪುಟ 16 ಪ್ಯಾರ 6)

ಯೆಹೋವನು ನಾವು ಆತನಿಗೆ ಹತ್ರ ಆಗಬೇಕು ಅಂತ ಬಯಸ್ತಾನೆ (ಧರ್ಮೋ 10:15; ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 16 ಪ್ಯಾರ 2)

ಯೆಹೋವನು ನಾವು ಆತನ ಮಾತನ್ನ ಕೇಳಲೇಬೇಕು ಅಂತ ಒತ್ತಾಯ ಮಾಡಲ್ಲ. ಬದಲಿಗೆ ನಾವು ಆತನನ್ನ ಪ್ರೀತಿಸಬೇಕು ಮತ್ತು “ಮನಸಾರೆ” ಆತನ ಮಾತು ಕೇಳಬೇಕು ಅಂತ ಇಷ್ಟಪಡ್ತಾನೆ. (ರೋಮ 6:17) ಯೆಹೋವನ ಸೇವೆಯನ್ನ ಮನಸಾರೆ ಮಾಡುವವರ ಜೀವನದಲ್ಲಿ ಸಂತೋಷ ಇರುತ್ತೆ.