ಗೀತೆ 76
ಹೇಗನಿಸುತ್ತದೆ?
-
1. ಸಾರಲು ಸಂತೋಷ
ಸಿಹಿಯಾದ ಸಂದೇಶ,
ಪಾಲಿಸೋಣ ನಾವೆಲ್ಲ
ದೇವರ ಆದೇಶ.
ದೀನರಿಗೆ ವಾಕ್ಯ
ಕಲಿಸೋದು ಸೌಭಾಗ್ಯ.
ಯೋಗ್ಯರನ್ನು ಪ್ರೀತೀಲಿ,
ಸೆಳೆಯುವ ದೇವ.
(ಪಲ್ಲವಿ)
ಎಂದೆಂದಿಗೂ ಸಂತೋಷವು
ಬಿಡದೆ ಸೇವೆ ಮಾಡಲು,
ಕೊಡಲು ನಾವು ನಮ್ಮನ್ನು
ಹರುಷವು ಎಂದೂ.
-
2. ಸಾರಲು ಸಂತೋಷ
ಜೀವ ನೀಡೋ ಸಂದೇಶ,
ಜಗವೆಲ್ಲ ಸಾರೋಣ
ಸಿಗುತೆ ಆನಂದ.
ತೋರುವರು ಕೋಪ,
ಕೆಲವೊಮ್ಮೆ ಆರೋಪ.
ಇದಕೆಲ್ಲ ಸೋಲಲ್ಲ,
ಭಯವು ಇನ್ನಿಲ್ಲ.
(ಪಲ್ಲವಿ)
ಎಂದೆಂದಿಗೂ ಸಂತೋಷವು
ಬಿಡದೆ ಸೇವೆ ಮಾಡಲು,
ಕೊಡಲು ನಾವು ನಮ್ಮನ್ನು
ಹರುಷವು ಎಂದೂ.
-
3. ಸಾರಲು ಸಂತೋಷ
ಫಲ ನೋಡಿ ಉಲ್ಲಾಸ,
ಫಲಿತಾಂಶ ಎಂದೆಂದೂ
ಕೊಡುವನು ದೇವ.
ಧೈರ್ಯದಿಂದ ಸಾರಿ,
ಖುಷಿಯಿಂದ ಮಾತಾಡಿ.
ಸಿಹಿಯಾದ ಈ ಸುದ್ದಿ,
ಹರುಷಕೆ ಹಾದಿ.
(ಪಲ್ಲವಿ)
ಎಂದೆಂದಿಗೂ ಸಂತೋಷವು
ಬಿಡದೆ ಸೇವೆ ಮಾಡಲು,
ಕೊಡಲು ನಾವು ನಮ್ಮನ್ನು
ಹರುಷವು ಎಂದೂ.
(ಅ.ಕಾ. 13:48; 1 ಥೆಸ. 2:4 ; 1 ತಿಮೊ. 1:11 ಸಹ ನೋಡಿ. )