ಯೆಹೋವ ನಿಮ್ಮ ಬೆಸ್ಟ್‌ ಫ್ರೆಂಡ್‌

ಯೆಹೋವ ನಿಮ್ಮ ಬೆಸ್ಟ್‌ ಫ್ರೆಂಡ್‌
  1. 1. ಈ ಅದ್ಭುತ ಸೃಷ್ಟಿಯ ನೋಡಿದಾಗ

    ನನ್ನ ಮನದಲ್ಲಿ

    ಪ್ರಶ್ನೆಯು ಮೂಡಿದೆ;

    ನೀ ನಿಜವಾಗಲೂ ಇರುವಿ ಏನು?

    ಕುಂಬಾರನಂತೆ ನೀನು

    ನನ್ನನು ರೂಪಿಸಿ,

    ಜ್ಞಾನದ ದಾರಿಯನ್ನ

    ತೋರಿದೆ ನನಗೆ.

    ನಿಜವಾಗಲೂ ಇರುವಿ ಏನು?

    (ಅನುಪಲ್ಲವಿ)

    ಹುಷಾರಿಲ್ಲದಾಗ ನನ್‌ ಜೊತೆ ನೀನಿದ್ದೆ

    ನನ್ನ ಸಂತೈಸುತ್ತಾ ಪ್ರೀತಿ ತೋರಿದೆ.

    (ಪಲ್ಲವಿ)

    ಯೆಹೋವ ನೀನೇ, ಸತ್ಯ ದೇವರು

    ನಿನ್ನ ಗುಣವ, ಸೃಷ್ಟಿ ತೋರಿದೆ

    ನಿಜವಾಗಲೂ, ನೀನೇ ಅದ್ಭುತ!!

    ಸತ್ಯ ದೇವರು, ನನ್ನ ಬೆಸ್ಟ್‌ ಫ್ರೆಂಡ್‌!

  2. 2. ಪ್ರತಿ ದಿನಾಲು ನಾವು,

    ಸ್ಕೂಲ್‌ ಗೆ ಹೋದಾಗ

    ಅಪಾಯ ಎದುರಾಗಿ, ಭಯ ಆದಾಗ,

    “ಯೆಹೋವನೇ” ಎಂದು,

    ಕರೆದಾಕ್ಷಣ ಕೈ ಚಾಚಿದೆ.

    (ಅನುಪಲ್ಲವಿ)

    ದುಃಖದಲ್ಲಿದ್ದಾಗ, ನಾ ಕುಗ್ಗಿ ಹೋದಾಗ,

    ನನ್ನ ಕೈಯ ಹಿಡಿದು, ನನ್ನ ಮೇಲಕ್ಕೆತ್ತುವ...

    (ಪಲ್ಲವಿ)

    ಯೆಹೋವ ನೀನೇ, ಸತ್ಯ ದೇವರು

    ನಿನ್ನ ಗುಣವ, ಸೃಷ್ಟಿ ತೋರಿದೆ

    ನಿಜವಾಗಲೂ, ನೀನೇ ಅದ್ಭುತ!!

    ಸತ್ಯ ದೇವರು, ನನ್ನ ಬೆಸ್ಟ್‌ ಫ್ರೆಂಡ್‌!

    ಯೆಹೋವ ನೀನೇ, ನನ್ನ ಬೆಸ್ಟ್‌ ಫ್ರೆಂಡ್‌!