ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ದೂರುವ ಗುಣ ಯಾಕೆ ಒಳ್ಳೇದಲ್ಲ?

ದೂರುವ ಗುಣ ಯಾಕೆ ಒಳ್ಳೇದಲ್ಲ?

ದೂರುವ ಗುಣ ಯೆಹೋವನಿಗೆ ಒಂಚೂರು ಇಷ್ಟ ಇಲ್ಲ (ಅರ 11:1; ಕಾವಲಿನಬುರುಜು01 6/15 ಪುಟ 17 ಪ್ಯಾರ 20)

ದೂರುವ ಗುಣ ಇರೋರು ಸ್ವಾರ್ಥಿಗಳಾಗಿರ್ತಾರೆ ಮತ್ತು ಅವರ ಹತ್ರ ಇರೋ ವಿಷ್ಯಗಳಿಗೆ ಬೆಲೆ ಕೊಡಲ್ಲ (ಅರ 11:4-6; ಕಾವಲಿನಬುರುಜು06 8/1 ಪುಟ 8 ಪ್ಯಾರ 7)

ದೂರುವ ಗುಣ ಇರೋರು ಬೇರೆಯವರಿಗೆ ನೋವಾಗೋ ರೀತಿ ನಡ್ಕೊಳ್ಳೋ ಸಾಧ್ಯತೆ ಇದೆ (ಅರ 11:10-15; it-2-E ಪುಟ 719 ಪ್ಯಾರ 4)

ಇಸ್ರಾಯೇಲ್ಯರು ಕಾಡಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ್ರೂ ಯೆಹೋವನಿಗೆ ಕೃತಜ್ಞರಾಗಿರಲು ಹಲವಾರು ಕಾರಣಗಳಿದ್ದವು. ಆದ್ರೂ ಅವರು ಯೆಹೋವನನ್ನ ದೂರಿದ್ರು. ಈ ದೂರೋ ಗುಣ ನಮ್ಮಲ್ಲಿ ಬೆಳೆಯಬಾರದು ಅಂದ್ರೆ ಯೆಹೋವನು ನಮಗಾಗಿ ಮಾಡಿದ ವಿಷಯಗಳ ಬಗ್ಗೆ, ಕೊಟ್ಟ ಆಶೀರ್ವಾದಗಳ ಬಗ್ಗೆ ಯಾವಾಗ್ಲೂ ಧ್ಯಾನಿಸ್ತಾ ಇರಬೇಕು.