ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ

ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ

ಹಿಂದೆ ಯೆಹೋವನು ಇಸ್ರಾಯೇಲ್ಯರನ್ನ ಸಂಘಟಿಸಿದನು. ಅದೇ ರೀತಿ ಇಂದು ಸಹ ತನ್ನ ಜನರನ್ನ ಸಾರುವ ಕೆಲಸಕ್ಕಾಗಿ ಸಂಘಟಿಸುತ್ತಿದ್ದಾನೆ. ಸುವಾರ್ತೆಯನ್ನ ಎಲ್ಲರಿಗೆ ಮುಟ್ಟಿಸಲು ಲೋಕದಲ್ಲಿರೋ ಎಲ್ಲಾ ಶಾಖಾ ಕಛೇರಿಗಳು, ಸರ್ಕಿಟ್‌ಗಳು, ಸಭೆಗಳು ಮತ್ತು ಸೇವಾ ಗುಂಪುಗಳು ಜೊತೆ ಸೇರಿ ಕೆಲಸ ಮಾಡ್ತಿವೆ. ಹಾಗಾಗಿ ಸಾರೋ ಕೆಲಸ ತುಂಬ ವೇಗದಲ್ಲಿ ನಡೀತಿದೆ. ನಾವು ಎಲ್ಲರಿಗೆ ಸುವಾರ್ತೆ ಸಾರುತ್ತೇವೆ. ಬೇರೆ ಭಾಷೆ ಮಾತಾಡುವವರಿಗೂ ಸಹ.—ಪ್ರಕ 14:6, 7.

ಬೇರೆಯವರಿಗೆ ಸತ್ಯ ಕಲಿಸಲು ಒಂದು ಹೊಸ ಭಾಷೆ ಕಲಿಯೋದ್ರ ಬಗ್ಗೆ ಯೋಚಿಸಿದ್ದೀರಾ? ಹೊಸ ಭಾಷೆ ಕಲಿಯೋಕೆ ನಿಮ್ಮ ಹತ್ರ ಟೈಮ್‌ ಇಲ್ಲದಿದ್ರು JW ಭಾಷೆ (JW ಲ್ಯಾಂಗ್ವೇಜ್‌) ಆಪನ್ನ ಬಳಸಬಹುದು. ಈ ಆಪ್‌ನ ಸಹಾಯದಿಂದ ಒಂದು ಭಾಷೆಯ ಕೆಲವು ಪದಗಳನ್ನ ಕಲಿತು ಆ ಭಾಷೆಯಲ್ಲಿ ಸಾಕ್ಷಿ ಕೊಡಬಹುದು. ಹೀಗೆ ಮಾಡ್ದಾಗ ನಿಮಗೆ ತುಂಬಾ ಖುಷಿ ಆಗುತ್ತೆ. ಒಂದನೇ ಶತಮಾನದಲ್ಲಿದ್ದ ಸಹೋದರರಿಗೆ ಸಹ ಜನರ ಸ್ವಂತ ಭಾಷೆಯಲ್ಲಿ “ದೇವರ ಅದ್ಭುತ ಕೆಲಸಗಳ” ಬಗ್ಗೆ ತಿಳಿಸಿದಾಗ ತುಂಬಾ ಖುಷಿ ಆಯ್ತು.—ಅಕಾ 2:7-11.

ಯೆಹೋವ ದೇವರ ಗೆಳೆಯರಾಗೋಣಬೇರೆ ಭಾಷೆಯಲ್ಲಿ ಸುವಾರ್ತೆ ಸಾರಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • JW ಲ್ಯಾಂಗ್ವೇಜ್‌ ಆಪನ್ನ ನೀವು ಯಾವಾಗ ಬಳಸಬಹುದು?

  • ಈ ಆಪ್‌ನ ಕೆಲವು ವೈಶಿಷ್ಟ್ಯಗಳೇನು?

  • ಎಲ್ಲಾ ಭಾಷೆ ಮಾತಾಡೋ ಜನರಿಗೆ ಸುವಾರ್ತೆ ತಲುಪಬೇಕು

    ನಿಮ್ಮ ಟೆರಿಟೊರಿಯಲ್ಲಿರೋ ಜನರು ಯಾವೆಲ್ಲಾ ಭಾಷೆ ಮಾತಾಡ್ತಾರೆ?

  • ಬೇರೆ ಭಾಷೆ ಮಾತಾಡೋ ಒಬ್ಬ ವ್ಯಕ್ತಿ ಆಸಕ್ತಿ ತೋರಿಸಿದ್ರೆ ನೀವೇನು ಮಾಡಬೇಕು?—ಸಂಘಟಿತರು ಪುಟ 94 ಪ್ಯಾರ 39-41