ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಪ್ರೀತಿ ತೋರಿಸಲು ಅವಕಾಶಗಳನ್ನ ಕಲ್ಪಿಸುವ ಅಧಿವೇಶನಗಳು

ಪ್ರೀತಿ ತೋರಿಸಲು ಅವಕಾಶಗಳನ್ನ ಕಲ್ಪಿಸುವ ಅಧಿವೇಶನಗಳು

ಹಿಂದಿನ ಕಾಲದ ಇಸ್ರಾಯೇಲ್ಯರು ಹಬ್ಬಗಳಿಗಾಗಿ ಕೂಡಿಬಂದು ಯೆಹೋವನನ್ನ ಆರಾಧಿಸ್ತಾ ಖುಷಿಪಡ್ತಿದ್ರು. ಅದೇ ತರ ಪ್ರತಿ ವರ್ಷ ನಾವು ಅಧಿವೇಶನಗಳಲ್ಲಿ ಸಾವಿರಾರು ಜನರ ಜೊತೆ ಸೇರಿ ಯೆಹೋವನನ್ನ ಆರಾಧಿಸ್ತಾ ಖುಷಿಪಡ್ತೀವಿ. ಅಲ್ಲಿ ನಾವು ಆಧ್ಯಾತ್ಮಿಕ ಆಹಾರದ ಔತಣವನ್ನ ಸವಿದು ತುಂಬ ವಿಷಯಗಳನ್ನ ಕಲಿತೀವಿ. ನಮ್ಮ ಕುಟುಂಬ, ಸ್ನೇಹಿತರೊಂದಿಗೆ ಸಹ ಅಮೂಲ್ಯ ಸಮಯ ಕಳೆಯೋ ಅವಕಾಶ ಸಿಗುತ್ತೆ. ಅಧಿವೇಶನ ನಮಗೆ ತುಂಬ ವಿಶೇಷವಾದ ಸಮಯ. ಹಾಗಾಗಿ ಮೂರು ದಿನಾನೂ ತಪ್ಪದೇ ಹಾಜರಾಗಲು ಪ್ರಯತ್ನಿಸ್ತೀವಿ.

ಅಧಿವೇಶನಗಳಿಗೆ ಹಾಜರಾದಾಗ ಬರೀ ನಮ್ಮ ಪ್ರಯೋಜ್ನ ಮಾತ್ರ ನೋಡದೆ ನಮ್ಮ ಸಹೋದರ ಸಹೋದರಿಯರ ಬಗ್ಗೆನೂ ಯೋಚಿಸಬೇಕು. (ಗಲಾ 6:10; ಇಬ್ರಿ 10:24, 25) ಉದಾಹರಣೆಗೆ, ಸಹೋದರ ಸಹೋದರಿಯರು ಓಡಾಡುವಾಗ ಬಾಗಿಲು ತೆಗೆದು ಹಿಡ್ಕೊಳ್ಳಬಹುದು. ಸೀಟ್‌ ಹಿಡಿಯುವಾಗ ನಮಗೆಷ್ಟು ಬೇಕೋ ಅಷ್ಟೇ ಸೀಟುಗಳನ್ನ ಹಿಡಿಯಬಹುದು. ಹೀಗೆ ಬೇರೆಯವರ ಮೇಲೂ ಪ್ರೀತಿ ಇದೆ ಅಂತ ತೋರಿಸಿಕೊಡಬಹುದು. (ಫಿಲಿ 2:3, 4) ಅಧಿವೇಶನದ ಕಾರ್ಯಕ್ರಮ ಶುರುವಾಗೋ ಮುಂಚೆ ಮತ್ತು ಮುಗಿದಮೇಲೆ ಅಥವಾ ಊಟಕ್ಕೆ ಅಂತ ಸಮಯ ಕೊಟ್ಟಾಗ ನಮಗೆ ಹೊಸಹೊಸ ಫ್ರೆಂಡ್ಸ್‌ ಮಾಡ್ಕೊಳ್ಳೋ ಅವಕಾಶನೂ ಸಿಗುತ್ತೆ. (2ಕೊರಿಂ 6:13) ಈ ಸಮಯದಲ್ಲಿ ನಾವು ಮಾಡ್ಕೊಳ್ಳೋ ಫ್ರೆಂಡ್ಸ್‌ ಸದಾಕಾಲಕ್ಕೂ ನಮ್ಮ ಜೊತೆ ಇರುತ್ತಾರೆ! ಎಲ್ಲಕ್ಕಿಂತ ಮುಖ್ಯವಾಗಿ ಹೊಸದಾಗಿ ಅಧಿವೇಶನಕ್ಕೆ ಹಾಜರಾದವರು ನಮ್ಮ ಮಧ್ಯೆ ಇರೋ ಪ್ರೀತಿ ನೋಡಿ ಯೆಹೋವನ ಆರಾಧಕರಾಗೋ ನಿರ್ಧಾರ ಮಾಡಬಹುದು.—ಯೋಹಾ 13:35.

“ಪ್ರೀತಿ ಶಾಶ್ವತ!” ಅಂತರಾಷ್ಟ್ರೀಯ ಅಧಿವೇಶನ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಇಸವಿ 2019 ರಲ್ಲಿ ಅಂತರರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾದ ಬೇರೆ ದೇಶದ ಸಹೋದರ ಸಹೋದರಿಯರಿಗೆ ಹೇಗೆ ಪ್ರೀತಿ ತೋರಿಸಲಾಯಿತು?

  • ಯೆಹೋವನ ಜನರ ಮಧ್ಯೆ ಇರೋ ಪ್ರೀತಿ ಮತ್ತು ಐಕ್ಯತೆ ಯಾಕೆ ಗಮನಾರ್ಹವಾಗಿದೆ?

  • ಕ್ರೈಸ್ತ ಪ್ರೀತಿಯನ್ನ ತೋರಿಸುವುದರ ಬಗ್ಗೆ ಆಡಳಿತ ಮಂಡಲಿಯ ಸದಸ್ಯರು ಏನು ಹೇಳಿದ್ರು?

  • ನೀವು ಅಧಿವೇಶನಗಳಲ್ಲಿ ಇನ್ನೂ ಹೆಚ್ಚಿನ ಪ್ರೀತಿ ಹೇಗೆ ತೋರಿಸಬಹುದು?

    ವಿರೋಧದ ಮಧ್ಯೆನೂ ಜರ್ಮನಿ ಮತ್ತು ದಕ್ಷಿಣ ಕೊರಿಯಾದಲ್ಲಿ ನಮ್ಮ ಸಹೋದರ ಸಹೋದರಿಯರು ಹೇಗೆ ತಮ್ಮ ಪ್ರೀತಿಯನ್ನ ತೋರಿಸಿದ್ದಾರೆ?

  • ನಾವು ಯಾವ ದೃಢ ತೀರ್ಮಾನ ಮಾಡಬೇಕು?