ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ—ವಿಡಿಯೋಗಳು

ಜನರೆದುರು ಓದಲು ಮತ್ತು ಅವರಿಗೆ ಕಲಿಸಲು ನಿಮಗೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ.

ಪಾಠ 1

ಆಸಕ್ತಿ ಹುಟ್ಟಿಸುವ ಆರಂಭದ ಮಾತು

ನೀವು ಹೇಳುವುದನ್ನು ಸಭಿಕರು ಕೇಳಬೇಕೆಂದರೆ ನೀವೇನು ಮಾಡಬೇಕು?

ಪಾಠ 2

ಸ್ವಾಭಾವಿಕ ಸಂಭಾಷಣೆ

ಕೇಳುಗರು ಆರಾಮಾಗಿ ನೀವು ಹೇಳುವುದನ್ನು ಕೇಳಬೇಕೆಂದರೆ ನೀವೇನು ಮಾಡಬೇಕು?

ಪಾಠ 3

ಪ್ರಶ್ನೆಗಳ ಉಪಯೋಗ

ಕೇಳುಗರೊಂದಿಗೆ ತರ್ಕಿಸಲು, ಆಸಕ್ತಿ ಹುಟ್ಟಿಸಿ ಅದನ್ನು ಹಿಡಿದಿಡಲು ಮತ್ತು ಮುಖ್ಯಾಂಶಗಳನ್ನು ಒತ್ತಿಹೇಳಲು ನೀವು ಹೇಗೆ ಪ್ರಶ್ನೆಗಳನ್ನು ಉಪಯೋಗಿಸಬಹುದು?

ಪಾಠ 4

ವಚನಗಳ ಪರಿಚಯ

ವಚನ ಓದುವ ಮುಂಚೆ ಕೇಳುಗರ ಮನಸ್ಸನ್ನು ಹೇಗೆ ಸಿದ್ಧಪಡಿಸಬಹುದು?

ಪಾಠ 5

ಸರಿಯಾದ ಓದುವಿಕೆ

ಪುಟದಲ್ಲಿ ಹೇಗಿದೆಯೋ ಅದನ್ನು ಹಾಗೆಯೇ ಗಟ್ಟಿಯಾಗಿ ಓದಲು, ಗಮನಿಸಬೇಕಾದ ವಿಷಯಗಳು ಯಾವುವು?

ಪಾಠ 6

ವಚನಗಳ ಅನ್ವಯ

ನೀವು ಒಂದು ವಚನ ಓದುವ ಮುನ್ನ ಮತ್ತು ಓದಿದ ಮೇಲೆ, ಅದನ್ನು ಓದಲು ಕಾರಣ ಏನು ಅಂತ ಸಭಿಕರಿಗೆ ಅರ್ಥ ಆಗಬೇಕೆಂದರೆ ಏನು ಮಾಡಬೇಕು?

ಪಾಠ 7

ಭರವಸಾರ್ಹ ಮಾಹಿತಿ

ಸತ್ಯವನ್ನು ತಿರುಚದೆ ಒಂದು ಮಾಹಿತಿಯನ್ನು ಹೇಗೆ ತಿಳಿಸಬಹುದು?

ಪಾಠ 8

ಸೂಕ್ತವಾದ ಉದಾಹರಣೆ

ಯೇಸುವಿನಂತೆ ನಾವು, ಉದಾಹರಣೆಗಳನ್ನು ಮನಮುಟ್ಟುವ ರೀತಿಯಲ್ಲಿ ಹೇಗೆ ಬಳಸಬಹುದು?

ಪಾಠ 9

ಸೂಕ್ತವಾದ ಚಿತ್ರ ಮತ್ತು ವಿಡಿಯೋ

ಜನರು ಮುಖ್ಯ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸೂಕ್ತವಾದ ಚಿತ್ರ ಮತ್ತು ವಿಡಿಯೋಗಳನ್ನು ಹೇಗೆ ಬಳಸಬಹುದು?

ಪಾಠ 10

ಧ್ವನಿಯ ಏರಿಳಿತ

ಕೇಳುಗರಿಗೆ ನೀವು ಹೇಳುವ ವಿಷಯ ಚೆನ್ನಾಗಿ ಅರ್ಥ ಆಗಬೇಕೆಂದರೆ ಮತ್ತು ಅದು ಅವರ ಹೃದಯಗಳನ್ನು ಸ್ಪರ್ಶಿಸಬೇಕೆಂದರೆ ಧ್ವನಿಯ ಏರಿಳಿತವನ್ನು ಹೇಗೆ ಉಪಯೋಗಿಸುತ್ತೀರಾ?

ಪಾಠ 11

ಉತ್ಸಾಹ

ಉತ್ಸಾಹದಿಂದ ಮಾತಾಡುತ್ತಾ ಕೇಳುಗರನ್ನು ಹೇಗೆ ಪ್ರೋತ್ಸಾಹಿಸಬಹುದು ಮತ್ತು ಅವರ ಭಾವನೆಗಳನ್ನು ಹೇಗೆ ಬಡಿದೆಬ್ಬಿಸಬಹುದು?

ಪಾಠ 12

ಸ್ನೇಹಭಾವ ಮತ್ತು ಪರಚಿಂತನೆ

ಕೇಳುಗರಿಗೆ ಸ್ನೇಹಭಾವ ಮತ್ತು ಪರಚಿಂತನೆಯನ್ನು ಹೇಗೆ ತೋರಿಸಬಹುದು?

ಪಾಠ 13

ಸ್ಪಷ್ಟವಾದ ವೈಯಕ್ತಿಕ ಅನ್ವಯ

ಕೇಳುಗರು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅದರ ವೈಯಕ್ತಿಕ ಅನ್ವಯ ಮಾಡುವಂತೆ ನೀವು ವಿಷಯಗಳನ್ನು ಹೇಗೆ ಹೇಳಬಹುದು?

ಪಾಠ 14

ಮುಖ್ಯಾಂಶಗಳಿಗೆ ಪ್ರಾಮುಖ್ಯತೆ

ಕೇಳುಗರು ನಿಮ್ಮ ಭಾಷಣಕ್ಕೆ ಗಮನ ಕೊಡಲು, ಅದನ್ನು ಅರ್ಥಮಾಡಿಕೊಳ್ಳಲು ಮತ್ತು ನೆನಪಲ್ಲಿಟ್ಟುಕೊಳ್ಳಲು ಮುಖ್ಯಾಂಶಗಳಿಗೆ ಪ್ರಾಮುಖ್ಯತೆ ಕೊಡಿ.

ಪಾಠ 15

ನಿಶ್ಚಿತಾಭಿಪ್ರಾಯ

ಸಾರ್ವಜನಿಕ ಸಾಕ್ಷಿಕಾರ್ಯ ಮಾಡುವಾಗ ಅಥವಾ ಭಾಷಣ ಕೊಡುವಾಗ ನಿಶ್ಚಿತಾಭಿಪ್ರಾಯದಿಂದ ಹೇಗೆ ಮಾತಾಡೋದು?

ಪಾಠ 16

ಭರವಸೆ ಮತ್ತು ಪ್ರೋತ್ಸಾಹ

ಕೇಳುಗರಿಗೆ ಭರವಸೆ ಪ್ರೋತ್ಸಾಹ ನೀಡೋ ತರ ಮಾತಾಡಬೇಕಂದ್ರೆ ಯಾವ ಮೂರು ವಿಷಯಗಳನ್ನ ನಾವು ಮಾಡಬೇಕು?

ಪಾಠ 17

ಅರ್ಥವಾಗುವ ಭಾಷೆ

ನಿಮ್ಮ ಸಂದೇಶ ಕೇಳುಗರಿಗೆ ಅರ್ಥ ಆಗಬೇಕಂದ್ರೆ ನೀವು ಏನೆಲ್ಲಾ ಮಾಡಬಾರದು?

ಪಾಠ 18

ಪ್ರಯೋಜನ ತರುವ ಮಾಹಿತಿ

ಕೇಳುಗರು ವಿಷಯದ ಬಗ್ಗೆ ಯೋಚಿಸುವಂತೆ ಮಾಡಿ ಅವರಲ್ಲಿ ‘ಒಳ್ಳೇ ವಿಷಯ ಕಲಿಯಕ್ಕಾಯಿತು’ ಅನ್ನೋ ಭಾವನೆಯನ್ನು ಹೇಗೆ ಮೂಡಿಸಬಹುದು?

ಪಾಠ 19

ಹೃದಯ ಮುಟ್ಟಲು ಪ್ರಯತ್ನ

ಕೇಳುಗರ ಹೃದಯ ಮುಟ್ಟಲು ನೀವೇನು ಮಾಡ್ತೀರಾ?

ಪಾಠ 20

ಸೂಕ್ತವಾದ ಸಮಾಪ್ತಿ

ಸಭೆಯಲ್ಲಿ ಭಾಷಣ ಕೊಡುವಾಗ ಅಥವಾ ಸೇವೆಯಲ್ಲಿ ಸೂಕ್ತವಾದ ಸಮಾಪ್ತಿಯನ್ನು ಹೇಗೆ ಮಾಡ್ತೀರಾ?

ಹೆಚ್ಚನ್ನು ಕಲಿಯಿರಿ

ಪುಸ್ತಕಗಳು ಮತ್ತು ಕಿರುಹೊತ್ತಗೆಗಳು

ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ

ಈ ಪ್ರಕಾಶನವನ್ನು ಸಭಿಕರ ಮುಂದೆ ಓದುವ, ಮಾತಾಡುವ ಹಾಗೂ ಕಲಿಸುವ ವಿಷಯದಲ್ಲಿ ನಿಮ್ಮ ನಿಪುಣತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವಂತೆ ರಚಿಸಲಾಗಿದೆ.