ಗೀತೆ 69
ಧೈರ್ಯ ತೋರಿ ಸಾರಿ
-
1. ಸಾರಿ ಧೈರ್ಯದಿ ಸಿಹಿಸುದ್ದಿ
ಭೂಮಿ ಎಲ್ಲೆಡೆ ಸಾರಿ
ಎಲ್ಲಾ ಜನರ ಮೇಲೆ ಪ್ರೀತಿ
ಸಾರೋ ಮೂಲಕ ತೋರಿ
ದೇವ ನಾಮವ ಸಾರುವಾಗ
ನಮ್ಮ ಹೃದಯ ಉಲ್ಲಾಸ
ದೇವ ನೀಡಿದ ಈ ಸುಯೋಗ
ಧನ್ಯ ನಿನಗೆ ಯೆಹೋವ
(ಪಲ್ಲವಿ)
ಧೈರ್ಯದಿಂದ ಸಾರಿ ನೀವು
ಮುಂದೆ ಹೆಜ್ಜೆಯ ಇಡಿ
ನೀವು ನಿಲ್ಲಿ ದೇವ ಪಕ್ಷ
ತೋರಿ ನಂಬಿಕೆ ಧೈರ್ಯ
-
2. ಸ್ವರ್ಗ ಅಥವಾ ಭೂ ನಿರೀಕ್ಷೆ
ಏನೇ ಇದ್ದರೂ ಸಾರಿ
ಯಾರೇ ಬರಲಿ ಹೋಗಿ ಸಾರಿ
ತೋರಿ ಸತ್ಯದ ದಾರಿ
ಜೀವ ಉಳಿಸೊ ಇಂಥ ಸುದ್ದಿ
ಎಲ್ಲೂ ಸಿಗದು ಲೋಕದಿ
ದೇವ ಸಹಾಯ ಸಿಗುವಾಗ
ಧೈರ್ಯ ತೋರುತ್ತಾ ಸಾರುವ
(ಪಲ್ಲವಿ)
ಧೈರ್ಯದಿಂದ ಸಾರಿ ನೀವು
ಮುಂದೆ ಹೆಜ್ಜೆಯ ಇಡಿ
ನೀವು ನಿಲ್ಲಿ ದೇವ ಪಕ್ಷ
ತೋರಿ ನಂಬಿಕೆ ಧೈರ್ಯ
(ಕೀರ್ತ. 23:4; ಅ. ಕಾ. 4:29, 31; 1 ಪೇತ್ರ 2:21 ಸಹ ನೋಡಿ.)