ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿ.ಶ 33ರ ಪಸ್ಕ ಹಬ್ಬಕ್ಕಾಗಿ ಮೇಲಿನ ಕೋಣೆಯನ್ನ ಸಿದ್ಧಮಾಡುತ್ತಿರೋ ಪೇತ್ರ ಮತ್ತು ಯೋಹಾನ

 ನಮ್ಮ ಕ್ರೈಸ್ತ ಜೀವ

ನೀವು ಸ್ಮರಣೆಗೆ ತಯಾರಾಗ್ತಿದ್ದೀರಾ?

ನೀವು ಸ್ಮರಣೆಗೆ ತಯಾರಾಗ್ತಿದ್ದೀರಾ?

ಯೇಸು ಇನ್ನೇನು ಸ್ವಲ್ಪ ಸಮಯದಲ್ಲಿ ಸಾಯಲಿಕ್ಕಿದ್ದನು. ಹಾಗಾಗಿ ತನ್ನ ಅಪೊಸ್ತಲರೊಂದಿಗೆ ಕೊನೆಯ ಪಸ್ಕ ಹಬ್ಬ ಆಚರಿಸಿ, ಕರ್ತನ ಸಂಧ್ಯಾ ಭೋಜನ ಅನ್ನೋ ಹೊಸ ವಾರ್ಷಿಕ ಆಚರಣೆಯನ್ನ ಪರಿಚಯಿಸಬೇಕು ಅಂತ ನಿರ್ಧರಿಸಿದನು. ಅದಕ್ಕೆ ಬೇಕಾದ ಸಿದ್ಧತೆ ಮಾಡಲು ಪೇತ್ರ ಮತ್ತು ಯೋಹಾನರನ್ನ ನೇಮಿಸಿದನು. ಯೇಸುವಿನ ಈ ಕೊನೆಯ ಪಸ್ಕದ ಆಚರಣೆ ತುಂಬಾ ವಿಶೇಷವಾಗಿತ್ತು. (ಲೂಕ 22:7-13; ಮುಖಪುಟ ಚಿತ್ರ ನೋಡಿ.) ಇದು ಮಾರ್ಚ್‌ 27 ರಂದು ನಡೆಯೋ ಕ್ರಿಸ್ತನ ಸ್ಮರಣೆಗೆ ಸಿದ್ಧತೆ ಮಾಡೋದು ಎಷ್ಟು ಮುಖ್ಯ ಅನ್ನೋದನ್ನ ನಮಗೆ ನೆನಪಿಸುತ್ತೆ. ಸಭೆಗಳು ಈಗಾಗಲೇ ಭಾಷಣಗಾರ, ರೊಟ್ಟಿ-ದ್ರಾಕ್ಷಾಮದ್ಯ ಮತ್ತು ಇತರ ವ್ಯವಸ್ಥೆಗಳನ್ನು ಮಾಡಿರಬಹುದು. ಇದರ ಜೊತೆ ನಾವು ಹೇಗೆ ವೈಯಕ್ತಿಕವಾಗಿ ಕ್ರಿಸ್ತನ ಸ್ಮರಣೆಗೆ ತಯಾರಾಗಬಹುದು?

ನಿಮ್ಮ ಹೃದಯವನ್ನ ಸಿದ್ಧಪಡಿಸಿ. ಸ್ಮರಣೆಯ ಬೈಬಲ್‌ ಓದುವಿಕೆಯನ್ನ ಓದಿ ಧ್ಯಾನಿಸಿ. ಅದರ ಶೆಡ್ಯೂಲನ್ನ ದಿನದ ವಚನ ಓದಿ ಚರ್ಚಿಸೋಣ ಪುಸ್ತಕದಲ್ಲಿ ಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೈಬಲಿನ ಅಧ್ಯಯನ ಕೈಪಿಡಿ ಪಾಠ 16 ನೋಡಿ. (ಏಪ್ರಿಲ್‌ 2020 ರ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಸಹ ನೋಡಿ.) ಕುಟುಂಬ ಆರಾಧನೆಯಲ್ಲಿ ವಿಮೋಚನಾ ಮೌಲ್ಯದ ಪ್ರಾಮುಖ್ಯತೆಯನ್ನ ಚರ್ಚಿಸಿ. ಇದಕ್ಕೆ ಬೇಕಾದ ಮಾಹಿತಿ ಸಂಶೋಧನಾ ಸಾಧನ ಅಥವಾ ಇಂಗ್ಲಿಷ್‌ನಲ್ಲಿ ಇರೋ ವಾಚ್‌ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ನಲ್ಲಿ ಸಿಗುತ್ತೆ.

ಇತರರನ್ನ ಆಮಂತ್ರಿಸಿ. ಸ್ಮರಣೆಯ ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಿ. ನೀವು ಯಾರನ್ನೆಲ್ಲಾ ಆಮಂತ್ರಿಸಬಹುದು ಅಂತ ಯೋಚಿಸಿ. ನಿಮ್ಮ ಹಳೇ ಬೈಬಲ್‌ ವಿದ್ಯಾರ್ಥಿಗಳು, ಪುನರ್ಭೇಟಿಗಳು, ಸಂಬಂಧಿಕರು ಮತ್ತು ಪರಿಚಯಸ್ಥರ ಹೆಸರುಗಳನ್ನ ಪಟ್ಟಿ ಮಾಡಿ ಅವರನ್ನೆಲ್ಲಾ ಆಮಂತ್ರಿಸಿ. ಹಿರಿಯರು ನಿಷ್ಕ್ರಿಯರಾದವರನ್ನ ತಪ್ಪದೇ ಆಮಂತ್ರಿಸಬೇಕು. ಬೇರೆ ಟೆರಿಟೊರಿಯ ವ್ಯಕ್ತಿಯನ್ನ ಸ್ಮರಣೆಗೆ ಆಮಂತ್ರಿಸಿದ್ರೆ ಅವರಿಗೆ ಹತ್ರ ಇರೋ ಸ್ಮರಣೆಯ ಸ್ಥಳದ ವಿಳಾಸ ಮತ್ತು ಸಮಯವನ್ನ ತಿಳಿಸಿ. ಇದರ ಬಗ್ಗೆ ತಿಳಿಯಲು jw.orgಯ ಮುಖ ಪುಟದಲ್ಲಿರೋ ನಮ್ಮ ಬಗ್ಗೆ ಅನ್ನೋ ಟ್ಯಾಬ್‌ನಲ್ಲಿ “ಮರಣದ ಸ್ಮರಣೆ” ಅನ್ನೋ ವಿಭಾಗನ ಕ್ಲಿಕ್‌ ಮಾಡಿ.

ಕ್ರಿಸ್ತನ ಸ್ಮರಣೆಗೆ ತಯಾರಾಗಲು ಇನ್ನೇನು ಮಾಡಬಹುದು?