ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

 ಇವತ್ತು ಮಾಹಿತಿಗಳಿಗೇನೂ ಕಡಿಮೆಯಿಲ್ಲ ಅದರಲ್ಲೂ ಆರೋಗ್ಯದ ಬಗ್ಗೆ ಸುರಕ್ಷತೆ ಬಗ್ಗೆಯಂತೂ ಮಾಹಿತಿಗಳ ಸುರಿಮಳೆನೇ ಇದೆ. ಅದಕ್ಕೇ ಮಾಹಿತಿ ಹುಡುಕುವಾಗ ತಪ್ಪು ಮಾಹಿತಿ ಯಾವುದು ಅಂತ ಕಂಡು ಹಿಡಿಯಬೇಕು. ಕೆಲವು ತಪ್ಪು ಮಾಹಿತಿ ಯಾವುದಂದ್ರೆ:

 ಉದಾಹರಣೆಗೆ, ಕೊರೋನ ಮಹಾಪಿಡುಗಿನ ಸಮಯದಲ್ಲಿ ಹರಡುತ್ತಿದ್ದ ತಪ್ಪು ಮಾಹಿತಿ ಅನ್ನೋ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಸುತ್ತಾ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹೀಗೆ ಹೇಳಿದರು: “ಆ ಸಮಯದಲ್ಲಿ ಆರೋಗ್ಯ ಹಾಳು ಮಾಡೋ ಸಲಹೆಗಳು ಮತ್ತು ನಕಲಿ ಚಿಕಿತ್ಸೆಗಳು ಜಾಸ್ತಿ ಆಯ್ತು. ಟಿ.ವಿ ರೇಡಿಯೋಗಳಲ್ಲಿ ಇಂಥ ಸುಳ್ಳು ಸುದ್ದಿಗಳೇ ತುಂಬಿ ತುಳುಕುತ್ತಿತ್ತು. ಅಷ್ಟೇ ಅಲ್ಲ ಇಂಟರ್‌ನೆಟ್‌ಗಳಲ್ಲಿ ಜನರು ಅವರಿಗೆ ಇಷ್ಟ ಬಂದ ಹಾಗೆ ಏನೇನೋ ಹಬ್ಬಿಸ್ತಿದ್ರು. ಇದರಿಂದ ಜನರ ಮಧ್ಯೆ ಮತ್ತು ಗುಂಪುಗಳ ಮಧ್ಯೆ ದ್ವೇಷ ಕಿಡಿಕಾರುತ್ತಿತ್ತು.”

 ತಪ್ಪು ಮಾಹಿತಿ ಅನ್ನೋದು ಹೊಸದೇನಲ್ಲ. ಎಷ್ಟೋ ವರ್ಷಗಳ ಹಿಂದೆ ಬೈಬಲ್‌ ಹೀಗೆ ಹೇಳಿತ್ತು: “ಕೆಟ್ಟವರು ಮೋಸಗಾರರು ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ. ಅವರು ಮೋಸಮಾಡ್ತಾ ಮೋಸಹೋಗ್ತಾ ಇರ್ತಾರೆ.” (2 ತಿಮೊತಿ 3:1, 13) ಎಲ್ಲರ ಹತ್ತಿರ ಇಂಟರ್‌ನೆಟ್‌ ಇರೋದರಿಂದ ಸುಲಭವಾಗಿ ಮತ್ತು ತುಂಬ ವೇಗವಾಗಿ ತಪ್ಪು ಮಾಹಿತಿ ಸಿಗುತ್ತಿದೆ. ಹಾಗಾಗಿ ನಮ್ಮ ಕೈಗೆ ಸಿಕ್ಕಿರೋ ಸುದ್ದಿಗಳನ್ನ ನಿಜ ಅಂದುಕೊಂಡು ಬೇರೆಯವರಿಗೆ ಹಬ್ಬಿಸಿ ಬಿಡ್ತೀವಿ. ಇದರಿಂದಾಗಿ ನಮ್ಮ ಈ ಮೇಲ್‌, ಸೋಷಿಯಲ್‌ ಮೀಡಿಯಾ, ಇಂಟರ್‌ನೆಟ್‌ಗಳಲ್ಲಿ ಬರೋ ಸುದ್ದಿಗಳು ಒಂದೋ ಸುಳ್ಳಾಗಿರುತ್ತೆ ಅಥವಾ ಅರ್ಧ ಸತ್ಯಗಳಾಗಿರುತ್ತೆ.

 ಸುಳ್ಳು ಸುದ್ದಿ ಮತ್ತು ತಲೆಬುಡ ಇಲ್ಲದಿರೋ ಸುದ್ದಿಯಿಂದ ನಿಮ್ಮನ್ನ ಕಾಪಾಡಿಕೊಳ್ಳೋಕೆ ಏನು ಮಾಡಬೇಕು? ಇದಕ್ಕೆ ಈ ಕೆಳಗಿನ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ.

 •   ಕಂಡಿದ್ದನ್ನ, ಕೇಳಿದ್ದನ್ನ ಕೂಡಲೇ ನಂಬಬೇಡಿ

   ಬೈಬಲಿನ ಉತ್ತರ: “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋಕ್ತಿ 14:15.

   ನಾವು ಜಾಗ್ರತೆ ವಹಿಸಿಲ್ಲಾಂದ್ರೆ ಸುಲಭವಾಗಿ ಮೋಸ ಹೋಗ್ತೀವಿ. ಉದಾಹರಣೆಗೆ ಸೋಷಿಯಲ್‌ ಮೀಡಿಯಾದಲ್ಲಿ ಜನರು ಫೋಟೋ ಅಥವಾ ವಿಡಿಯೋಗಳಲ್ಲಿ ಏನಾದ್ರೂ ವಿಚಿತ್ರ ವಾಕ್ಯಗಳನ್ನ (ಮೀಮ್ಸ್‌) ಬರೆದು ಪೋಸ್ಟ್‌ ಮಾಡಿರುತ್ತಾರೆ. ಒಬ್ಬರು ಹೇಳಿರೋ ಒಂದು ವಿಷಯ ಮಾತ್ರ ತಗೊಂಡು ಅದರ ಹಿಂದೆ ಮುಂದೆ ಹೇಳಿರೋದನ್ನೆಲ್ಲ ಅಳಿಸಿ ಹಾಕ್ತಾರೆ. ಹೀಗೆ ಒಬ್ಬರು ಹೇಳದೇ ಇರೋ ಮತ್ತು ಮಾಡದೇ ಇರೋ ವಿಷಯವನ್ನ ಈಗಾಗಲೇ ಮಾಡಿಬಿಟ್ಟಿದ್ದಾರೆ ಅನ್ನೋ ರೀತಿಯಲ್ಲಿ ಕೆಲವರು ವಿಡಿಯೋ ಮಾಡಿ ಹಾಕ್ತಾರೆ. ಇದನ್ನ ಅವರು ತಮಾಷೆಗಾಗಿ ಮಾಡೋದಾದರೂ ಜನ ತಪ್ಪಾಗಿ ಅರ್ಥಮಾಡಿಕೊಳ್ತಾರೆ.

   “ಸೋಷಿಯಲ್‌ ಮೀಡಿಯಾದಲ್ಲಿ ಬರೋ ಹೆಚ್ಚಿನ ಸುದ್ದಿಗಳು ಸುಳ್ಳು ಅಂತ ಸಂಶೋಧಕರು ಕಂಡು ಹಿಡಿದಿದ್ದಾರೆ.”—ಆಕ್ಸಿಯಸ್‌ ಮೀಡಿಯಾ.

   ನಿಮ್ಮನ್ನೇ ಕೇಳಿಕೊಳ್ಳಿ: ಈ ವಿಷಯ ಮೀಮ್ಸ್‌ ಆಗಿದೆಯಾ ಅಥವಾ ನಿಜವಾಗಲೂ ನಡೆದಿದೆಯಾ?

 •   ನಿಜವಾದ ಸುದ್ದಿ ಬಗ್ಗೆ ಮತ್ತು ಅದರ ಮೂಲದ ಬಗ್ಗೆ ವಿಚಾರಿಸಿ

   ಬೈಬಲಿನ ಉತ್ತರ: “ಎಲ್ಲವನ್ನ ಪರೀಕ್ಷಿಸಿ.”—1 ಥೆಸಲೊನೀಕ 5:21.

   ಒಂದು ಸುದ್ದಿ ನ್ಯೂಸ್‌ನಲ್ಲಿ ಪದೇಪದೇ ಬರ್ತಾ ಇದ್ರೂ ಅದು ಜನಪ್ರಿಯ ಆಗಿದ್ರೂ ಅದನ್ನ ನಂಬೋ ಮುಂಚೆ ಅಥವಾ ಬೇರೆಯವರಿಗೆ ಕಳಿಸೋ ಮುಂಚೆ ಅದು ನಿಜವಾಗಲೂ ನಡೆದಿದೆಯಾ ಅಂತ ಪರೀಕ್ಷಿಸಬೇಕು. ಯಾಕೆ?

   ಒಂದು ಸುದ್ದಿ ಎಲ್ಲಿಂದ ಬಂತು ಯಾರಿಂದ ಬಂತು ಅಂತ ತಿಳ್ಕೊಳ್ಳಬೇಕು. ವಾರ್ತಾ ಮಾಧ್ಯಮಗಳು ಮತ್ತು ಬೇರೆ ಸಂಘಟನೆಗಳು ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಕಥೆಕಟ್ಟುತ್ತಾರೆ. ತಮಗೆ ಇಷ್ಟ ಇರೋ ವ್ಯಾಪಾರಿಗಳ ಮತ್ತು ರಾಜಕೀಯ ಪಕ್ಷಗಳ ಪರ ಮಾತಾಡ್ತಾರೆ. ಒಂದು ನ್ಯೂಸ್‌ಲ್ಲಿ ನೋಡಿರೋದನ್ನ ಕಣ್ಮುಚ್ಚಿ ನಂಬದೆ ಅದು ನಿಜನಾ ಅಂತ ತಿಳಿದುಕೊಳ್ಳೋಕೆ ಬೇರೆ ನ್ಯೂಸ್‌ ಚಾನೆಲ್‌ಗಳನ್ನೂ ನೋಡಿ. ಕೆಲವೊಮ್ಮೆ ನಿಮ್ಮ ಸ್ನೇಹಿತರು ಈಮೇಲ್‌ ಅಥವಾ ಸೋಷಿಯಲ್‌ ಮೀಡಿಯಾದಲ್ಲಿ ಗೊತ್ತಿಲ್ಲದೇ ತಪ್ಪಾದ ಮಾಹಿತಿಯನ್ನ ಕಳಿಸ್ತಾರೆ. ಹಾಗಾಗಿ ಯಾವುದೇ ನ್ಯೂಸ್‌ ಅಥವಾ ಮಾಹಿತಿ ಸಿಕ್ಕಿದರೂ ಅದು ನಿಜನಾ ಅಂತ ತಿಳ್ಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು.

   ಒಂದು ಮಾಹಿತಿ ಸಿಕ್ಕಿದಾಗ ಅದು ಇತ್ತೀಚೆಗೆ ನಡೆದಿದ್ದಾ ಮತ್ತು ಅದು ಸರಿನಾ ಅಂತ ಖಚಿತಪಡಿಸಿ. ಆ ಮಾಹಿತಿ ಯಾವ ತಾರೀಕಿಗೆ ಬಂದಿದ್ದು, ಅದರಲ್ಲಿರೋ ಸತ್ಯಾಂಶವೇನು ಮತ್ತು ಅದನ್ನ ನಂಬೋಕೆ ಆಧಾರಗಳಿದ್ಯಾ ಅಂತ ನೋಡಿ. ಗಂಭೀರವಾದ ವಿಷಯಗಳನ್ನ ಹಗುರವಾಗಿ ವಿವರಿಸಿದ್ರೆ ಮತ್ತು ಭಾವನೆಗಳನ್ನ ಬಡಿದೆಬ್ಬಿಸೋ ರೀತಿಯಲ್ಲಿ ವಿವರಿಸಲಾಗಿದ್ರೆ ಹುಷಾರಾಗಿರಿ.

   “ನಿಮಗೆ ಸಿಕ್ಕಿರೋ ಮಾಹಿತಿ ನಿಜನಾ ಅಂತ ತಿಳಿದುಕೊಳ್ಳೋದು ಕೈ ತೊಳೆಯುವಷ್ಟು ಪ್ರಾಮುಖ್ಯ.”—ಶ್ರೀಧರ್‌ ಧರ್ಮಪುರಿ, ಸೀನಿಯರ್‌ ಫುಡ್‌ ಸೇಫ್ಟಿ ಆಂಡ್‌ ನ್ಯುಟ್ರಿಶಿಯನ್‌ ಆಫೀಸರ್‌ ಯು.ಎನ್‌.

   ನಿಮ್ಮನ್ನೇ ಕೇಳಿಕೊಳ್ಳಿ: ‘ಈ ಮಾಹಿತಿ ನಿಜನಾ, ಜನರ ಅಭಿಪ್ರಾಯನಾ ಅಥವಾ ಬರೀ ಅರ್ಧ ಸತ್ಯನಾ?’

 •   ಸತ್ಯ ತಿಳ್ಕೊಳ್ಳಿ, ಬೇರೆಯವರ ಅಭಿಪ್ರಾಯಗಳನ್ನಲ್ಲ

   ಬೈಬಲಿನ ಉತ್ತರ: “ತನ್ನ ಸ್ವಂತ ಹೃದಯವನ್ನ ನಂಬುವವನು ಮೂರ್ಖ.”—ಜ್ಞಾನೋಕ್ತಿ 28:26.

   ಸಾಮಾನ್ಯವಾಗಿ ನಮಗೆ ಇಷ್ಟ ಆಗಿರೋ ವಿಷಯಗಳೇ ನಮ್ಮ ಕಣ್ಣ ಮುಂದೆ ಬಂದರೆ ನಾವು ತಕ್ಷಣ ನಂಬಿಬಿಡ್ತೀವಿ. ಇಂಟರ್‌ನೆಟ್‌ ಕಂಪನಿಗಳು ಮತ್ತು ಸೋಷಿಯಲ್‌ ಮೀಡಿಯಾಗಳು ನಾವು ಮುಂಚೆ ಹುಡುಕಿರೋ ವಿಷಯಗಳನ್ನ ಮತ್ತು ನಮಗೆ ಇಷ್ಟ ಇರೋದನ್ನೆಲ್ಲಾ ನೋಡಿ ಅದಕ್ಕೆ ತಕ್ಕಂತೆ ಸುದ್ದಿಗಳನ್ನ ಮತ್ತು ಮಾಹಿತಿಗಳನ್ನ ಕೊಡುತ್ತೆ. ಆದ್ರೆ ನಾವು ಕೇಳಿಸಿಕೊಳ್ಳಬೇಕು ಅಂತ ಆಸೆಪಡೋ ಒಂದು ವಿಷ್ಯ ಕೇಳಿಸಿಕೊಂಡಿದ್ದೀವಿ ಅಂದ ಮಾತ್ರಕ್ಕೆ ಅದು ನಿಜ ಆಗಬೇಕಂತಿಲ್ಲ.

   “ಒಂದು ವಿಷಯದ ಬಗ್ಗೆ ಯೋಚನೆ ಮಾಡೋ ಮತ್ತು ಅದು ಸರಿನಾ ತಪ್ಪಾ ಅಂತ ವಿವೇಚಿಸಿ ತಿಳಿದುಕೊಳ್ಳೋ ಸಾಮರ್ಥ್ಯ ಮನುಷ್ಯನಿಗಿದೆ. ಆದ್ರೆ ನಾವು ಕೇಳಿಸಿಕೊಳ್ಳೋಕೆ ಇಷ್ಟಪಡೋ ವಿಷಯಗಳನ್ನ ಕೇಳಿಸಿಕೊಂಡಾಗ ನಮ್ಮಲ್ಲಿರೋ ಆಸೆ, ಕನಸು, ಭಯ, ನಮ್ಮನ್ನ ಹುರಿದುಂಬಿಸೋ ವಿಷಯಗಳೆಲ್ಲಾ ಅದನ್ನ ಕಣ್ಮುಚ್ಚಿ ನಂಬೋ ತರ ಮಾಡಿಬಿಡುತ್ತೆ.”ಪೀಟರ್‌ ಡಿಟ್ಟೋ, ಸೋಷಿಯಲ್‌ ಸೈಕಾಲಜಿಸ್ಟ್‌.

   ನಿಮ್ಮನ್ನೇ ಕೇಳಿಕೊಳ್ಳಿ: ‘ನನಗೆ ಇದು ಕೇಳೋಕೆ ಇಷ್ಟ ಆಗಿರೋದ್ರಿಂದ ಮಾತ್ರ ನಂಬುತ್ತಿದ್ದೇನಾ?’

 •   ಸುಳ್ಳು ಸುದ್ದಿ ಹರಡೋದನ್ನ ತಡೆಯೋಣ

   ಬೈಬಲಿನ ಉತ್ತರ: “ನೀವು ಸುಳ್ಳು ಸುದ್ದಿ ಹಬ್ಬಿಸಬಾರದು.”—ವಿಮೋಚನಕಾಂಡ 23:1.

   ನಾವು ಬೇರೆಯವರಿಗೆ ಕಳಿಸೋ ಮಾಹಿತಿ ಅವರ ಯೋಚನೆ ಮತ್ತು ಅವರು ನಡ್ಕೊಳ್ಳೋ ವಿಧದ ಮೇಲೆ ಪ್ರಭಾವ ಬೀರುತ್ತೆ. ನಮಗೆ ಗೊತ್ತಿಲ್ಲದೆ ತಪ್ಪಾದ ಮಾಹಿತಿ ಕಳಿಸಿರೋದಾದ್ರೂ ಅದರ ಪರಿಣಾಮ ತುಂಬ ಕೆಟ್ಟದಾಗಿರುತ್ತೆ.

   “ನಾವೊಂದು ಮಾಹಿತಿಯನ್ನ ಬೇರೆಯವರತ್ರ ಹಂಚಿಕೊಳ್ಳೋ ಮುಂಚೆ ನಾವು ಕೇಳಿಕೊಳ್ಳಬೇಕಾದ ಪ್ರಾಮುಖ್ಯ ಪ್ರಶ್ನೆಯೇನಂದ್ರೆ ‘ಈ ವಿಷ್ಯ ನಿಜ ಅನ್ನೋ ಖಾತ್ರಿ ನನಗಿದೆಯಾ?’ ಎಲ್ಲರೂ ಈ ತರ ಪ್ರಶ್ನೆ ಕೇಳ್ಕೊಂಡ್ರೆ ಆನ್‌ಲೈನ್‌ನಲ್ಲಿ ತಪ್ಪಾದ ಮಾಹಿತಿ ಹಬ್ಬೋದು ಕಮ್ಮಿಯಾಗುತ್ತೆ.”—ಪೀಟರ್‌ ಆಡಮ್ಸ್‌, ನ್ಯೂಸ್‌ ಲಿಟ್ರೆಸಿ ಪ್ರಾಜೆಕ್ಟ್‌ನ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌.

   ನಿಮ್ಮನ್ನೇ ಕೇಳಿಕೊಳ್ಳಿ: ‘ಈ ಮಾಹಿತಿ ನಿಜ ಅಂತ ನನಗೆ ಚೆನ್ನಾಗಿ ಗೊತ್ತಿರೋದಕ್ಕೆ ಬೇರೆಯವರಿಗೆ ಕಳಿಸ್ತಿದ್ದೀನಾ?’