ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಕುಟುಂಬದಲ್ಲಿ ಪ್ರೀತಿ ತೋರಿಸಿ

ಕುಟುಂಬದಲ್ಲಿ ಪ್ರೀತಿ ತೋರಿಸಿ

ಒಂದು ಕುಟುಂಬದಲ್ಲಿ ಪ್ರೀತಿ ತುಂಬಾನೇ ಮುಖ್ಯ. ಪ್ರೀತಿ ಇಲ್ಲ ಅಂದ್ರೆ ಕುಟುಂಬದಲ್ಲಿ ಐಕ್ಯತೆ ಇರಲ್ಲ. ಒಬ್ರಿಗೊಬ್ರು ಸಹಕಾರ ಕೊಡೋದು ಕಷ್ಟ ಆಗುತ್ತೆ. ಗಂಡ, ಹೆಂಡತಿ ಮತ್ತು ಅಪ್ಪ-ಅಮ್ಮ ಕುಟುಂಬದಲ್ಲಿ ಹೇಗೆ ಪ್ರೀತಿ ತೋರಿಸಬಹುದು?

ತನ್ನ ಹೆಂಡತಿಯನ್ನ ಪ್ರೀತಿಸೋ ಗಂಡ ಅವಳ ಅವಶ್ಯಕತೆಗಳನ್ನ ಪೂರೈಸ್ತಾನೆ, ಅವಳ ಅಭಿಪ್ರಾಯಕ್ಕೆ ಕಿವಿಗೊಡ್ತಾನೆ ಮತ್ತು ಅವಳ ಭಾವನೆಗಳನ್ನ ಅರ್ಥಮಾಡಿಕೊಳ್ತಾನೆ. (ಎಫೆ 5:28, 29) ಅವನು ತನ್ನ ಕುಟುಂಬದ ಸದಸ್ಯರಿಗೆ ಊಟ ಬಟ್ಟೆಗಳನ್ನ ಒದಗಿಸುತ್ತಾ ಅವರನ್ನ ಚೆನ್ನಾಗಿ ನೋಡ್ಕೊಳ್ತಾನೆ. ಅವರು ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಸಹಾಯ ಮಾಡ್ತಾನೆ. ಪ್ರತಿ ವಾರ ತಪ್ಪದೇ ಕುಟುಂಬ ಆರಾಧನೆ ನಡೆಸುತ್ತಾನೆ. (1ತಿಮೊ 5:8) ತನ್ನ ಗಂಡನನ್ನ ಪ್ರೀತಿಸೋ ಹೆಂಡತಿ ಅವನಿಗೆ ಅಧೀನತೆ ತೋರಿಸ್ತಾಳೆ, ಅವನು ಮಾಡಿದ ನಿರ್ಣಯಗಳನ್ನ ಒಪ್ಪಿಕೊಳ್ತಾಳೆ ಮತ್ತು “ಆಳವಾದ ಗೌರವ” ಕೊಡ್ತಾಳೆ. (ಎಫೆ 5:22, 33; 1ಪೇತ್ರ 3:1-6) ಗಂಡ-ಹೆಂಡತಿ ಇಬ್ರೂ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾರೆ. (ಎಫೆ 4:32) ತಮ್ಮ ಮಕ್ಕಳನ್ನ ಪ್ರೀತಿಸೋ ಅಪ್ಪ-ಅಮ್ಮ ಭೇದಭಾವ ಮಾಡದೆ ಎಲ್ಲಾ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಾರೆ ಮತ್ತು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಅವರಿಗೆ ಕಲಿಸ್ತಾರೆ. (ಧರ್ಮೋ 6:6, 7; ಎಫೆ 6:4) ಅಷ್ಟೇ ಅಲ್ಲ ಮಕ್ಕಳು ಶಾಲೆಯಲ್ಲಿ ಯಾವೆಲ್ಲಾ ಸಮಸ್ಯೆಗಳನ್ನ ಎದುರಿಸ್ತಿದ್ದಾರೆ, ಸ್ನೇಹಿತರಿಂದ ಒತ್ತಡ ಬಂದಾಗ ಅದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದಕ್ಕೂ ಗಮನ ಕೊಡ್ತಾರೆ ಮತ್ತು ಬೇಕಾದ ಸಹಾಯ ಮಾಡ್ತಾರೆ. ಕುಟುಂಬದಲ್ಲಿ ಎಷ್ಟು ಪ್ರೀತಿ ಇರುತ್ತೋ ಅಷ್ಟು ಸಂತೋಷ ಮತ್ತು ಭದ್ರತೆನೂ ಇರುತ್ತೆ.

ಕುಟುಂಬದಲ್ಲಿ ಶಾಶ್ವತ ಪ್ರೀತಿ ತೋರಿಸಿ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ತನ್ನ ಹೆಂಡತಿಯನ್ನ ಪ್ರೀತಿಸೋ ಗಂಡ ಅವಳನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ಹೇಗೆ ತೋರಿಸ್ತಾನೆ?

  • ತನ್ನ ಗಂಡನನ್ನ ಪ್ರೀತಿಸೋ ಹೆಂಡತಿ ಅವನಿಗೆ ಆಳವಾದ ಗೌರವ ಹೇಗೆ ತೋರಿಸ್ತಾಳೆ?

  • ತಮ್ಮ ಮಕ್ಕಳನ್ನ ಪ್ರೀತಿಸೋ ಅಪ್ಪ-ಅಮ್ಮ ಅವರ ಹೃದಯದಲ್ಲಿ ದೇವರ ಮಾತುಗಳನ್ನ ನಾಟಿಸಲು ಏನು ಮಾಡ್ತಾರೆ?