ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸದಾ ಎಚ್ಚರವಾಗಿರಿ! 

ಒಳ್ಳೇ ನಡತೆ ಕಣ್ಮರೆ ಆಗ್ತಿದೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಒಳ್ಳೇ ನಡತೆ ಕಣ್ಮರೆ ಆಗ್ತಿದೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಸಭ್ಯತೆ ಅಥವಾ ಒಳ್ಳೇ ನಡತೆ ದಿನದಿಂದ ದಿನಕ್ಕೆ ಕಣ್ಮರೆ ಆಗ್ತಿದೆ. ರೋಗಿಗಳು ತಾಳ್ಮೆ ಇಲ್ಲದೆ ಡಾಕ್ಟರ್‌ಗಳ ಮೇಲೆ ಕಿರಿಚಾಡ್ತಾರೆ; ರೆಸ್ಟೊರೆಂಟ್‌ಗೆ ಬರೋರು ಅಲ್ಲಿ ಕೆಲ್ಸ ಮಾಡೋ ಸರ್ವರ್‌ಗಳನ್ನ ಬಾಯಿಗೆ ಬಂದ ಹಾಗೆ ಬಯ್ತಾರೆ; ವಿಮಾನದಲ್ಲಿ ಪ್ರಯಾಣ ಮಾಡೋರು ಅದ್ರಲ್ಲಿ ಕೆಲ್ಸ ಮಾಡೋರ ಮೇಲೆ ದಾಳಿ ಮಾಡ್ತಾರೆ; ಶಾಲೆಯಲ್ಲಿ ಮಕ್ಕಳು ಶಿಕ್ಷಕರಿಗೆ ಬೆದರಿಕೆ ಹಾಕ್ತಾರೆ, ಹಲ್ಲೆ ಮಾಡ್ತಾರೆ, ಅವ್ರನ್ನ ಗೇಲಿ ಮಾಡ್ತಾರೆ; ಕೆಲವು ರಾಜಕಾರಣಿಗಳು ನೀಚ ಕೆಲಸಗಳನ್ನ ಮಾಡ್ತಿದ್ರೆ, ಇನ್ನ ಕೆಲವು ರಾಜಕಾರಣಿಗಳು ತಾವು ತುಂಬಾ ಸಾಚಾ ಅಂತ ತೋರಿಸ್ಕೊಳ್ತಾರೆ.

 ಒಳ್ಳೇ ನಡತೆಯನ್ನ ಬೆಳೆಸಿಕೊಳ್ಳೋಕೆ ಬೈಬಲ್‌ ತುಂಬಾ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಇವತ್ತು ಸಭ್ಯತೆ ಯಾಕೆ ಕಣ್ಮರೆ ಆಗ್ತಿದೆ ಅನ್ನೋದಕ್ಕೂ ಕಾರಣ ಹೇಳುತ್ತೆ.

ಸಭ್ಯತೆ ಕಣ್ಮರೆಯಾಗೋದಕ್ಕೆ ಕಾರಣ ಏನು?

 ಒಳ್ಳೇ ರೀತಿ ನಡ್ಕೊಳ್ಳೋದು, ನೈತಿಕತೆ ಕಾಪಾಡ್ಕೊಳ್ಳೋದೇ ಸಭ್ಯತೆ. ಆದ್ರೆ ಇತ್ತೀಚೆಗೆ ಈ ಸಭ್ಯತೆ ಕಾಣೆಯಾಗ್ತಿದೆ.

  •   ಕಳೆದ 22 ವರ್ಷಗಳಿಂದ ಜನರ ನಡತೆ ತುಂಬ ಹಾಳಾಗಿದೆ ಅಂತ ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಒಂದು ಸಮೀಕ್ಷೆ ಹೇಳ್ತು.

  •   28 ದೇಶಗಳಲ್ಲಿ ನಡೆದ ಇನ್ನೊಂದು ಸಮೀಕ್ಷೆಯಲ್ಲಿ ಸುಮಾರು 32,000ಕ್ಕಿಂತ ಹೆಚ್ಚು ಜನ ಭಾಗವಹಿಸಿದ್ರು. ಅದರಲ್ಲಿ ಭಾಗವಹಿಸಿದ 65 ಪ್ರತಿಶತದಷ್ಟು ಜನ, ಮುಂಚೆಗಿಂತ ಈಗ ಜನರ ನಡತೆ ತುಂಬ ಹಾಳಾಗಿದೆ ಅಂತ ಹೇಳಿದ್ರು.

 ಜನ ಈ ತರ ನಡ್ಕೊಳ್ತಾರೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು.

  •   “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, . . .  ಉಗ್ರರು” ಇರ್ತಾರೆ.—2 ತಿಮೊತಿ 3:1-3.

 ಈ ಭವಿಷ್ಯವಾಣಿ ಹೇಗೆ ನಿಜ ಆಗ್ತಿದೆ ಅಂತ ತಿಳಿದುಕೊಳ್ಳೋಕೆ “‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?” ಅನ್ನೋ ಲೇಖನ ಓದಿ.

ಸಭ್ಯವಾಗಿ ನಡ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ?

 ಸಭ್ಯತೆ ಕಣ್ಮರೆಯಾಗ್ತಿರೋ ಈ ಲೋಕದಲ್ಲಿ ಲಕ್ಷಾಂತರ ಜನರಿಗೆ ಒಳ್ಳೇ ನಡತೆ ಕಾಪಾಡ್ಕೊಳ್ಳೋಕೆ ಬೈಬಲ್‌ ಸಹಾಯ ಮಾಡಿದೆ. ಅದರಲ್ಲಿರೋ ಸಲಹೆಗಳನ್ನ “ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.” (ಕೀರ್ತನೆ 111:8) ಅಂಥ ಕೆಲವು ಸಲಹೆಗಳನ್ನ ನೋಡಿ:

  •   ಬೈಬಲ್‌ ಏನು ಹೇಳುತ್ತೆ: “ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಮತ್ತಾಯ 7:12.

     ಇದ್ರ ಅರ್ಥ: ಬೇರೆಯವ್ರು ನಮಗೆ ಗೌರವ ಕೊಡಬೇಕು, ದಯೆಯಿಂದ ನಡ್ಕೊಬೇಕು ಅಂತ ನಾವು ಇಷ್ಟ ಪಡ್ತೀವಿ. ಅದೇ ತರ ನಾವೂ ಬೇರೆವ್ರ ಹತ್ರ ನಡ್ಕೊಬೇಕು.

  •   ಬೈಬಲ್‌ ಏನು ಹೇಳುತ್ತೆ: “ನೀವೀಗ ಮೋಸ ಮಾಡೋದನ್ನ ಬಿಟ್ಟಿರೋದ್ರಿಂದ ಒಬ್ರು ಇನ್ನೊಬ್ರ ಹತ್ರ ಸತ್ಯಾನೇ ಹೇಳಿ.”—ಎಫೆಸ 4:25.

     ಇದ್ರ ಅರ್ಥ: ನಾವು ಏನೇ ಹೇಳಲಿ, ಏನೇ ಮಾಡಲಿ ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕರಾಗಿರಬೇಕು.

 ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳ್ಕೊಳ್ಳೋಕೆ