ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ.”—2ಕೊರಿಂ 5:14

 ನಮ್ಮ ಕ್ರೈಸ್ತ ಜೀವನ

ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ಸಹಾಯಕ ಪಯನೀಯರ್‌ ಸೇವೆ ಮಾಡಲು ಆಗುತ್ತಾ?

ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ಸಹಾಯಕ ಪಯನೀಯರ್‌ ಸೇವೆ ಮಾಡಲು ಆಗುತ್ತಾ?

ಸ್ಮರಣೆಯ ಸಮಯದಲ್ಲಿ ಯೆಹೋವನ ಸೇವೆ ಇನ್ನೂ ಹೆಚ್ಚು ಮಾಡಲು ಇಷ್ಟಪಡ್ತೀರಾ? (2ಕೊರಿಂ 5:14, 15) ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಸಹಾಯಕ ಪಯನೀಯರರು 30 ತಾಸು ಅಥವಾ 50 ತಾಸು ಸೇವೆ ಮಾಡಬಹುದು. ಆ ತಿಂಗಳಲ್ಲಿ ನಿಮಗೆ ಸಹಾಯಕ ಪಯನೀಯರ್‌ ಸೇವೆ ಮಾಡಲು ಆಗುತ್ತೆ ಅಂದ್ರೆ ನಿಮ್ಮ ಸಭೆಯ ಸೇವಾ ಸಮಿತಿಗೆ ಅರ್ಜಿ ತುಂಬಿಸಿ ಕೊಡಿ. ಪ್ರತಿ ತಿಂಗಳು ಯಾರೆಲ್ಲಾ ಸಹಾಯಕ ಪಯನೀಯರ್‌ ಸೇವೆ ಮಾಡ್ತಾರೆ ಅಂತ ಸಭೆಗೆ ತಿಳಿಸಲಾಗುತ್ತೆ. ಆಗ ಸಭೆಯಲ್ಲಿರೋ ಬೇರೆಯವರು ಕೂಡ ಅವರ ಜೊತೆ ಸೇವೆ ಮಾಡಲು ಪ್ಲಾನ್‌ ಮಾಡಬಹುದು. ಹೀಗೆ ಸಹಾಯಕ ಪಯನೀಯರರು ತಮ್ಮ ತಾಸುಗಳನ್ನ ಮುಟ್ಟಲು ಅವರೂ ಸಹಾಯ ಮಾಡಬಹುದು. ಹಾಗಾದ್ರೆ ಬನ್ನಿ, ಸ್ಮರಣೆಯ ಸಮಯದಲ್ಲಿ ಹೆಚ್ಚು ಸೇವೆ ಮಾಡಿ ನಮ್ಮ ಕೌಶಲ್ಯಗಳನ್ನ ಹೆಚ್ಚಿಸೋಣ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ.—1ಥೆಸ 5:11.