ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?

ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?

 ನಿಮ್ಮ ಆರೋಗ್ಯ ಇದ್ದಕ್ಕಿದ್ದಹಾಗೆ ಹಾಳಾಗ್ತಿದಿಯಾ? ತುಂಬ ಚಿಂತೆ ಆಗ್ತಿರಬಹುದು ಅಲ್ವ, ಹಣನೂ ಖರ್ಚಾಗ್ತಿರಬಹುದು. ಇಂಥ ಸನ್ನಿವೇಶದಲ್ಲಿ ನಿವೇನ್‌ ಮಾಡ್ಬಹುದು? ನಿಮ್ಮ ಕುಟುಂಬದವರಿಗೋ ಅಥವಾ ನಿಮ್ಮ ಸ್ನೇಹಿತರಿಗೋ ಇಂಥ ಪರಿಸ್ಥಿತಿ ಬಂದ್ರೇ ನೀವು ಹೇಗೆ ಸಹಾಯ ಮಾಡ್ಬಹುದು? ಬೈಬಲಿಂದ ನಿಮಗೆ ಸಹಾಯ ಸಿಗುತ್ತೆ. ಹಾಗಂತ ಅದು ವೈದ್ಯಕೀಯ ಪುಸ್ತಕಯೇನಲ್ಲ, ಆದ್ರೆ ಅದರಲ್ಲಿರೋ ಸಲಹೆಗಳು ಆರೋಗ್ಯ ಸಮಸ್ಯೆ ಬಂದಾಗ ಏನ್ಮಾಡಬಹುದು ಅಂಥ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ.

ಆರೋಗ್ಯ ಸಮಸ್ಯೆ ನಿಭಾಯಿಸಲು ಒಳ್ಳೆ ಟಿಪ್ಸ್‌

 •   ಚಿಕಿತ್ಸೆ ಪಡೆಯಿರಿ

   ಬೈಬಲ್‌ ಹೇಳೋದು: “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ.”—ಮತ್ತಾಯ 9:12.

   ನಾವೇನ್‌ ಮಾಡ್ಬೇಕು: ಅಗತ್ಯವಿರುವಾಗ ಡಾಕ್ಟರ್‌ ಹತ್ರ ಹೋಗಿ.

   ಹೀಗೆ ಮಾಡಿ: ಒಳ್ಳೇ ಡಾಕ್ಟರ್‌ ಹತ್ರ ಹೋಗಿ. ಕೆಲವೊಮ್ಮೆ, ಚಿಕಿತ್ಸೆ ಪಡೆಯೋಕೆ ಮುಂಚೆ ಇನ್ನೊಬ್ಬ ಡಾಕ್ಟರ್‌ ಸಲಹೆ ಕೇಳೋದು ಒಳ್ಳೆದಾಗಿರುತ್ತೆ. (ಜ್ಞಾನೋಕ್ತಿ 14:15) ಚಿಕಿತ್ಸೆ ನೀಡುವವರಿಗೆ ನಿಮ್ಮ ರೋಗಲಕ್ಷಣಗಳ ಬಗ್ಗೆ ಹೇಳಿ. (ಜ್ಞಾನೋಕ್ತಿ 15:22) ನಿಮಗಿರೋ ಕಾಯಿಲೆ ಬಗ್ಗೆ ಮತ್ತು ಅದಕ್ಕಿರೋ ಚಿಕಿತ್ಸೆಗಳ ಬಗ್ಗೆ ಪೂರ್ತಿ ಮಾಹಿತಿ ಪಡ್ಕೊಳಿ. ಹೀಗೆ ಮಾಡೋದ್ರಿಂದ ನಿಮ್ಮ ಸನ್ನಿವೇಶವನ್ನು ನಿಭಾಯಿಸಲು ಸುಲಭವಾಗುತ್ತೆ.

 •   ವ್ಯಾಯಾಮ ಮಾಡಿ

   ಬೈಬಲ್‌ ಹೇಳೋದು: “ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ.”—1 ತಿಮೊತಿ 4:8.

   ನಾವೇನ್‌ ಮಾಡ್ಬೇಕು: ದಿನಾಲು ವ್ಯಾಯಾಮ ಮಾಡೋದ್ರಿಂದ ನಿಮಗೆ ಹೆಚ್ಚು ಪ್ರಯೋಜನ ಆಗುತ್ತೆ.

   ಹೀಗೆ ಮಾಡಿ: ವ್ಯಾಯಾಮ ಮಾಡೋದು, ಆರೋಗ್ಯಕರ ಆಹಾರ ಸೇವಿಸೋದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯೋದನ್ನ ರೂಢಿ ಮಾಡ್ಕೊಳ್ಳಿ. ಕೆಲವು ವಿಷ್ಯಗಳನ್ನು ಮಾಡೋಕೆ ನಿಮಗೆ ಕಷ್ಟ ಆಗ್ತಿರೋದಾದ್ರು ಈಗಿನ ಸನ್ನಿವೇಶಕ್ಕೆ ಹೊಂದ್ಕೊಳ್ಳೋಕೆ ನೀವು ಮಾಡೋ ಪ್ರಯತ್ನ ವ್ಯರ್ಥ ಆಗಲ್ಲ. ನೀವು ಏನೇ ಮಾಡೋದಾದ್ರು ಅದು ನಿಮ್ಮ ಆರೋಗ್ಯ ಮತ್ತು ಪಡ್ಕೊತಿರೋ ಚಿಕಿತ್ಸೆಗೆ ಅಡ್ಡ ಬರದ ಹಾಗೆ ನೋಡ್ಕೊಳ್ಳಿ.

 •   ಸಹಾಯ ಪಡ್ಕೊಳ್ಳಿ

   ಬೈಬಲ್‌ ಹೇಳೋದು: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.

   ನಾವೇನ್‌ ಮಾಡ್ಬೇಕು: ಕಷ್ಟದಲ್ಲಿರೋವಾಗ ನಿಮ್ಮ ಸ್ನೇಹಿತರು ಸಹಾಯ ಮಾಡಬಹುದು.

   ಹೀಗೆ ಮಾಡಿ: ನಿಮ್ಮ ಕ್ಲೋಸ್‌ ಫ್ರೆಂಡ್‌ ಹತ್ರ ನಿಮ್ಮ ಭಾವನೆಗಳನ್ನೆಲ್ಲಾ ಹೇಳ್ಕೊಳ್ಳಿ. ಇದ್ರಿಂದ ನಿಮ್ಮ ಮನಸ್ಸಿನ ಭಾರ ಕಡಿಮೆ ಆಗುತ್ತೆ. ಕೆಲವು ಸ್ನೇಹಿತರೋ ಅಥವಾ ಸಂಬಂಧಿಕರೋ ನಿಮ್ಗೆ ಸಹಾಯ ಮಾಡೋಕೆ ಇಷ್ಟ ಪಡಬಹುದು. ಅವರ ಹತ್ರ ನೀವು ಮಾತಾಡಿ ಹೇಳೋದಾದ್ರೆ ನಿಮ್ಗೆ ಯಾವ ಸಹಾಯಬೇಕು ಅಂತ ಅವ್ರಿಗೆ ಗೊತ್ತಾಗುತ್ತೆ. ಆದ್ರೆ ಎಲ್ಲಾ ಬೇರೆಯವರೇ ಮಾಡ್ಬೇಕು ಅಂತ ಯೋಚಿಸ್ಬೇಡಿ. ಚಿಕಿತ್ಸೆ ಪಡ್ಕೊತಿರೋವಾಗ ನಿಮ್ಮನ್ನ ನೋಡೋಕೆ ತುಂಬ ಜನ ಬರಬಹುದು. ಹಾಗಾಗಿ ಎಷ್ಟು ಜನ ಬರ್ಬೇಕು ಅನ್ನೋದರ ಬಗ್ಗೆ ಸ್ವಲ್ಪ ಗಮನಕೊಡಿ.

 •   ಒಳ್ಳೆದನ್ನೇ ಯೋಚನೆಮಾಡಿ

   ಬೈಬಲ್‌ ಹೇಳೋದು: “ಹರ್ಷಹೃದಯವು ಒಳ್ಳೆ ಔಷಧ, ಕುಗ್ಗಿದ ಮನದಿಂದ ಒಣಮೈ.”—ಜ್ಞಾನೋಕ್ತಿ 17:22.

   ನಾವೇನ್‌ ಮಾಡ್ಬೇಕು: ಒಳ್ಳೇದನ್ನೇ ಯೋಚನೆ ಮಾಡ್ತಾ ಎಲ್ಲಾ ಸರಿಹೋಗುತ್ತೆ ಅಂತ ನಂಬಿಕೆ ಇಟ್ರೆ ಚಿಂತೆ ಮತ್ತು ಆರೋಗ್ಯ ಸಮಸ್ಯೆ ನಿಭಾಯಿಸಲು ಸಾಧ್ಯವಾಗುತ್ತೆ.

   ಹೀಗೆ ಮಾಡಿ: ನಿಮ್ಮ ಈಗಿನ ಸನ್ನಿವೇಶಕ್ಕೆ ಹೊಂದ್ಕೊಳ್ತಾ ಇರೋವಾಗ, ನಿಮ್ಮಿಂದಾಗೋ ಕೆಲಸ ಮಾತ್ರ ಮಾಡಿ. ಮುಂಚಿನ ತರ ಕೆಲಸ ಮಾಡಕ್ಕೆ ಆಗ್ತಿಲ್ಲ ಅಂತ ಬೇಜಾರು ಮಾಡ್ಕೊಬೇಡಿ. ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡ್ಬೇಡಿ. (ಗಲಾತ್ಯ 6:4) ನಿಮ್ಮಿಂದ ಸಾಧ್ಯವಾಗೋ ಗುರಿಗಳನ್ನಿಡಿ ಆಗ ಒಳ್ಳೇದನ್ನೇ ಯೋಚಿಸೋಕೆ ಆಗುತ್ತೆ. (ಜ್ಞಾನೋಕ್ತಿ 24:10) ನಿಮ್ಮಿಂದಾದಷ್ಟು ಬೇರೆಯವರಿಗೆ ಸಹಾಯಮಾಡಿ. ಈ ರೀತಿ ಸಹಾಯ ಮಾಡ್ದಾಗ ನೀವು ಸಂತೋಷವಾಗಿ ಇರ್ತೀರ ಇದರಿಂದ ನಿಮ್ಮ ಚಿಂತೆನೂ ಕಡಿಮೆಯಾಗುತ್ತೆ.—ಅಪೊಸ್ತಲರ ಕಾರ್ಯಗಳು 20:35.

ಆರೋಗ್ಯ ಸಮಸ್ಯೆ ಇರುವಾಗ ದೇವರು ನಿಮಗೆ ಸಹಾಯ ಮಾಡ್ತಾರಾ?

 ಆರೋಗ್ಯ ಸಮಸ್ಯೆ ನಿಭಾಯಿಸೋಕೆ ಯೆಹೋವ ದೇವರು a ಸಹಾಯ ಮಾಡ್ತಾರೆ ಅಂತ ಬೈಬಲಲ್ಲಿದೆ. ದೇವರು ಅದ್ಭುತವಾಗಿ ವಾಸಿಮಾಡದಿದ್ರೂ, ಅವರ ಮೇಲೆ ನಂಬಿಕೆ ಇಡೋವ್ರಿಗೆ ಈ ಕೆಳಗೆ ಕೊಟ್ಟಿರೋ ರೀತಿಗಳಲ್ಲಿ ಸಹಾಯ ಮಾಡ್ತಾರೆ.

 ಶಾಂತಿ. “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು” ಯೆಹೋವ ದೇವರು ಕೊಡ್ತಾರೆ. (ಫಿಲಿಪ್ಪಿ 4:7) ಈ ರೀತಿಯ ಮನಶ್ಶಾಂತಿ ಅಥವಾ ನೆಮ್ಮದಿ, ಚಿಂತೆಯಿಂದ ಕುಗ್ಗಿ ಹೋಗದೆ ಇರೋಕೆ ಸಹಾಯ ಮಾಡುತ್ತೆ. ಚಿಂತೆಯಲ್ಲಿರೋವಾಗ ಪ್ರಾರ್ಥನೆ ಮಾಡೋವ್ರಿಗೆ ದೇವರು ಸಹಾಯ ಮಾಡ್ತಾರೆ.—1 ಪೇತ್ರ 5:7.

 ವಿವೇಕ. ಸರಿಯಾದ ನಿರ್ಣಯ ಮಾಡಲು ಬೇಕಾದ ವಿವೇಕವನ್ನು ಯೆಹೋವ ದೇವರು ಕೊಡ್ತಾರೆ. (ಯಾಕೋಬ 1:5) ಎಲ್ಲಾ ಕಾಲಕ್ಕೂ ಉಪಯೋಗ ಆಗೋ ಒಳ್ಳೆ ಬುದ್ಧಿಮಾತು ಮತ್ತು ಸಲಹೆಗಳು ಬೈಬಲಲ್ಲಿದೆ. ಅದನ್ನು ಒಬ್ಬ ವ್ಯಕ್ತಿ ಓದಿ ತಿಳ್ಕೊಂಡು ಅದರಂತೆ ನಡ್ಕೊಂಡಾಗ ಅವನಿಗೆ ವಿವೇಕ ಸಿಗುತ್ತೆ.

 ನಮ್ಮ ಭವಿಷ್ಯ ಚೆನ್ನಾಗಿ ಆಗುತ್ತೆ. ಮುಂದೊಂದು ದಿನ ಯಾರೂ ನಾನು ‘ಅಸ್ವಸ್ಥ’ (ಯೆಶಾಯ 33:24) ಅಂತ ಹೇಳದೆ ಇರೋ ಕಾಲ ಬರುತ್ತೆ ಅಂತ ಯೆಹೋವ ದೇವರು ಮಾತುಕೊಟ್ಟಿದ್ದಾರೆ. ಕೆಲವರಿಗೆ ಗಂಭೀರ ಕಾಯಿಲೆ ಇದ್ರು ದೇವರು ಹೇಳಿರೋ ಈ ಮಾತನ್ನು ಮನ್ಸಲ್ಲಿಟ್ಟುಕೊಂಡು ಕಾಯಿಲೆ ಇದ್ರೂ ನೆಮ್ಮದಿಯಿಂದ ಇದ್ದಾರೆ.—ಯೆರೆಮೀಯ 29:11, 12.

a ಯೆಹೋವ ಅನ್ನೋದು ಬೈಬಲಲ್ಲಿರೋ ದೇವರ ಹೆಸರು.—ಕೀರ್ತನೆ 83:18.