ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ದೇವರ ರಾಜ್ಯದ ಬಗ್ಗೆ ತಿಳಿಸಲು ನವೆಂಬರ್‌ ತಿಂಗಳಲ್ಲಿ ವಿಶೇಷ ಅಭಿಯಾನ

ದೇವರ ರಾಜ್ಯದ ಬಗ್ಗೆ ತಿಳಿಸಲು ನವೆಂಬರ್‌ ತಿಂಗಳಲ್ಲಿ ವಿಶೇಷ ಅಭಿಯಾನ

ಯೇಸು “ದೇವರ ರಾಜ್ಯದ ಸುವಾರ್ತೆಯನ್ನು” ಸಾರಿದನು. (ಲೂಕ 4:43) ಅವನು ಜನರಿಗೆ ಈ ರಾಜ್ಯಕ್ಕಾಗಿ ಪ್ರಾರ್ಥಿಸಲು ಸಹ ಕಲಿಸಿದನು. (ಮತ್ತಾ 6:9, 10) ನವೆಂಬರ್‌ನಲ್ಲಿ ನಾವು ದೇವರ ರಾಜ್ಯದ ಬಗ್ಗೆ ಜನರಿಗೆ ತಿಳಿಸಲು ವಿಶೇಷ ಪ್ರಯತ್ನ ಮಾಡಲಿದ್ದೇವೆ. (ಮತ್ತಾ 24:14) ಈ ಅಭಿಯಾನದಲ್ಲಿ ಭಾಗವಹಿಸಲು ನಿಮ್ಮ ಕೆಲಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಿ. ಆಗ್ಸಿಲರಿ ಪಯನೀಯರಿಂಗ್‌ ಮಾಡುತ್ತಿರುವವರೆಲ್ಲ ಈ ತಿಂಗಳು 30 ಅಥವಾ 50 ಗಂಟೆ ಸೇವೆ ಮಾಡಬಹುದು.

ನಿಮ್ಮ ಕ್ಷೇತ್ರದಲ್ಲಿರೋ ಆದಷ್ಟು ಹೆಚ್ಚು ಜನರಿಗೆ ದೇವರ ರಾಜ್ಯಕ್ಕೆ ಸಂಬಂಧಿಸಿದ ಒಂದು ವಚನದ ಬಗ್ಗೆ ತಿಳಿಸಿ. ಯಾವ ವಚನ ಓದಬೇಕು ಅಂತ ತಯಾರಿಸುವಾಗ ಜನರ ಧಾರ್ಮಿಕ ಹಿನ್ನೆಲೆಯನ್ನು ಮನಸ್ಸಿನಲ್ಲಿಡಿ. ಆರಂಭದ ಭೇಟಿಯಲ್ಲಿ ಯಾರಾದರು ಆಸಕ್ತಿ ತೋರಿಸಿದರೆ ಅವರಿಗೆ ಕಾವಲಿನಬುರುಜು ನಂ. 2 2020 ರ ಸಾರ್ವಜನಿಕ ಆವೃತ್ತಿಯ ಒಂದು ಪ್ರತಿ ಕೊಡಿ. ಆದಷ್ಟು ಬೇಗ ಅವರಿಗೆ ಪುನರ್ಭೇಟಿ ಮಾಡಿ, ಬೋಧನಾ ಸಾಧನಗಳು ವಿಭಾಗದಲ್ಲಿ ಇರೋ ಒಂದು ಪ್ರಕಾಶನದಿಂದ ಬೈಬಲ್‌ ಅಧ್ಯಯನ ಆರಂಭಿಸಿ. ದೇವರ ರಾಜ್ಯ ತನ್ನ ವಿರುದ್ಧ ನಿಂತಿರುವ ಸರ್ಕಾರಗಳನ್ನು ನಾಶಮಾಡಲು ಇನ್ನು ಸ್ವಲ್ಪನೇ ಸಮಯ ಉಳಿದಿದೆ. (ದಾನಿ 2:44; 1ಕೊರಿಂ 15:24, 25) ಹಾಗಾಗಿ ಯೆಹೋವನಿಗೆ ಮತ್ತು ಆತನ ರಾಜ್ಯಕ್ಕೆ ಬೆಂಬಲ ಕೊಡಲು ನಮಗಿರುವ ಈ ಸದವಕಾಶವನ್ನು ಚೆನ್ನಾಗಿ ಬಳಸಿಕೊಳ್ಳೋಣ.

ದೇವರ ರಾಜ್ಯದಲ್ಲಿ ಇಡೀ ಭೂಮಿ ಪರದೈಸ್‌ ಆಗಲಿದೆ!