ಗೀತೆ 75
“ನನ್ನ ನೀ ಕಳುಹಿಸು”
-
1. ಈ ಲೋಕದಲ್ಲಿ ಜನರು
‘ನೀ ಕ್ರೂರಿ ದೇವ’ ಎಂದರು;
ಯೆಹೋವ ನಾಮ ನಿಂದಿಸಿ
‘ಆ ದೇವರಿಲ್ಲ’ ಎಂದರು.
ಯಾರೀಗ ಮುಂದೆ ಹೋಗುವ?
ಆ ನಾಮ ಶುದ್ಧ ಮಾಡುವ?
(ಪಲ್ಲವಿ 1)
“ದೇವಾ ಇಗೋ ನಾ ಹೋಗುವೆ;
ಆ ನಾಮವ ಕೊಂಡಾಡುವೆ.
ಎಂಥಾ ಸುಯೋಗ ನಿನ್ನ ಸೇವೆ
ನನ್ನ ನೀ ಕಳುಹಿಸು!”
-
2. ಕಲ್ಲನ್ನು ‘ದೇವಾ’ ಎಂದರು
ಸುಳ್ಳನ್ನು ನಂಬೋ ಜನರು;
ಈ ಭೂಮಿಯನ್ನು ಆಳಲು
ಭೂರಾಜರ ನಂಬಿದರು.
ಯಾರೀಗ ಮುಂದೆ ಹೋಗುವ?
ಲೋಕಾಂತ್ಯವನ್ನು ಸಾರುವ?
(ಪಲ್ಲವಿ 2)
“ದೇವಾ ಇಗೋ ನಾ ಹೋಗುವೆ;
ಲೋಕಾಂತ್ಯವ ನಾ ಸಾರುವೆ.
ಎಂಥಾ ಸುಯೋಗ ನಿನ್ನ ಸೇವೆ
ನನ್ನ ನೀ ಕಳುಹಿಸು!”
-
3. ಕಣ್ಣೀರಲಿ ನೊಂದವರು,
ಅನ್ಯಾಯ ತಾಳೋ ದೀನರು,
ಮುಂದೆ ನಿರೀಕ್ಷೆ ಇಲ್ಲದೆ
ಸೋತು ನಿರಾಶೆಯಾದರು.
ಯಾರೀಗ ಮುಂದೆ ಹೋಗುವ?
ನಿನ್ನ ವಾಗ್ದಾನ ಸಾರುವ?
(ಪಲ್ಲವಿ 3)
“ದೇವಾ ಇಗೋ ನಾ ಹೋಗುವೆ;
ವಾಗ್ದಾನವ ನಾ ಸಾರುವೆ.
ಎಂಥಾ ಸುಯೋಗ ನಿನ್ನ ಸೇವೆ
ನನ್ನ ನೀ ಕಳುಹಿಸು!”
(ಕೀರ್ತ. 10:4; ಯೆಹೆ. 9:4 ಸಹ ನೋಡಿ.)