ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಂತೆಯನ್ನು ನಿಯಂತ್ರಿಸುವುದು ಹೇಗೆ?

ಚಿಂತೆಯನ್ನು ನಿಯಂತ್ರಿಸುವುದು ಹೇಗೆ?

 ಅತಿಯಾಗಿ ಚಿಂತೆಮಾಡ್ತಾ ಇದ್ರೆ ನಮ್ಮ ದೇಹ, ಮನಸ್ಸು ಎರಡೂ ಹಾಳಾಗತ್ತೆ. ಮೂರು ಹೊತ್ತು ಚಿಂತೆಯಲ್ಲೇ ಮುಳುಗಿದ್ರೆ ಸಮಸ್ಯೆ ಸರಿಹೋಗಲ್ಲ ಇನ್ನೂ ಜಾಸ್ತಿಯಾಗುತ್ತೆ.

ಚಿಂತಿಸದೇ ಇರೋಕೆ ಸಲಹೆಗಳು

 •  ಕೆಟ್ಟ ಸುದ್ಧಿಗಳಿಗೆ ಗಮನಕೊಡಬೇಡಿ. ಒಂದು ವಿಷಯದ ಬಗ್ಗೆ ಎಷ್ಟು ಬೇಕೋ ಅಷ್ಟನ್ನೇ ತಿಳ್ಕೊಳ್ಳಿ. ಹೆಚ್ಚು ಅದ್ರ ಬಗ್ಗೆನೇ ಮಾತಾಡ್ತಾ ಯೋಚಿಸ್ತಾ ಇದ್ರೆ ನಿಮ್ಮ ಭಯ ಆತಂಕ ಹೆಚ್ಚಾಗುತ್ತೆ.

   ಬೈಬಲ್‌ ತತ್ವ: “ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.”—ಜ್ಞಾನೋಕ್ತಿ 17:22.

   “ತಾಜಾ ಸುದ್ಧಿಗಳನ್ನು ಕೇಳಿಸಿಕೊಳ್ಳೋ ಕುತೂಹಲ ಸಹಜ. ಆದ್ರೆ ಅದೇ ಒಂದು ರೂಢಿಯಾಗಿಬಿಟ್ರೆ ಒಳ್ಳೇದಲ್ಲ. ನ್ಯೂಸ್‌ ನೋಡೋದು ಕಮ್ಮಿಮಾಡ್ದಾಗ ನನ್ನ ಚಿಂತೆನೂ ಕಮ್ಮಿಯಾಯ್ತು.”—ಜಾನ್‌.

   ಸ್ವಲ್ಪ ಯೋಚಿಸಿ: ಪ್ರತಿಯೊಂದಕ್ಕೂ ನಾನು ನ್ಯೂಸ್‌ ನೋಡ್ಲೇಬೇಕಾ?

 •  ಶೆಡ್ಯೂಲ್‌ ಮಾಡಿ. ಬೇಗ ಎದ್ದೇಳಿ, ಊಟ ಮಾಡಿ, ಕೆಲ್ಸ ಮಾಡಿ, ನಿದ್ದೆ ಮಾಡೋಕೂ ಟೈಮ್‌ ಫಿಕ್ಸ್‌ ಮಾಡಿ. ನಿಮ್ಗೆ ಒಳ್ಳೇ ಶೆಡ್ಯೂಲ್‌ ಇದ್ರೆ ಚಿಂತೆಯಿಲ್ಲದೆ ಆರಾಮಾಗಿ ಇರೋಕೆ ಆಗುತ್ತೆ.

   ಬೈಬಲ್‌ ತತ್ವ: “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ.”—ಜ್ಞಾನೋಕ್ತಿ 21:5.

   “ಕೋವಿಡ್‌ ಶುರುವಾದಾಗಿಂದ ನನ್ನ ಶೆಡ್ಯೂಲನ್ನೇ ಮರೆತೆ. ಇಡೀ ಹೊತ್ತು ಟಿವಿ ಮುಂದೆ ಕೂತ್ಕೊತಿದ್ದೆ. ನನ್ನ ಟೈಮ್‌ ಹಾಳು ಮಾಡೋಕೆ ನಂಗೆ ಇಷ್ಟ ಇರ್ಲಿಲ್ಲ. ಅದ್ಕೆ ಮತ್ತೆ ಶೆಡ್ಯೂಲ್‌ ಮಾಡ್ಕೊಂಡೆ.”—ಜೋಸೆಫ್‌.

   ಸ್ವಲ್ಪ ಯೋಚಿಸಿ: ಪ್ರತಿದಿನ ಸಂತೃಪ್ತಿ ಕೊಡೋ ಕೆಲಸಗಳನ್ನ ಮಾಡೋ ಒಂದು ಶೆಡ್ಯೂಲ್‌ ಮಾಡ್ಕೊಂಡಿದ್ದೀನಾ?

 •  ಒಳ್ಳೇ ವಿಷಯಗಳ ಮೇಲೆ ಗಮನ ಇಡಿ. ಮುಗಿದು ಹೋಗಿರೊ ಅಥವಾ ಮುಂದೆ ಆಗಲಿಕ್ಕಿರೊ ವಿಷ್ಯಗಳ ಬಗ್ಗೆ ಯೋಚಿಸ್ತಾ ಕೂತ್ರೆ ನಮ್ಮ ಚಿಂತೆ ಇನ್ನೂ ಜಾಸ್ತಿ ಆಗುತ್ತೆ. ಅದರ ಬದ್ಲು ನಿಮಗೆ ಇಷ್ಟ ಇರೊ ವಿಷ್ಯಗಳ ಬಗ್ಗೆ ಯೋಚಿಸಿ.

   ಬೈಬಲ್‌ ತತ್ವ: “ಸಹಾಯವನ್ನ ಎಷ್ಟು ನೆನಪಿಸ್ಕೊಳ್ತೀರ ಅಂತ ತೋರಿಸಿ.”—ಕೊಲೊಸ್ಸೆ 3:15.

   “ಬೈಬಲ್‌ ಓದೋದ್ರಿಂದ ಬರೀ ಒಳ್ಳೇ ವಿಷ್ಯಗಳ ಬಗ್ಗೆನೇ ಯೋಚಿಸೋಕೆ ನಂಗೆ ಸಹಾಯ ಆಗುತ್ತೆ. ಇದೇನು ದೊಡ್ಡ ವಿಷ್ಯ ಅಲ್ಲ ಅಂತ ಅನಿಸಿದ್ರೂ ಹೀಗೆ ಮಾಡೋದ್ರಿಂದ ತುಂಬ ಪ್ರಯೋಜ್ನ ಇದೆ!”—ಲಿಸಾ.

   ಸ್ವಲ್ಪ ಯೋಚಿಸಿ: ನಾನು ನೆಗೆಟಿವ್‌ ವಿಷ್ಯಗಳ ಬಗ್ಗೆ ಯೋಚಿಸ್ತಾ ಪಾಸಿಟಿವ್‌ ವಿಷ್ಯಗಳನ್ನ ಮರೆತು ಬಿಡ್ತಿದ್ದೀನಾ?

 •  ಬೇರೆಯವರ ಬಗ್ಗೆ ಯೋಚಿಸಿ. ನಾವು ಒಬ್ರೇ ಇದ್ರೆ ಚಿಂತೆ ಜಾಸ್ತಿ ಆಗುತ್ತೆ. ಅದಕ್ಕೆ ಅಗತ್ಯದಲ್ಲಿ ಇರುವವರಿಗೆ ಸಹಾಯ ಮಾಡಿದ್ರೆ ನಮ್ಮ ಚಿಂತೆ ಕಡಿಮೆ ಆಗುತ್ತೆ.

   ಬೈಬಲ್‌ ತತ್ವ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

   “ಬೇರೆಯವರಿಗೆ ಸಹಾಯ ಮಾಡ್ದಾಗ ನಂಗೆ ಖುಷಿಯಾಗುತ್ತೆ. ಅವ್ರಿಗೆ ಖುಷಿಯಾಗೊ ವಿಷ್ಯಗಳನ್ನ ಮಾಡಿದಾಗ ನನ್ನ ಚಿಂತೆನೂ ಕಡಿಮೆ ಆಗುತ್ತೆ. ಚಿಂತೆ ಮಾಡೋಕೆ ಟೈಮೂ ಇರಲ್ಲ.”—ಮರಿಯಾ.

   ಸ್ವಲ್ಪ ಯೋಚಿಸಿ: ತುಂಬಾ ಅಗತ್ಯದಲ್ಲಿ ಇರುವವರಿಗೆ ಸಹಾಯ ಮಾಡೋಕೆ ನಾನು ಏನೆಲ್ಲಾ ಮಾಡ್ತಿದ್ದೀನಿ?

 •  ಆರೋಗ್ಯವಾಗಿರಿ. ವ್ಯಾಯಾಮ ಮಾಡಿ, ಚೆನ್ನಾಗಿ ನಿದ್ದೆ ಮಾಡಿ, ಪೌಷ್ಠಿಕ ಆಹಾರ ತಿನ್ನಿ. ಒಳ್ಳೇ ಆರೋಗ್ಯ ಇದ್ರೆ ಚಿಂತೆ ಇಲ್ಲದೆ ಖುಷಿ ಖುಷಿಯಾಗಿ ಇರ್ತಿರ.

   ಬೈಬಲ್‌ ತತ್ವ: “ವ್ಯಾಯಾಮದಿಂದ ಸ್ವಲ್ಪ ಪ್ರಯೋಜನ ಇದೆ.”—1 ತಿಮೊತಿ 4:8, ಪಾದಟಿಪ್ಪಣಿ.

   “ನನ್ಗೂ ನನ್ನ ಮಗನಿಗೂ ಹೊರಗಡೆ ಹೋಗಿ ವ್ಯಾಯಾಮ ಮಾಡೋಕೆ ಆಗದೆ ಇರೋದ್ರಿಂದ ಮನೆಲೇ ಮಾಡ್ತೀವಿ. ಇದ್ರಿಂದ ನಮ್ಮ ಆರೋಗ್ಯನೂ ಚೆನ್ನಾಗಿದೆ, ನಾವಿಬ್ರೂ ಫ್ರೆಂಡ್ಸ್‌ ತರನೂ ಇದ್ದೀವಿ.”—ಕ್ಯಾಥರಿನ್‌.

   ಸ್ವಲ್ಪ ಯೋಚಿಸಿ: ನಾನು ಇನ್ನಷ್ಟು ಆರೋಗ್ಯವಾಗಿರೋಕೆ ನನ್ನ ಆಹಾರ ಮತ್ತು ವ್ಯಾಯಾಮದಲ್ಲಿ ಏನಾದ್ರೂ ಬದಲಾವಣೆ ಮಾಡ್ಕೊಬೇಕಾ?

 ನಮ್ಮ ಚಿಂತೆ ಕಡಿಮೆ ಮಾಡೋಕೆ ಇನ್ನಷ್ಟು ಸಲಹೆಗಳು ಬೈಬಲಲ್ಲಿದೆ. ಅಲ್ಲಿ ಭವಿಷ್ಯದ ಬಗ್ಗೆ ಹೇಳಿರೊ ವಿಷ್ಯಗಳಿಂದ ತುಂಬ ಜನರಿಗೆ ಪ್ರಯೋಜ್ನ ಆಗಿದೆ. ಇದರ ಬಗ್ಗೆ ತಿಳಿಯೋಕೆ “ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?” ಲೇಖನ ನೋಡಿ.