ಗೀತೆ 20

ಕೊಟ್ಟೆ ನೀ ಮಗನ

ಕೊಟ್ಟೆ ನೀ ಮಗನ

(1 ಯೋಹಾನ 4:9)

  1. 1. ಸೋತೋದ ಬಾಳಲ್ಲಿ

    ನಿರೀಕ್ಷೆ ನೀ ಚೆಲ್ಲಿ 

    ಯೆಹೋವ ಕೊಟ್ಟೆ ನೀ

    ಕ್ರಿಸ್ತನ ಜೀವ

    ನಿನ್ನ ಈ ಪ್ರೀತಿಗೆ

    ಅಮೂಲ್ಯ ದಾನಕ್ಕೆ

    ನಮ್ಮ ಈ ಜೀವವ

    ನೀಡುವೆವು ದೇವ

    (ಪಲ್ಲವಿ)

    ನಿನ್ನ ಈ ತ್ಯಾಗಕ್ಕೆ

    ನಾವೆಂದೂ ಧನ್ಯರು

    ಸಾಲೋದಿಲ್ಲ ಈ ಹಾಡು

    ಬಣ್ಣಿಸೋಕೆ ನಿನ್ನ ಪ್ರೀತಿ

  2. 2. ಈ ಪ್ರೀತಿ ಹೊಂದೋಕೆ

    ನಾವಲ್ಲ ಯೋಗ್ಯರು

    ಧೂಳಂತ ನಮ್ಮನ್ನು

    ಸೆಳೆದೆ ನೀನು

    ಎಂದೆಂದೂ ಬಾಳೋಕೆ

    ನೀ ಮಾರ್ಗ ತೆರೆದೆ

    ಎಷ್ಟೊಂದು ಧಾರಾಳ

    ದೇವಾ ನಿನ್ನ ತ್ಯಾಗ

    (ಪಲ್ಲವಿ)

    ನಿನ್ನ ಈ ತ್ಯಾಗಕ್ಕೆ

    ನಾವೆಂದೂ ಧನ್ಯರು

    ಸಾಲೋದಿಲ್ಲ ಈ ಹಾಡು

    ಬಣ್ಣಿಸೋಕೆ ನಿನ್ನ ಪ್ರೀತಿ

    (ಸಮಾಪ್ತಿ)

    ಯೆಹೋವ ಈ ದಾನ ಅಮೂಲ್ಯ ಎಂದಿಗೂ

    ನಾವೆಂದೂ ಈ ತ್ಯಾಗ ಮರೆಯೋದಿಲ್ಲ ದೇವಾ

(ಯೋಹಾ. 3:16; 15:13 ಸಹ ನೋಡಿ)