ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ

ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ

ಕೋರಹನಲ್ಲಿ ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಇದ್ದಿದ್ರಿಂದ ಯೆಹೋವನ ಏರ್ಪಾಡಿನ ವಿರುದ್ಧ ತಿರುಗಿಬಿದ್ದ (ಅರ 16:1-3; ಕಾವಲಿನಬುರುಜು11 9/15 ಪುಟ 27 ಪ್ಯಾರ 12)

ಕೋರಹನಿಗೆ ದೇವರು ಹಲವಾರು ಸುಯೋಗಗಳನ್ನ ಕೊಟ್ಟಿದ್ದ ಮತ್ತು ಒಳ್ಳೇ ಸ್ಥಾನದಲ್ಲಿ ಇಟ್ಟಿದ್ದ. ಇಷ್ಟೆಲ್ಲ ಇದ್ರೂ ಕೋರಹನಿಗೆ ತೃಪ್ತಿ ಇರ್ಲಿಲ್ಲ (ಅರ 16:8-10; ಕಾವಲಿನಬುರುಜು11 9/15 ಪುಟ 27 ಪ್ಯಾರ 11)

ಕೋರಹನಲ್ಲಿ ತಪ್ಪಾದ ಯೋಚ್ನೆ ಇದ್ದಿದ್ರಿಂದ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿದ (ಅರ 16:32, 35)

ಯೆಹೋವನ ಸೇವೆಯಲ್ಲಿ ನಮಗೆ ಎಷ್ಟೇ ಸುಯೋಗಗಳಿದ್ರೂ ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸವನ್ನ ಬೆಳೆಸಿಕೊಳ್ಳಬಾರದು. ನಾವು ಸತ್ಯದಲ್ಲಿ ಇರೋ ವರ್ಷಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗ್ತಾ ಹೋದಂತೆ ನಮ್ಮಲ್ಲಿರೋ ದೀನತೆನೂ ಹೆಚ್ಚಾಗ್ತಾ ಹೋಗಬೇಕು.