ಸಂಚಿಕೆ 4
“ನಾನು ಬಂದಿರೋದೇ ಆ ಕೆಲಸ ಮಾಡೋಕೆ”
(ವಿಡಿಯೋದ ಸಮಯ: 54:56)
ಯೇಸು ಕಾಯಿಲೆ ಇದ್ದವರನ್ನ ವಾಸಿಮಾಡ್ತಾನೆ, ಕೆಟ್ಟ ದೇವದೂತರಿಂದ ಬಿಡಿಸ್ತಾನೆ, ಶಿಷ್ಯರನ್ನಾಗಿ ಮಾಡ್ತಾನೆ ಮತ್ತು ತನ್ನ 12 ಶಿಷ್ಯರನ್ನ ಆರಿಸ್ಕೊಳ್ತಾನೆ. ಈ ಸಂಚಿಕೆಯಲ್ಲಿ ಕೆಳಗಿನ ಘಟನೆಗಳಿವೆ:
ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಕಲಿಸ್ತಾನೆ ಮತ್ತು ಒಬ್ಬನನ್ನ ಕೆಟ್ಟ ದೇವದೂತನಿಂದ ಬಿಡಿಸ್ತಾನೆ (ಮಾರ್ಕ 1:21-29; ಲೂಕ 4:31-37)
ಯೇಸು ಪೇತ್ರನ ಅತ್ತೆಯನ್ನ ವಾಸಿಮಾಡ್ತಾನೆ (ಲೂಕ 4:38, 39; ಮತ್ತಾಯ 8:14, 15; ಮಾರ್ಕ 1:30, 31)
ಯೇಸು ತುಂಬ ಜನ್ರನ್ನ ವಾಸಿಮಾಡ್ತಾನೆ (ಲೂಕ 4:40, 41; ಮತ್ತಾಯ 8:16, 17; ಮಾರ್ಕ 1:32-34)
ಯೇಸು ಯಾರೂ ಇಲ್ಲದ ಜಾಗಕ್ಕೆ ಹೋಗಿ ಪ್ರಾರ್ಥನೆ ಮಾಡ್ತಾನೆ (ಮಾರ್ಕ 1:35-38; ಲೂಕ 4:42, 43)
ಯೇಸು ಸಾರ್ತಾನೆ, ಕಲಿಸ್ತಾನೆ ಮತ್ತು ವಾಸಿಮಾಡ್ತಾನೆ (ಮತ್ತಾಯ 4:23-25; ಮಾರ್ಕ 1:39)
ಯೇಸು ಕುಷ್ಠರೋಗಿಯನ್ನ ವಾಸಿಮಾಡ್ತಾನೆ (ಮಾರ್ಕ 1:40-45; ಮತ್ತಾಯ 8:1-4; ಲೂಕ 5:12-15)
ಯೇಸು ಒಂಟಿಯಾಗಿ ಹೋಗಿ ಪ್ರಾರ್ಥನೆ ಮಾಡ್ತಾನೆ (ಲೂಕ 5:16)
ಯೇಸು ಕಪೆರ್ನೌಮಿನಲ್ಲಿ ಲಕ್ವ ಹೊಡೆದವನನ್ನ ಕ್ಷಮಿಸ್ತಾನೆ ಮತ್ತು ವಾಸಿಮಾಡ್ತಾನೆ (ಮಾರ್ಕ 2:1-12; ಮತ್ತಾಯ 9:1-8; ಲೂಕ 5:17-26)
‘ನನ್ನ ಶಿಷ್ಯನಾಗು’ ಅಂತ ಯೇಸು ಮತ್ತಾಯನಿಗೆ ಹೇಳ್ತಾನೆ (ಮಾರ್ಕ 2:13, 14; ಮತ್ತಾಯ 9:9; ಲೂಕ 5:27-28)
ಯೇಸು ಮತ್ತಾಯನ ಮನೆಯಲ್ಲಿ ತೆರಿಗೆ ವಸೂಲಿ ಮಾಡೋರ ಜೊತೆ ಊಟ ಮಾಡ್ತಾನೆ (ಮಾರ್ಕ 2:15-17; ಮತ್ತಾಯ 9:10-13; ಲೂಕ 5:29-32)
ಉಪವಾಸದ ಬಗ್ಗೆ ಪ್ರಶ್ನೆ (ಮತ್ತಾಯ 9:14-17; ಲೂಕ 5:33-39; ಮಾರ್ಕ 2:18-22)
ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸಾರ್ತಾನೆ (ಲೂಕ 4:44)
ಯೇಸು ಸಬ್ಬತ್ ದಿನದಲ್ಲಿ ಬೇತ್ಸಥಾ ಕೊಳದ ಹತ್ರ ಒಬ್ಬ ರೋಗಿಯನ್ನ ವಾಸಿಮಾಡ್ತಾನೆ (ಯೋಹಾನ 5:1-9)
ಯೆಹೂದ್ಯರು ವಾಸಿಯಾದ ವ್ಯಕ್ತಿಯನ್ನ ಖಂಡಿಸ್ತಾರೆ (ಯೋಹಾನ 5:10-13)
ಯೇಸು ವಾಸಿಯಾದ ವ್ಯಕ್ತಿನ ದೇವಾಲಯದಲ್ಲಿ ನೋಡ್ತಾನೆ (ಯೋಹಾನ 5:14, 15)
ಯೇಸು ತನ್ನ ಅಪ್ಪ ಕೊಟ್ಟಿರೋ ಅಧಿಕಾರದ ಬಗ್ಗೆ ಮಾತಾಡ್ತಾನೆ (ಯೋಹಾನ 5:16-24)
ಆಧ್ಯಾತ್ಮಿಕವಾಗಿ ತೀರಿಹೋದವರು ಯೇಸುವಿನ ಸ್ವರವನ್ನ ಕೇಳಿಸ್ಕೊಂಡ್ರೆ ಬದುಕ್ತಾರೆ (ಯೋಹಾನ 5:25-27)
ಸ್ಮರಣೆಯ ಸಮಾಧಿಗಳಲ್ಲಿ ಇರೋರೆಲ್ಲ ಮತ್ತೆ ಜೀವ ಪಡ್ಕೊಳ್ತಾರೆ (ಯೋಹಾನ 5:28-30)
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ, ಯೇಸು ಮಾಡಿದ ವಿಷ್ಯಗಳು, ಅಪ್ಪ ಮತ್ತು ಪವಿತ್ರ ಗ್ರಂಥ ಇವೆಲ್ಲಾ ಯೇಸು ಬಗ್ಗೆ ಸಾಕ್ಷಿ ಕೊಡುತ್ತೆ (ಯೋಹಾನ 5:31-47)
ಯೇಸು “ಸಬ್ಬತ್ ದಿನದ ಒಡೆಯನಾಗಿದ್ದಾನೆ” (ಮಾರ್ಕ 2:23-28; ಮತ್ತಾಯ 12:1-8; ಲೂಕ 6:1-5)
ಕೈಗೆ ಲಕ್ವ ಹೊಡೆದಿದ್ದ ವ್ಯಕ್ತಿಯನ್ನ ಯೇಸು ಸಬ್ಬತ್ ದಿನದಲ್ಲಿ ವಾಸಿಮಾಡ್ತಾನೆ (ಲೂಕ 6:6-11; ಮತ್ತಾಯ 12:9-14; ಮಾರ್ಕ 3:1-6)
ಸಮುದ್ರ ತೀರದಲ್ಲಿ ಜನ್ರ ದೊಡ್ಡ ಗುಂಪು; ಯೇಸು ದೇವರ ಪ್ರೀತಿಯ ಸೇವಕ; ತುಂಬ ಜನ ವಾಸಿ ಆಗ್ತಾರೆ (ಮಾರ್ಕ 3:7-12; ಮತ್ತಾಯ 12:15-21)
12 ಅಪೊಸ್ತಲರ ಆಯ್ಕೆ (ಲೂಕ 6:12-16; ಮಾರ್ಕ 3:13-19ಎ)

