ಗೀತೆ 11
ಸೃಷ್ಟಿ ಸಲ್ಲಿಸುತ್ತೆ ಸ್ತುತಿ
-
1. ಯೆಹೋವನೇ ಕೊಂಡಾಡುತೆ ಮನ
ಈ ಸೃಷ್ಟಿಯು ಎಂಥಾ ರೋಮಾಂಚನ!
ಈ ಸೃಷ್ಟಿಯು ಸಾರುವುದು ದಿನಾ
ಮೌನವಾಗಿ ಸಲ್ಲಿಸುತ್ತೆ ಘನ;
ಈ ಸೃಷ್ಟಿಯು ಸಾರುವುದು ದಿನಾ
ಮೌನವಾಗಿ ಸಲ್ಲಿಸುತ್ತೆ ಘನ.
-
2. ನಿನ್ನಾಜ್ಞೆಯು ಕಾಪಾಡೋ ಕೈಗಳು
ಕಾಯುತ್ತದೆ ಬೀಳದೆ ಸಾಗಲು.
ಚಿನ್ನಕ್ಕಿಂತ ನಿನ್ನಾಜ್ಞೆ ಶ್ರೇಷ್ಠವು;
ಪಾಲಿಸೋದು ಎಷ್ಟೊಂದು ಹರ್ಷವು!
ಚಿನ್ನಕ್ಕಿಂತ ನಿನ್ನಾಜ್ಞೆ ಶ್ರೇಷ್ಠವು;
ಪಾಲಿಸೋದು ಎಷ್ಟೊಂದು ಹರ್ಷವು!
-
3. ನಿನ್ನ ಬಗ್ಗೆ ಹೇಳುತ್ತೆ ವಾಕ್ಯವು,
ಆ ವಾಕ್ಯವೇ ಜೀವಕ್ಕೆ ದಾರಿಯು;
ವಾಕ್ಯದಂತೆ ಪಾಲಿಸಿ ಸಾಗುವ
ಸಿಗುವುದು ಎಂದೆಂದೂ ಸಂತಸ;
ವಾಕ್ಯದಂತೆ ಪಾಲಿಸಿ ಸಾಗುವ
ಸಿಗುವುದು ಎಂದೆಂದೂ ಸಂತಸ.
(ಕೀರ್ತ. 12:6; 89:7; 144:3; ರೋಮ. 1:20 ಸಹ ನೋಡಿ.)