ಎರಡನೇ ಸಮುವೇಲ 23:1-39

  • ದಾವೀದನ ಕೊನೇ ಮಾತುಗಳು (1-7)

  • ದಾವೀದನ ವೀರ ಸೈನಿಕರ ಸಾಹಸಗಳು (8-39)

23  ದಾವೀದನ ಕೊನೇ ಮಾತುಗಳು:+ “ಇವು ಇಷಯನ ಮಗ ದಾವೀದನ,+ದೇವರಿಂದ ಗೌರವ ಸಿಕ್ಕಿದವನ,+ಯಾಕೋಬನ ದೇವರಿಂದ ಅಭಿಷೇಕ ಆದವನ,+ಇಸ್ರಾಯೇಲಿನ ಮಧುರ ಹಾಡುಗಳ ಗಾಯಕನ ಮಾತುಗಳು.+   ಯೆಹೋವನ ಪವಿತ್ರಶಕ್ತಿ ನನ್ನ ಮೂಲಕ ಮಾತಾಡಿತು,+ಆತನ ಮಾತು ನನ್ನ ಬಾಯಲ್ಲಿತ್ತು.+   ಇಸ್ರಾಯೇಲ್ಯರ ದೇವರು ಇಸ್ರಾಯೇಲ್ಯರ ಬಂಡೆ+ ನನಗೆ ಹೀಗಂದನು: ‘ಒಬ್ಬನು ಮಾನವಕುಲವನ್ನ ನೀತಿಯಿಂದ ಆಳುವಾಗ+ದೇವರ ಭಯದಿಂದ ಆಳುವಾಗ,+   ಅಂಥ ಆಳ್ವಿಕೆ ಬೆಳಗಿನ ಬೆಳಕಿನ ಹಾಗಿರುತ್ತೆ,+ಮೋಡಗಳಿಲ್ಲದ ಆಕಾಶದಲ್ಲಿ ಹೊಳೆಯೋ ಸೂರ್ಯನ ತರ ಇರುತ್ತೆ. ಭೂಮಿ ಮೇಲೆ ಹುಲ್ಲು ಚಿಗುರಿಸೋ, ಮಳೆ ನಂತರ ಬಿಸಿಲಿನ ತರ ಇರುತ್ತೆ.’+   ದೇವರ ಮುಂದೆ ನನ್ನ ಕುಟುಂಬ ಅದೇ ರೀತಿ ಇದ್ಯಲ್ಲಾ? ಯಾಕಂದ್ರೆ ಆತನು ನನ್ನ ಜೊತೆ ಶಾಶ್ವತ ಒಪ್ಪಂದ ಮಾಡ್ಕೊಂಡಿದ್ದಾನೆ,+ಅದರ ಪ್ರತಿಯೊಂದು ವಿವರಗಳನ್ನ ಕೊಟ್ಟು, ಭದ್ರಪಡಿಸಿದ್ದಾನೆ. ಅದು ನನಗೆ ಸಂಪೂರ್ಣ ರಕ್ಷಣೆ, ಎಲ್ಲ ಸಂತೋಷ ಕೊಡುತ್ತೆ,ಈ ಕಾರಣಕ್ಕೇ ನನ್ನ ಕುಟುಂಬವನ್ನ ಹೆಚ್ಚಿಸ್ತಾ ಬಂದಿದ್ದಾನಲ್ವಾ?+   ಆದ್ರೆ ಎಲ್ಲ ಅಯೋಗ್ಯರು, ಎಸೆದು ಬಿಡೋ+ ಮುಳ್ಳಿನ ಪೊದೆ ತರ,ಅವರನ್ನ ಬರೀ ಕೈಯಲ್ಲಿ ಮುಟ್ಟೋಕೆ ಆಗಲ್ಲ   ಮುಟ್ಟಬೇಕಂದ್ರೆ ಕಬ್ಬಿಣದ ಆಯುಧಗಳು, ಈಟಿ ಇರಬೇಕು,ಅವರ ಜಾಗದಲ್ಲೇ ಬೆಂಕಿಹಾಕಿ ಅವರನ್ನ ಪೂರ್ತಿ ಸುಟ್ಟುಹಾಕಬೇಕು.”  ದಾವೀದನ ವೀರ ಸೈನಿಕರ ಹೆಸ್ರು:+ ಮೊದಲನೆಯವನು ತಹ್ಕೆಮೋನ್ಯನಾದ ಯೋಷೆಬಷ್ಷೆಬೆತ್‌. ಇವನು ಮೂವರು ಯೋಧರಲ್ಲಿ ಮುಖ್ಯಸ್ಥ.+ ಒಮ್ಮೆ ಇವನು ತನ್ನ ಈಟಿ ಬೀಸಿ 800ಕ್ಕೂ ಜಾಸ್ತಿ ಜನ್ರನ್ನ ಮುಗಿಸಿಬಿಟ್ಟ.  ಎಲ್ಲಾಜಾರ್‌+ ಎರಡನೆಯವನು. ಇವನು ದೋದೋವಿನ+ ಮಗ ಅಹೋಹಿಯನ ಮೊಮ್ಮಗ. ಒಮ್ಮೆ ಇಸ್ರಾಯೇಲ್ಯರ ಮೇಲೆ ಫಿಲಿಷ್ಟಿಯರು ಯುದ್ಧಕ್ಕೆ ಬಂದಾಗ ದಾವೀದನ ಜೊತೆ ಮೂವರು ವೀರ ಸೈನಿಕರು ಇದ್ರು. ಇವರು ಫಿಲಿಷ್ಟಿಯರನ್ನ ಕೆಣಕಿದ್ರು. ಇವರಲ್ಲಿ ಎಲ್ಲಾಜಾರನೂ ಇದ್ದ. ಯುದ್ಧದ ಸಮಯದಲ್ಲಿ ಇಸ್ರಾಯೇಲ್‌ ಸೈನಿಕರು ಓಡಿಹೋದ್ರು. 10  ಆದ್ರೆ ಎಲ್ಲಾಜಾರ ಯುದ್ಧಭೂಮಿಲ್ಲೇ ನಿಂತ. ಕತ್ತಿ ಹಿಡಿದ ತನ್ನ ಕೈ ಸೋತು ಮರಗಟ್ಟಿ ಹೋಗೋ ತನಕ ಫಿಲಿಷ್ಟಿಯರನ್ನ ಕೊಲ್ತಾ ಬಂದ.+ ಹಾಗಾಗಿ ಆ ದಿನ ಯೆಹೋವ ಇಸ್ರಾಯೇಲ್ಯರಿಗೆ ಮಹಾಜಯ* ಕೊಟ್ಟನು.+ ಆಮೇಲೆ ಜನ್ರು ಅವನ ಜೊತೆ ಸತ್ತು ಬಿದ್ದವ್ರನ್ನ ದೋಚಿದ್ರು. 11  ಮೂರನೆಯವನು ಶಮ್ಮಾ. ಇವನು ಹರಾರ್ಯನಾದ ಆಗೇಯನ ಮಗ. ಒಮ್ಮೆ ಫಿಲಿಷ್ಟಿಯರು ಇಸ್ರಾಯೇಲ್ಯರ ಮೇಲೆ ಯುದ್ಧಕ್ಕಾಗಿ ಲೆಹೀ ಅನ್ನೋ ಜಾಗದಲ್ಲಿ ಸೇರಿಬಂದ್ರು. ಅಲ್ಲಿ ಅವರೆಕಾಳಿನ ಬೆಳೆಯಿಂದ ತುಂಬಿದ್ದ ಒಂದು ಹೊಲ ಇತ್ತು. ಫಿಲಿಷ್ಟಿಯರನ್ನ ನೋಡಿದ ಜನ್ರು ಅಲ್ಲಿಂದ ಓಡಿ ಹೋದ್ರು. 12  ಆದ್ರೆ ಶಮ್ಮಾ ಹೊಲದ ಮಧ್ಯ ನಿಂತು ಬೆಳೆಯನ್ನ ಕಾಪಾಡಿದ. ಫಿಲಿಷ್ಟಿಯರನ್ನ ಕೊಲ್ತಾ ಹೋದ. ಹಾಗಾಗಿ ಯೆಹೋವ ಇಸ್ರಾಯೇಲ್ಯರಿಗೆ ಮಹಾಜಯ* ಕೊಟ್ಟನು.+ 13  ದಾವೀದನ ಸೇನೆಯಲ್ಲಿದ್ದ 30 ಮುಖ್ಯಸ್ಥರಲ್ಲಿ ಮೂರು ಗಂಡಸ್ರು ಕೊಯ್ಲಿನ ಸಮಯದಲ್ಲಿ ಅದುಲ್ಲಾಮಿನ+ ಗುಹೆಯಲ್ಲಿದ್ದ ದಾವೀದನ ಹತ್ರ ಹೋದ್ರು. ಫಿಲಿಷ್ಟಿಯರ ಸೈನಿಕರ ಒಂದು ಗುಂಪು ರೆಫಾಯೀಮ್‌ ಕಣಿವೆಯಲ್ಲಿ+ ಪಾಳೆಯ ಹೂಡಿತ್ತು. 14  ಆ ಸಮಯದಲ್ಲಿ ದಾವೀದ ಭದ್ರ ಕೋಟೆಯಲ್ಲಿ ಅಡಗಿಕೊಂಡಿದ್ದ.+ ಫಿಲಿಷ್ಟಿಯರ ಒಂದು ಕಾವಲುಪಡೆ ಬೆತ್ಲೆಹೇಮಲ್ಲಿತ್ತು. 15  ಆಗ ದಾವೀದ “ಬೆತ್ಲೆಹೇಮ್‌ ಪಟ್ಟಣದ ಬಾಗಿಲ ಹತ್ರ ಇರೋ ಬಾವಿ ನೀರು ಕುಡಿಯೋಕೆ ಸಿಕ್ಕಿದ್ರೆ ಎಷ್ಟು ಚೆನ್ನಾಗಿತ್ತು!” ಅಂತ ಹೇಳಿದ. 16  ಆಗ ಆ ಮೂವರು ವೀರ ಸೈನಿಕರು ಫಿಲಿಷ್ಟಿಯರ ಪಾಳೆಯಕ್ಕೆ ನುಗ್ಗಿ ಬೆತ್ಲೆಹೇಮಿನ ಬಾಗಿಲ ಹತ್ರ ಇದ್ದ ಬಾವಿ ನೀರು ಸೇದಿ ದಾವೀದನಿಗೆ ತಂದ್ಕೊಟ್ರು. ಆದ್ರೆ ಅವನು ಆ ನೀರು ಕುಡಿಲಿಲ್ಲ, ಅದನ್ನ ಯೆಹೋವನ ಮುಂದೆ ನೆಲಕ್ಕೆ ಸುರಿದುಬಿಟ್ಟ.+ 17  ಆಮೇಲೆ ಅವನು “ಯೆಹೋವನೇ, ನನ್ನಿಂದ ಈ ನೀರು ಕುಡಿಯೋ ಯೋಚ್ನೆನೂ ಮಾಡಕ್ಕಾಗಲ್ಲ. ತಮ್ಮ ಜೀವವನ್ನೇ ಪಣಕ್ಕಿಟ್ಟ ಇವರ ರಕ್ತವನ್ನ ನಾನು ಹೇಗೆ ಕುಡಿಲಿ?”+ ಅಂದ. ಆ ನೀರು ಕುಡಿಯೋಕೆ ಒಪ್ಪಲಿಲ್ಲ. ಇವು ಅವನ ಮೂವರು ವೀರ ಸೈನಿಕರು ಮಾಡಿದ ಮಹಾನ್‌ ಕೆಲಸಗಳು. 18  ಚೆರೂಯಳ+ ಮಗ ಯೋವಾಬನ ಸಹೋದರನಾದ ಅಬೀಷೈ+ ಬೇರೆ ಮೂವರಲ್ಲಿ ಮುಖ್ಯಸ್ಥ. ಒಮ್ಮೆ ಇವನು ತನ್ನ ಈಟಿ ಬೀಸಿ 300ಕ್ಕೂ ಜಾಸ್ತಿ ಜನ್ರನ್ನ ಕೊಂದುಹಾಕಿದ್ದ. ಹಾಗಾಗಿ ಆ ಮೂವರು ವೀರ ಸೈನಿಕರಿಗೆ ಇದ್ದಂಥ ಪ್ರಖ್ಯಾತಿ ಇವನಿಗೂ ಇತ್ತು.+ 19  ಬೇರೆ ಮೂವರಲ್ಲಿ ಅಬೀಷೈ ಹೆಚ್ಚು ಹೆಸ್ರು ಗಳಿಸಿದ್ದ, ಅವನು ಅವರ ಮುಖ್ಯಸ್ಥ. ಆದ್ರೆ ಮೊದಲ ಮೂರು ವೀರ ಸೈನಿಕರನ್ನ ಮೀರಿಸೋಕೆ ಅವನಿಂದ ಆಗಲಿಲ್ಲ. 20  ಯೆಹೋಯಾದನ ಮಗ ಬೆನಾಯ+ ಒಬ್ಬ ಧೈರ್ಯಶಾಲಿ.* ಅವನು ಕಬ್ಜಯೇಲಲ್ಲಿ+ ಬಹಳಷ್ಟು ಸಾಹಸಗಳನ್ನ ಮಾಡಿದ್ದ. ಅವನು ಮೋವಾಬಿನ ಅರೀಯೇಲನ ಇಬ್ರು ಗಂಡು ಮಕ್ಕಳನ್ನ ಕೊಂದ. ಹಿಮ ಬೀಳ್ತಿದ್ದ ದಿನ ಅವನು ಒಂದು ನೀರಿನ ಹಳ್ಳಕ್ಕೆ ಇಳಿದು ಸಿಂಹವನ್ನ ಕೊಂದ.+ 21  ಅವನು ತುಂಬಾ ಎತ್ತರ ಇದ್ದ ಒಬ್ಬ ಈಜಿಪ್ಟಿನ ವ್ಯಕ್ತಿಯನ್ನ ಕೊಂದ. ಆ ವ್ಯಕ್ತಿ ಕೈಯಲ್ಲಿ ಈಟಿ ಇದ್ರೂ ಒಂದು ಕೋಲು ಹಿಡ್ಕೊಂಡು ಅವನ ವಿರುದ್ಧ ಹೋದ. ಅವನ ಕೈಯಿಂದ ಆ ಈಟಿ ಕಿತ್ಕೊಂಡು ಅದ್ರಿಂದಾನೇ ಅವನನ್ನ ಕೊಂದುಹಾಕಿದ. 22  ಇವು ಯೆಹೋಯಾದನ ಮಗ ಬೆನಾಯ ಮಾಡಿದ ಸಾಹಸಗಳು. ಆ ಮೂವರು ವೀರ ಸೈನಿಕರಿಗೆ ಇದ್ದಂಥ ಪ್ರಖ್ಯಾತಿ ಇವನಿಗೂ ಇತ್ತು. 23  ದಾವೀದನ 30 ವೀರ ಸೈನಿಕರಿಗಿಂತ ಬೆನಾಯ ಉತ್ತಮನಾಗಿದ್ರೂ ಮೊದಲ ಮೂವರು ವೀರ ಸೈನಿಕರನ್ನ ಮೀರಿಸೋಕೆ ಇವನಿಗೆ ಆಗಲಿಲ್ಲ. ಹಾಗಿದ್ರೂ ದಾವೀದ ಇವನನ್ನ ತನ್ನ ಅಂಗರಕ್ಷಕರ ಅಧಿಕಾರಿಯಾಗಿ ಇಟ್ಟ. 24  ದಾವೀದನ 30 ವೀರ ಸೈನಿಕರ ಹೆಸ್ರು: ಯೋವಾಬನ ಸಹೋದರ ಅಸಾಹೇಲ,+ ಬೆತ್ಲೆಹೇಮಿನ ದೋದೋವಿನ ಮಗ ಎಲ್ಹಾನಾನ್‌,+ 25  ಹರೋದಿನವನಾದ ಶಮ್ಮಾ, ಹರೋದಿನವನಾದ ಎಲೀಕ, 26  ಬೇತ್ಪೆಲೆಟಿನವನಾದ ಹೆಲೆಚ್‌,+ ತೆಕೋವದವನಾದ ಇಕ್ಕೇಷನ ಮಗ ಈರಾ,+ 27  ಅನಾತೋತಿನವನಾದ+ ಅಬೀಯೆಜೆರ್‌,+ ಹುಷಾತ್ಯನಾದ ಮೆಬುನೈ, 28  ಅಹೋಹಿನವನಾದ ಸಲ್ಮೋನ್‌, ನೆಟೋಫಾತ್ಯನಾದ ಮಹರೈ,+ 29  ನೆಟೋಫಾತ್ಯನಾದ ಬಾಣನ ಮಗ ಹೇಲೆಬ್‌, ಬೆನ್ಯಾಮೀನ್‌ ಕುಲದ ಗಿಬೆಯದವನಾದ ರೀಬೈನ ಮಗ ಇತೈ, 30  ಪಿರಾತೋನ್ಯನಾದ ಬೆನಾಯ,+ ಗಾಷ್‌+ ನಾಲೆಗಳ* ಹಿದೈ, 31  ಬೇತ್‌-ಅರಾಬದವನಾದ ಅಬೀಅಲ್ಬೋನ್‌, ಬಹುರೀಮಿನವನಾದ ಅಜ್ಮಾವೇತ್‌, 32  ಶಾಲ್ಬೋನ್ಯನಾದ ಎಲೆಯಖ್ಬಾ, ಯಾಷೇನನ ಗಂಡುಮಕ್ಕಳು, ಯೋನಾತಾನ, 33  ಹರಾರ್ಯನಾದ ಶಮ್ಮಾ, ಹರಾರ್ಯನಾದ ಶಾರಾರನ ಮಗ ಅಹೀಯಾಮ್‌, 34  ಮಾಕಾತ್ಯ ವ್ಯಕ್ತಿಯೊಬ್ಬನ ಮಗನಾದ ಅಹಸ್‌ಬೈನ ಮಗ ಎಲೀಫೆಲೆಟ್‌, ಗೀಲೋವಿನವನಾದ ಅಹೀತೋಫೆಲನ+ ಮಗ ಎಲೀಯಾಮ್‌, 35  ಕರ್ಮೆಲಿನವನಾದ ಹೆಚ್ರೋ, ಅರೇಬಿಯನವನಾದ ಪಾರೈ, 36  ಚೋಬದವನಾದ ನಾತಾನನ ಮಗ ಇಗಾಲ್‌, ಗಾದ್ಯ ಕುಲದ ಬಾನಿ, 37  ಅಮ್ಮೋನಿಯನಾದ ಚೆಲೆಕ್‌, ಚೆರೂಯಳ ಮಗ ಯೋವಾಬನ ಆಯುಧಗಳನ್ನ ಹೊರ್ತಿದ್ದ ಬೇರೋತ್ಯದವನಾದ ನಹರೈ, 38  ಇತ್ರೀಯನಾದ ಈರಾ, ಇತ್ರೀಯನಾದ+ ಗಾರೇಬ, 39  ಹಿತ್ತಿಯನಾದ ಊರೀಯ.+ ದಾವೀದನ ವೀರ ಸೈನಿಕರ ಒಟ್ಟು ಸಂಖ್ಯೆ 37.

ಪಾದಟಿಪ್ಪಣಿ

ಅಥವಾ “ರಕ್ಷಣೆ.”
ಅಥವಾ “ರಕ್ಷಣೆ.”
ಅಕ್ಷ. “ಒಬ್ಬ ಧೀರನ ಮಗ.”