ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ

ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ

ನಾವು ಸಂತೋಷದಿಂದ ಸೇವೆ ಮಾಡಬೇಕು ಅಂತ ‘ಖುಷಿಯಾಗಿರೋ ದೇವರಾದ’ ಯೆಹೋವನು ಬಯಸ್ತಾನೆ. (1ತಿಮೊ 1:11) ಸೇವೆಯಲ್ಲಿ ನಿಪುಣತೆ ಬೆಳೆಸಿಕೊಳ್ಳುತ್ತಾ ಹೋದಂತೆ ನಮ್ಮ ಸಂತೋಷನೂ ಹೆಚ್ಚಾಗ್ತಾ ಹೋಗುತ್ತೆ. ಪ್ರಶ್ನೆಗಳನ್ನ ಕೇಳೋದು ಮನೆಯವರ ಆಸಕ್ತಿಯನ್ನ ಹೆಚ್ಚಿಸುತ್ತೆ. ಅಷ್ಟೇ ಅಲ್ಲ ಸಂಭಾಷಣೆ ಆರಂಭಿಸಲು ಇದೊಂದು ಒಳ್ಳೇ ವಿಧಾನ ಸಹ. ಜನರು ಚೆನ್ನಾಗಿ ಯೋಚಿಸಿ ಸರಿಯಾದ ತೀರ್ಮಾನಕ್ಕೆ ಬರಲು ಪ್ರಶ್ನೆಗಳು ಸಹಾಯ ಮಾಡುತ್ತವೆ. (ಮತ್ತಾ 22:41-45) ನಾವು ಪ್ರಶ್ನೆಗಳನ್ನ ಕೇಳಿದ್ರೆ ಮತ್ತು ಮನೆಯವರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಂಡ್ರೆ ಅವರ ಅಭಿಪ್ರಾಯ ನಮಗೆ ಮುಖ್ಯ ಅಂತ ತೋರಿಸಿಕೊಡ್ತೀವಿ. (ಯಾಕೋ 1:19) ಅಷ್ಟೇ ಅಲ್ಲ ನಮ್ಮ ಪ್ರಶ್ನೆಗೆ ಮನೆಯವರು ಉತ್ರ ಕೊಡುವಾಗ ಸಂಭಾಷಣೆಯನ್ನ ಮುಂದುವರಿಸೋದು ಹೇಗೆ ಅಂತನೂ ಗೊತ್ತಾಗುತ್ತೆ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜಾಸ್ಮಿನ್‌ ಯಾವ ಒಳ್ಳೇ ಗುಣಗಳನ್ನ ತೋರಿಸಿದ್ರು?

  • ಜಾಸ್ಮಿನ್‌ ಬಗ್ಗೆ ನೀತಾಗೆ ಆಸಕ್ತಿ ಇತ್ತು ಅಂತ ಅವರು ಕೇಳಿದ ಯಾವ ಪ್ರಶ್ನೆಯಿಂದ ಗೊತ್ತಾಗುತ್ತೆ?

  • ಸುವಾರ್ತೆ ಬಗ್ಗೆ ಜಾಸ್ಮಿನಿನ ಆಸಕ್ತಿ ಹೆಚ್ಚಿಸಲು ನೀತಾ ಯಾವ ಪ್ರಶ್ನೆ ಕೇಳಿದ್ರು?

  • ಜಾಸ್ಮಿನ್‌ ಚೆನ್ನಾಗಿ ಯೋಚಿಸಿ ಸರಿಯಾದ ತೀರ್ಮಾನಕ್ಕೆ ಬರಲು ಸಹಾಯ ಮಾಡುವ ಯಾವ ಪ್ರಶ್ನೆಯನ್ನ ನೀತಾ ಕೇಳಿದ್ರು?