ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಚೆನ್ನಾಗಿ ಯೋಚನೆ ಮಾಡಿ ಸ್ನೇಹಿತರನ್ನ ಆರಿಸಿಕೊಳ್ಳಿ

ಚೆನ್ನಾಗಿ ಯೋಚನೆ ಮಾಡಿ ಸ್ನೇಹಿತರನ್ನ ಆರಿಸಿಕೊಳ್ಳಿ

ಮೋವಾಬ್‌ ಬಯಲಿನಲ್ಲಿ ಇಸ್ರಾಯೇಲ್ಯರಿಗೆ ಏನಾಯಿತೋ ಅದು ನಮಗೆ ಒಂದು ಎಚ್ಚರಿಕೆಯ ಪಾಠವಾಗಿದೆ. (1ಕೊರಿಂ 10:6, 8, 11) ವಿಗ್ರಹಾರಾಧನೆ, ಲೈಂಗಿಕ ಅನೈತಿಕತೆ ನಡೆಸುತ್ತಿದ್ದ ಮೋವಾಬಿನ ಸ್ತ್ರೀಯರೊಟ್ಟಿಗೆ ಇಸ್ರಾಯೇಲ್ಯರು ಆಪ್ತ ಒಡನಾಟ ಬೆಳೆಸಿಕೊಂಡರು. ಇದು ಅವರನ್ನ ಗಂಭೀರ ಪಾಪಕ್ಕೆ ನಡೆಸಿತು. ಇದರಿಂದ ಇಸ್ರಾಯೇಲ್ಯರು ವಿನಾಶಕಾರಿ ಪರಿಣಾಮ ಎದುರಿಸಬೇಕಾಯಿತು. (ಅರ 25:9) ಇಂದು ನಾವು ಯೆಹೋವನನ್ನ ಆರಾಧಿಸದ ಜೊತೆಕೆಲಸಗಾರರ, ಸಹಪಾಠಿಗಳ, ನೆರೆಹೊರೆಯವರ, ಸಂಬಂಧಿಕರ ಹಾಗೂ ಪರಿಚಯಸ್ಥರ ಮಧ್ಯೆ ಜೀವಿಸುತ್ತಿದ್ದೇವೆ. ಇಂಥವರ ಜೊತೆ ಆಪ್ತ ಒಡನಾಟ ಬೆಳೆಸಿಕೊಂಡ್ರೆ ಯಾವ ಅಪಾಯಗಳನ್ನ ಎದುರಿಸಬೇಕಾಗುತ್ತೆ ಅಂತ ಈ ಬೈಬಲ್‌ ವೃತ್ತಾಂತದಿಂದ ನಾವು ಕಲಿಯಬಹುದು.

ನಮ್ಮ ದಿನಗಳಿಗಾಗಿ ಎಚ್ಚರಿಕೆಯ ಪಾಠಗಳು—ತುಣುಕು ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜಿಮ್ರಿ ಮತ್ತು ಇತರರು ಯಾಮೀನನಿಗೆ ಯಾವ ತಪ್ಪಾದ ವಿಷಯದ ಬಗ್ಗೆ ಹೇಳಿದ್ರು?

  • ಫೀನೆಹಾಸ ಯಾಮೀನನಿಗೆ ವಿಷಯಗಳನ್ನ ಸರಿಯಾಗಿ ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡಿದ?

  • ಕ್ರೈಸ್ತರಲ್ಲದ ಜನರೊಂದಿಗೆ ಸ್ನೇಹಪರರಾಗಿ ವ್ಯವಹಾರ ಮಾಡೋದಕ್ಕೂ ಮತ್ತು ಅವರ ಸ್ನೇಹಿತರಾಗಿ ಇರೋದಕ್ಕೊ ಏನು ವ್ಯತ್ಯಾಸ?

  • ಜೊತೆ ಕ್ರೈಸ್ತರಲ್ಲೂ ಆಪ್ತ ಸ್ನೇಹಿತರನ್ನ ಆರಿಸಿಕೊಳ್ಳುವಾಗ ಯಾಕೆ ಜಾಗ್ರತೆವಹಿಸಬೇಕು?

  • ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಇಲ್ಲದವರಿಗೆ ಯಾಕೆ ಮೆಸೆಜ್‌ ಮಾಡಬಾರದು?