ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ

ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ

ಯೆಹೋವ ದೇವರು ಮದುವೆಯ ಪ್ರತಿಜ್ಞೆಯನ್ನ ತುಂಬ ಗಂಭೀರವಾಗಿ ನೋಡ್ತಾನೆ. ಗಂಡ-ಹೆಂಡತಿ ಯಾವಾಗಲೂ ಜೊತೆಯಾಗಿರಬೇಕು ಅಂತ ಹೇಳಿದ್ದಾನೆ. (ಮತ್ತಾ 19:5, 6) ಯೆಹೋವನನ್ನ ಆರಾಧಿಸೋ ಅನೇಕ ದಂಪತಿಗಳು ಸಂತೋಷಕರ ವಿವಾಹ ಜೀವನವನ್ನ ನಡೆಸ್ತಾ ಒಳ್ಳೇ ಮಾದರಿಯಾಗಿದ್ದಾರೆ. ಆದ್ರೆ ಕೆಲವೊಮ್ಮೆ ಗಂಡ ಹೆಂಡತಿಯ ನಡುವೆ ಸಮಸ್ಯೆಗಳು ಬರೋದು ಸಹಜ. ಯಾಕೆಂದ್ರೆ ನಾವೆಲ್ರೂ ಅಪರಿಪೂರ್ಣರು. ಲೋಕದ ಜನ ಮದುವೆಯ ಜೀವನದಲ್ಲಿ ಸಮಸ್ಯೆಗಳು ಬಂದಾಗ ಪ್ರತ್ಯೇಕವಾಗಿ ಜೀವನ ಮಾಡೋದು ಅಥವಾ ವಿಚ್ಛೇದನ ಕೊಡೋದೇ ಪರಿಹಾರ ಅಂತ ಅಂದುಕೊಳ್ತಾರೆ. ಆದ್ರೆ ನಾವು ಆ ತರ ಯೋಚಿಸಬಾರದು. ವಿವಾಹಿತ ಕ್ರೈಸ್ತರು ತಮ್ಮ ಮದುವೆಯ ಬಂಧವನ್ನ ಹೇಗೆ ಕಾಪಾಡಿಕೊಳ್ಳಬಹುದು?

ಈ ಐದು ಹೆಜ್ಜೆಗಳನ್ನ ಪಾಲಿಸಿ.

 1. 1. ಬೇರೆಯವರೊಂದಿಗೆ ಚೆಲ್ಲಾಟ ಮತ್ತು ಅನೈತಿಕ ಮನರಂಜನೆಯಿಂದ ದೂರವಿರೋ ಮೂಲಕ ನಿಮ್ಮ ಹೃದಯವನ್ನ ಕಾಪಾಡಿಕೊಳ್ಳಿ.—ಮತ್ತಾ 5:28; 2ಪೇತ್ರ 2:14.

 2. 2. ದೇವರೊಂದಿಗೆ ನಿಮ್ಮ ಸ್ನೇಹವನ್ನ ಬಲಪಡಿಸಿ ಮತ್ತು ನಿಮ್ಮ ವಿವಾಹ ಜೀವನ ಆತನಿಗೆ ಮೆಚ್ಚಿಗೆ ಆಗೋ ತರ ಇರಲಿ.—ಕೀರ್ತ 97:10.

 3. 3. ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ದಯೆಯಿಂದ ನಡೆದುಕೊಳ್ಳಿ. ಸಣ್ಣ ಪುಟ್ಟ ವಿಷಯಗಳಲ್ಲೂ ಅವರಿಗೆ ಸಹಾಯಮಾಡಿ.—ಕೊಲೊ 3:8-10, 12-14.

 4. 4. ನಿಮ್ಮ ಮಧ್ಯೆ ಒಳ್ಳೇ ಮಾತುಕತೆ ಇರಲಿ.—ಕೊಲೊ 4:6.

 5. 5. ನಿಮ್ಮ ವಿವಾಹ ಸಂಗಾತಿಗೆ ಪ್ರೀತಿ ತೋರಿಸಿ. ಅವರ ಲೈಂಗಿಕ ಅವಶ್ಯಕತೆಗಳನ್ನ ಅರ್ಥಮಾಡ್ಕೊಂಡು ಅವರಿಗೆ ಕೊಡಬೇಕಾಗಿರೋದನ್ನ ಕೊಡಿ.—1ಕೊರಿಂ 7:3, 4; 10:24.

ನಾವು ಮದುವೆಯ ಬಂಧವನ್ನ ಗೌರವಿಸಿದ್ರೆ ವಿವಾಹದ ಏರ್ಪಾಡನ್ನ ಮಾಡಿರೋ ಯೆಹೋವ ದೇವರನ್ನ ಗೌರವಿಸಿದ ಹಾಗೆ ಆಗುತ್ತೆ.

ನಾವು ‘ತಾಳ್ಮೆಯಿಂದ ಓಡಬೇಕು’—ಪಂದ್ಯದ ನಿಯಮಗಳನ್ನು ಪಾಲಿಸಿ ಅನ್ನೋ ವಿಡಿಯೋ ನೋಡಿ ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

 • ಮದುವೆ ಜೀವನ ಆರಂಭದಲ್ಲಿ ಚೆನ್ನಾಗಿರೋದಾದ್ರೂ ಹೋಗ್ತಾ ಹೋಗ್ತಾ ಯಾವ ಸವಾಲುಗಳು ಎದುರಾಗಬಹುದು?

 • ‘ನಮ್ಮ ಮಧ್ಯೆ ಪ್ರೀತಿನೇ ಇಲ್ಲ’ ಅಂತ ಯೋಚಿಸೋ ದಂಪತಿಗಳಿಗೆ ಬೈಬಲ್‌ ಸಲಹೆಗಳು ಹೇಗೆ ಸಹಾಯ ಮಾಡುತ್ತೆ?

 • ಮದುವೆ ಜೀವನದಲ್ಲಿ ಸಂತೋಷ ಇರಬೇಕಂದ್ರೆ ಬೈಬಲ್‌ ಸಲಹೆಗಳನ್ನ ಪಾಲಿಸಿ

  ಯೆಹೋವ ದೇವರು ವಿವಾಹಿತರಿಗೆ ಯಾವ ನಿಯಮಗಳನ್ನ ಇಟ್ಟಿದ್ದಾನೆ?

 • ಒಂದು ಮದುವೆ ಯಶಸ್ವಿ ಆಗಬೇಕಂದ್ರೆ ಗಂಡ ಹೆಂಡ್ತಿ ಇಬ್ಬರೂ ಏನು ಮಾಡಬೇಕು?