ಗೀತೆ 66
ಸಿಹಿಸುದ್ದಿ ಸಾರೋಣ
-
1. ಕಣ್ಣೀರಿನ ಈ ಜೀವನ ಬಲ್ಲ ದೇವ;
ಈ ನೋವು ದೂರ ಮಾಡುವ ತುಂಬ ಬೇಗ.
ಈ ಭೂಮಿಯನ್ನು ಆಳಲು ಕ್ರಿಸ್ತ ಯೇಸು,
ಉಲ್ಲಾಸದ ಸಂಗೀತವೇ ನಮ್ಮ ಬಾಳು!
ಪೂರೈಸುವ ಯೆಹೋವ ತನ್ನ ಮಾತೆಲ್ಲಾ;
ಯೇಸು ಮುಖೇನ ನೀಡುವನು ನಿತ್ಯ ಜೀವ.
ಅನಂತ ಕಾಲ ಬಾಳುವಂತ ಈ ಭಾಗ್ಯ,
ದಯಾಮಯಿ ಯೆಹೋವ ತಂದ ಸೌಭಾಗ್ಯ!
-
2. ಸಮೀಪ ಈಗ ದೇವರ ಹೊಸ ಲೋಕ;
ಮರೆ ಆಗೋದು ನಮ್ಮಯ ಎಲ್ಲಾ ಶೋಕ.
ಸುಳ್ಳಾಗದು ಯೆಹೋವನ ಈ ವಾಗ್ದಾನ;
ಎಲ್ಲೆಲ್ಲೂ ಈ ಸಂದೇಶ ನಾವು ಸಾರೋಣ.
ಜೊತೆ ಇದ್ದಾಗ ದೂತರು ಭಯ ಯಾಕೆ?
ಸಹಾಯ ನೀಡುತ್ತಾರೆ ಸತತ ಸಾರೋಕೆ.
ಮಹಾ ಸುಯೋಗ ನೀಡಿದ ನಮ್ಮ ದೇವಾ
ತನ್ನ ಪವಿತ್ರ ನಾಮ ಸಾರುವ ಭಾಗ್ಯ.
(ಮಾರ್ಕ 4:11; ಅ.ಕಾ. 5:31; 1 ಕೊರಿಂ. 2:1, 7 ಸಹ ನೋಡಿ.)