ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 33-34

ಯೆಹೋವನ ಅದ್ಭುತ ಗುಣಗಳು

ಯೆಹೋವನ ಅದ್ಭುತ ಗುಣಗಳು

34:5-7

ಮೋಶೆಗೆ ಯೆಹೋವನ ಗುಣಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಇಸ್ರಾಯೇಲ್ಯರೊಂದಿಗೆ ತಾಳ್ಮೆಯಿಂದ ನಡಕೊಂಡ. ಮೋಶೆ ತರ ನಾವೂ ಯೆಹೋವನ ಗುಣಗಳ ಬಗ್ಗೆ ಇನ್ನೂ ಚೆನ್ನಾಗಿ ತಿಳುಕೊಂಡ್ರೆ ಸಹೋದರ ಸಹೋದರಿಯರೊಂದಿಗೆ ಪ್ರೀತಿ-ದಯೆಯಿಂದ ನಡಕೊಳ್ಳುತ್ತೀವಿ.

  • “ದಯಾಳು ಮತ್ತು ಕರುಣಾಮಯಿ”: ಅಪ್ಪಅಮ್ಮ ಹೇಗೆ ತಮ್ಮ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಾರೋ ಅದೇ ತರ ಯೆಹೋವನು ತನ್ನ ಸೇವಕರನ್ನ ಚೆನ್ನಾಗಿ ನೋಡಿಕೊಳ್ತಾನೆ ಮತ್ತು ತುಂಬಾ ಪ್ರೀತಿಸ್ತಾನೆ

  • “ದೀರ್ಘಶಾಂತನು”: ಯೆಹೋವನು ತುಂಬ ತಾಳ್ಮೆ ತೋರಿಸುತ್ತಾನೆ. ತನ್ನ ಸೇವಕರು ತಪ್ಪು ಮಾಡಿದ್ರೆ ತಕ್ಷಣ ಅವರ ಮೇಲೆ ಕೋಪ ಮಾಡಿಕೊಳ್ಳಲ್ಲ ಬದಲಿಗೆ ತಪ್ಪನ್ನ ತಿದ್ದುಕೊಳ್ಳಲು ಅವರಿಗೆ ಸಮಯ ಕೊಡ್ತಾನೆ

  • “ಅಪಾರ ಪ್ರೀತಿಯುಳ್ಳವನು”: ಯೆಹೋವನು ತನ್ನ ಜನ್ರನ್ನ ತುಂಬ ಪ್ರೀತಿಸ್ತಾನೆ. ಆತನು ತೋರಿಸೋ ಪ್ರೀತಿಗೆ ಕೊನೆನೇ ಇಲ್ಲ

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಹೇಗೆ ಯೆಹೋವನ ತರ ದಯೆ ಪ್ರೀತಿಯಿಂದ ನಡ್ಕೋಬಹುದು?’