ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?

ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?

ನೀವು ಫ್ರೆಂಡ್‌ ಮಾಡಿಕೊಳ್ಳೋ ವ್ಯಕ್ತಿಗೆ ಯಾವೆಲ್ಲಾ ಗುಣಗಳಿರಬೇಕು ಅಂತ ಬಯಸ್ತೀರಾ? ನಿಷ್ಠೆ, ಕರುಣೆ ಮತ್ತು ಉದಾರತೆಯಂಥ ಗುಣಗಳು ಆ ವ್ಯಕ್ತಿಯಲ್ಲಿ ಇರಬೇಕಾ? ಈ ಎಲ್ಲಾ ಗುಣಗಳು ಯೆಹೋವನಲ್ಲಿದೆ. (ವಿಮೋ 34:6; ಅಕಾ 14:17) ಯೆಹೋವನು ನೀವು ಪ್ರಾರ್ಥನೆ ಮಾಡಿದಾಗ ಕೇಳ್ತಾನೆ. ಸಹಾಯ ಬೇಕಿದ್ದಾಗೆಲ್ಲಾ ನಿಮ್ಮ ಕೈ ಹಿಡಿತಾನೆ. (ಕೀರ್ತ 18:19, 35) ನಿಮ್ಮ ತಪ್ಪುಗಳನ್ನ ಕ್ಷಮಿಸುತ್ತಾನೆ. (1ಯೋಹಾ 1:9) ಯೆಹೋವನು ಎಷ್ಟು ಒಳ್ಳೇ ಫ್ರೆಂಡ್‌ ಅಲ್ವಾ!

ಯೆಹೋವನ ಫ್ರೆಂಡ್‌ ಆಗೋಕೆ ನೀವೇನು ಮಾಡಬೇಕು? ಬೈಬಲ್‌ ಓದಿ ಯೆಹೋವನ ಬಗ್ಗೆ ತಿಳುಕೊಳ್ಳಿ. ನಿಮ್ಮ ಅನಿಸಿಕೆ ಭಾವನೆಗಳನ್ನು ಆತನೊಟ್ಟಿಗೆ ಹಂಚಿಕೊಳ್ಳಿ. (ಕೀರ್ತ 62:8; 142:2) ಯೆಹೋವನಿಗೆ ತನ್ನ ಮಗ, ತನ್ನ ರಾಜ್ಯ ಮತ್ತು ಭವಿಷ್ಯದ ಬಗ್ಗೆ ಕೊಟ್ಟಿರೋ ಮಾತುಗಳು ಅಂದ್ರೆ ತುಂಬ ಅಮೂಲ್ಯ. ನೀವೂ ಈ ವಿಷಯಗಳನ್ನ ಅಮೂಲ್ಯವಾಗಿ ನೋಡಿ. ಬೇರೆಯವರಿಗೆ ಯೆಹೋವನ ಬಗ್ಗೆ ತಿಳಿಸಿ. (ಧರ್ಮೋ 32:3) ಯೆಹೋವನೊಂದಿಗೆ ಆಪ್ತ ಸ್ನೇಹ ಬೆಳೆಸಿಕೊಂಡ್ರೆ ಆತನು ಎಂದೆಂದಿಗೂ ನಿಮ್ಮ ಫ್ರೆಂಡಾಗಿ ಇರುತ್ತಾನೆ.—ಕೀರ್ತ 73:25, 26, 28.

ಯುವಜನರೇ—“ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ” ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಳ್ಳಲು ಏನೆಲ್ಲಾ ಮಾಡಬೇಕು?

  • ಯೆಹೋವನ ಸೇವೆ ಮಾಡೋಕೆ ಸಭೆಯಲ್ಲಿರೋ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡ್ತಾರೆ?

  • ಸೇವೆ ಮಾಡೋದ್ರಿಂದ ಯೆಹೋವನೊಂದಿಗೆ ನಿಮ್ಮ ಸಂಬಂಧ ಹೇಗೆ ಬಲಗೊಳ್ಳುತ್ತೆ?

  • ಯೆಹೋವನೊಂದಿಗೆ ನಿಮ್ಮ ಸ್ನೇಹ ಎಂದಿಗೂ ಮುರಿದುಹೋಗಲ್ಲ!

    ಯಾವೆಲ್ಲಾ ರೀತಿಯ ಸೇವೆಗಳನ್ನ ನೀವು ಮಾಡಬಹುದು?

  • ಯೆಹೋವನಲ್ಲಿರೋ ಯಾವ ಗುಣ ನಿಮಗೆ ಇಷ್ಟ?