ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

BalanceFormcreative/iStock via Getty Images Plus

ಬೇರೆಯವ್ರಿಗೆ ಸಹಾಯ ಮಾಡಿ ಒಂಟಿತನ ಅನ್ನೋ ಬಲೆಯಿಂದ ಹೊರಗೆ ಬನ್ನಿ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೇರೆಯವ್ರಿಗೆ ಸಹಾಯ ಮಾಡಿ ಒಂಟಿತನ ಅನ್ನೋ ಬಲೆಯಿಂದ ಹೊರಗೆ ಬನ್ನಿ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಲೋಕದಲ್ಲಿರೋ ಎಷ್ಟೋ ಜನ್ರಿಗೆ ‘ನಾನು ಒಂಟಿ, ನನ್ನ ಜೊತೆ ಯಾರು ಫ್ರೆಂಡ್ಸ್‌ ಆಗಲ್ಲ’ ಅನ್ನೋ ಭಾವನೆ ಇದೆ. ಆದ್ರೆ ಅಂಥವರು ಬೇರೆಯವ್ರಿಗೆ ಸಹಾಯ ಮಾಡಿದ್ರೆ ಈ ಭಾವನೆಯಿಂದ ಹೊರಗೆ ಬರಬಹುದು ಅಂಥ ತಜ್ಞರು ಹೇಳ್ತಾರೆ.

  •   “ಬೇರೆಯವ್ರಿಗೆ ಸಹಾಯ ಮಾಡಿದ್ರೆ ನಾವು ಖುಷಿಯಾಗಿ ಇರ್ತೀವಿ, ಒಂಟಿತನದಿಂದ ಹೊರಗೆ ಬರ್ತೀವಿ. ಅಷ್ಟೇ ಅಲ್ಲ, ಜನ್ರು ನಮ್ಮ ಜೊತೆ ಫ್ರೆಂಡ್ಸ್‌ ಆಗ್ತಾರೆ.”—ಯು.ಎಸ್‌. ನ್ಯಾಷನಲ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಹೆಲ್ತ್‌.

 ಬೇರೆಯವ್ರಿರಿಗೆ ಹೇಗೆ ಸಹಾಯ ಮಾಡಬಹುದು ಅಂತ ಬೈಬಲ್‌ ಕೆಲವು ಸಲಹೆಗಳನ್ನ ಕೊಡುತ್ತೆ. ಅದನ್ನ ಪಾಲಿಸಿದ್ರೆ ನಾವು ಒಂಟಿತನ ಅನ್ನೋ ಬಲೆಯಿಂದ ಹೊರಗೆ ಬರಬಹುದು.

ನೀವೇನು ಮಾಡಬಹುದು?

 ದೊಡ್ಡ ಮನಸ್ಸು ತೋರಿಸಿ. ಬೇರೆಯವ್ರ ಜೊತೆ ಸಮಯ ಕಳಿಯೋಕೆ ಅದ್ರಲ್ಲೂ ನೇರವಾಗಿ ಹೋಗಿ ಸಮಯ ಕಳಿಯೋಕೆ ಯಾವಾಗ್ಲೂ ರೆಡಿಯಾಗಿರಿ. ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಹತ್ರ ಹಂಚ್ಕೊಳ್ಳಿ, ಆಗ ಅವ್ರಿಗೆ ಖುಷಿಯಾಗುತ್ತೆ ಮತ್ತು ಅವರೂ ನಿಮ್ಮ ಜೊತೆ ಫ್ರೆಂಡ್ಸ್‌ ಆಗ್ತಾರೆ.

  •   ಬೈಬಲ್‌ ತತ್ವ: “ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.”—ಲೂಕ 6:38.

 ಬೇರೆಯವ್ರಿಗೆ ಸಹಾಯ ಮಾಡಿ. ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋಕೆ ಯಾವಾಗ್ಲೂ ಮುಂದೆ ಬನ್ನಿ. ಅವರು ಮನಸ್ಸು ಬಿಚ್ಚಿ ಮಾತಾಡುವಾಗ ಚೆನ್ನಾಗಿ ಕೇಳಿಸ್ಕೊಳ್ಳಿ, ಅವ್ರಿಗೆ ಏನು ಬೇಕು ಅಂತ ತಿಳ್ಕೊಂಡು ಅದನ್ನ ಮಾಡಿ.

  •   ಬೈಬಲ್‌ ತತ್ವ: “ಒಬ್ಬ ಸ್ನೇಹಿತ ಎಲ್ಲಾ ಸಮಯದಲ್ಲೂ ಸಹಾಯ ಮಾಡ್ತಾನೆ.”— ಜ್ಞಾನೋಕ್ತಿ 17:17, ಕಂಟೆಂಪ್ರರಿ ಇಂಗ್ಲಿಷ್‌ ವರ್ಷನ್‌.

 ಬೇರೆಯೆವ್ರ ಜೊತೆ ಹೇಗೆ ಸ್ನೇಹ ಸಂಬಂಧ ಬೆಳೆಸ್ಕೊಳ್ಳೋದು ಅನ್ನೋದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ “ಕುಟುಂಬ ಮತ್ತು ಬಂಧುಮಿತ್ರರು” ಅನ್ನೋ ಲೇಖನ ನೋಡಿ.