ಗೀತೆ 65
ಮುನ್ನಡೆ ಮುನ್ನಡೆ
-
1. ಮುನ್ನಡೆ ಮುನ್ನಡೆ ಪ್ರೌಢನಾಗಲು,
ನಿನ್ನಯ ಪ್ರಗತಿ ಬೆಳಗಲಿ ಎಲ್ಲೆಲ್ಲೂ,
ಏಳಿಗೆ ಹೊಂದು ನೀ ದೇವ ಸೇವೆಲಿ,
ಪಡೆ ದೇವಾಶೀರ್ವಾದ
ಕ್ರಿಸ್ತನು ಮಾಡಿದ ಸೇವೆಲಿ
ನಮಗೆಲ್ಲರಿಗೂ ಪಾಲಿದೆ
ಎಡವಿ ಬೀಳದೆ ಸ್ಥಿರ ನಿಲ್ಲೋಕೆ,
ದೇವರ ನೀ ಯಾಚಿಸು.
-
2. ಮುನ್ನಡೆ ಮುನ್ನಡೆ ಸಾಕ್ಷಿ ಹೇಳುತ್ತಾ,
ದೇವರ ರಾಜ್ಯದ ಸಂದೇಶವ ಸಾರುತ್ತಾ.
ಧೈರ್ಯದಿ ಹೇಳು ನೀ ದೇವ ನಾಮವ,
ಭೂಮಿಯ ಎಲ್ಲ ಕಡೆ.
ಅಂಜದೆ ಮಾಡು ನೀ ಸೇವೆಯ
ಧೈರ್ಯ ತೋರು ಪ್ರತಿ ಸಮಯ
ಬಂದರೂ ವಿರೋಧ ಮೆಟ್ಟಿ ನಿಲ್ಲು ನೀ
ಹೆಚ್ಚಿಸು ನಿನ್ನ ಸೇವೆ!
-
3. ಮುನ್ನಡೆ ಮುನ್ನಡೆ ಹೀಗೆ ಮುನ್ನಡೆ,
ಕೌಶಲ್ಯ ಬೆಳಿಸಿಕೊಂಡು
ಹೆಚ್ಚು ಮುನ್ನಡೆ,
ದೇವರ ಶಕ್ತಿಯು ನಿನ್ನೊಂದಿಗಿದೆ.
ದೇವ ಶಾಂತಿಯು ಇದೆ.
ಸಾರುತ್ತಾ ಹುಡುಕು ದೀನರ,
ಮತ್ತೆ ಸಂದಿಸು ನೀ ಅವರ.
ಮನ ಮುಟ್ಟುವಂತೆ ಸತ್ಯ ಕಲಿಸು
ಪ್ರಜ್ವಲಿಸಲಿ ಕಾಂತಿ.
(ಫಿಲಿ. 1:27; 3:16; ಇಬ್ರಿ. 10:39 ಸಹ ನೋಡಿ.)