ಗೀತೆ 106
ಪ್ರೀತಿಯೆಂಬ ಗುಣವನ್ನು ಬೆಳೆಸಿಕೊಳ್ಳುವುದು
-
1. ಯೆಹೋವ ದೇವರ ಕೋರುವ
ಪ್ರೀತಿ ಎಂಬ ಗುಣ ನೀಡಲು;
ಪ್ರತಿಯೊಂದು ಗುಣ ತೋರಲು
ಪ್ರೀತಿ ತಾನೇ ಸ್ಪೂರ್ತಿ ಎಂದಿಗೂ.
ಅದೇನೇ ಕೌಶಲ್ಯವಾದರೂ
ನಿಸ್ವಾರ್ಥ ಪ್ರೀತಿಯೇ ಗೆಲ್ಲೋದು.
ನಿಜ ಪ್ರೀತಿಯನ್ನು ಹಂಚೋಣ
ನಡೆ ನುಡಿಯಲ್ಲೂ ತೋರೋಣ.
-
2. ಎಂದೂ ತನ್ನ ಹಿತ ನೋಡದೆ
ತಪ್ಪನ್ನು ಮನ್ನಿಸಿ ತಾಳುವ,
ಧಾರಾಳ ಹೃದಯ ಹೊಂದಿರೋ
ಇಂಥ ಪ್ರೀತಿ ಶ್ರೇಷ್ಠವಲ್ಲವೇ!
ಅದೇನೇ ತೊಂದರೆ ಬಂದರೂ
ನಿಷ್ಠಾವಂತ ಪ್ರೀತಿ ಸೋಲದು;
ಎಲ್ಲಾ ಗುಣದಲ್ಲೂ ಎಂದಿಗೂ
ಪ್ರೀತಿ ಒಂದೇ ಮಹಾ ರಾಜನು!
(ಯೋಹಾ. 21:17; 1 ಕೊರಿಂ. 13:13; ಗಲಾ. 6:2 ಸಹ ನೋಡಿ.)