ಎರಡನೇ ಸಮುವೇಲ 22:1-51

  • ದೇವರ ರಕ್ಷಣಾ ಕಾರ್ಯಗಳನ್ನ ನೋಡಿ ದಾವೀದ ಹಾಡಿದ (1-51)

    • “ಯೆಹೋವ ನನ್ನ ಕಡಿದಾದ ಬಂಡೆ” (2)

    • ಯೆಹೋವ ನಿಷ್ಠಾವಂತರಿಗೆ ನಿಷ್ಠಾವಂತ (26)

22  ಯೆಹೋವ ದಾವೀದನನ್ನ ಅವನ ಎಲ್ಲ ಶತ್ರುಗಳ ಕೈಯಿಂದ,+ ಸೌಲನ ಕೈಯಿಂದ+ ಬಿಡಿಸಿದಾಗ ದಾವೀದ ಯೆಹೋವನಿಗಾಗಿ ಈ ಹಾಡನ್ನ ಹಾಡಿದ.+   “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+   ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.   ಸ್ತುತಿಗೆ ಯೋಗ್ಯನಾಗಿರೋ ಯೆಹೋವನನ್ನ ನಾನು ಕೂಗಿ ಕರಿತೀನಿ,ಆತನು ಶತ್ರುಗಳಿಂದ ನನ್ನನ್ನ ಬಿಡಿಸ್ತಾನೆ.   ನನ್ನ ಸುತ್ತ ಸಾವಿನ ಅಲೆಗಳು ಎದ್ದವು,+ಅಯೋಗ್ಯ ಜನ್ರು ತಟ್ಟನೆ ಪ್ರವಾಹದ ತರ ಬಂದು ನನ್ನನ್ನ ಹೆದರಿಸಿದ್ರು.+   ಸಮಾಧಿಯ* ಹಗ್ಗಗಳು ನನ್ನನ್ನ ಸುತ್ಕೊಂಡಿವೆ,+ಸಾವಿನ ಉರ್ಲು ನನ್ನ ಮುಂದಿದೆ.+   ಕಷ್ಟದಲ್ಲಿರುವಾಗ ಯೆಹೋವನನ್ನ ಕರೆದೆ,+ನನ್ನ ದೇವರನ್ನ ಕರಿತಾ ಇದ್ದೆ. ಆಗ ಆತನು ನನ್ನ ಕೂಗನ್ನ ತನ್ನ ಆಲಯದಿಂದ ಕೇಳಿಸ್ಕೊಂಡನು,ಸಹಾಯಕ್ಕಾಗಿ ನಾನು ಮಾಡಿದ ಪ್ರಾರ್ಥನೆ ಆತನ ಕಿವಿ ಮುಟ್ತು.+   ಭೂಮಿ ಕಂಪಿಸಿ ಅಲುಗಾಡಿತು,+ಆತನಿಗೆ ಕೋಪ ಬಂತುಆಕಾಶದ ಅಸ್ತಿವಾರ ನಡುಗಿ, ಅದುರಿತು.+   ಆತನ ಮೂಗಿಂದ ಹೊಗೆ ಬಂತು,ಆತನ ಬಾಯಿಂದ ಸುಡೋ ಬೆಂಕಿ ಬಂತು,+ಆತನಿಂದ ಉರಿಯೋ ಕೆಂಡ ಬಂತು. 10  ಆತನು ಇಳಿದು ಬರುವಾಗ ಆಕಾಶ ಬಗ್ಗಿಸಿದನು,+ಆತನ ಪಾದಗಳ ಕೆಳಗೆ ಕಪ್ಪು ಮೋಡ ಇತ್ತು.+ 11  ಆತನು ಕೆರೂಬಿಯ ಮೇಲೆ+ ಹತ್ತಿ ಹಾರುತ್ತಾ ಬಂದನು. ದೇವದೂತನ* ರೆಕ್ಕೆಗಳ ಮೇಲೆ ಕಾಣಿಸ್ಕೊಂಡನು.+ 12  ಆತನು ದಟ್ಟವಾದ ಕಪ್ಪು ಮೋಡಗಳಲ್ಲಿ,ಕತ್ತಲನ್ನ ತನ್ನ ಸುತ್ತ ಡೇರೆ ತರ ಹಾಕೊಂಡನು.+ 13  ಆತನ ಮುಂದಿದ್ದ ಉಜ್ವಲ ಬೆಳಕಿಂದ ಉರಿಯೋ ಕೆಂಡಗಳು ಬಂದವು. 14  ಆಮೇಲೆ ಯೆಹೋವ ಆಕಾಶದಿಂದ ಗುಡುಗಿದನು,+ಸರ್ವೋನ್ನತ ತನ್ನ ಸ್ವರ ಕೇಳೋ ಹಾಗೆ ಮಾಡಿದನು.+ 15  ಆತನು ತನ್ನ ಬಾಣಗಳನ್ನ+ ಬಿಟ್ಟು ಶತ್ರುಗಳು ದಿಕ್ಕುಪಾಲಾಗೋ ಹಾಗೆ ಮಾಡಿದನು,ಮಿಂಚಿಂದ ಅವರು ಗಲಿಬಿಲಿ ಆಗೋ ತರ ಮಾಡಿದನು.+ 16  ಯೆಹೋವನ ಗದರಿಕೆಯಿಂದ, ಆತನ ಮೂಗಿಂದ ಬಂದ ರಭಸವಾದ ಉಸಿರಿಂದ+ಸಮುದ್ರದ ತಳ ಕಾಣಿಸ್ತು,+ಭೂಮಿಯ ತಳಪಾಯ ಬಟ್ಟಬಯಲಾಯ್ತು. 17  ಆತನು ಸ್ವರ್ಗದಿಂದ ಕೈಚಾಚಿ,ನನ್ನನ್ನ ಹಿಡಿದು ಆಳವಾದ ನೀರಿಂದ ಮೇಲೆ ಎತ್ತಿದನು.+ 18  ನನ್ನ ಬಲಿಷ್ಠ ಶತ್ರುವಿನಿಂದ ನನ್ನನ್ನ ಬಿಡಿಸಿ ಕಾಪಾಡಿದನು+ದ್ವೇಷಿಸುವವರ ಕೈಯಿಂದ, ನನಗಿಂತ ಶಕ್ತಿಶಾಲಿಗಳ ಕೈಯಿಂದ ರಕ್ಷಿಸಿದನು. 19  ನನ್ನ ಕಷ್ಟದ ದಿನಗಳಲ್ಲಿ ಅವರು ನನಗೆ ತಿರುಗಿಬಿದ್ರು,+ಆದ್ರೆ ಯೆಹೋವ ನನಗೆ ಬೆಂಬಲವಾಗಿ ನಿಂತನು. 20  ಆತನು ನನ್ನನ್ನ ಸುರಕ್ಷಿತ ಜಾಗಕ್ಕೆ* ಕರ್ಕೊಂಡು ಬಂದನು,+ನಾನಂದ್ರೆ ಆತನಿಗೆ ಇಷ್ಟ, ಅದಕ್ಕೇ ನನ್ನನ್ನ ಕಾಪಾಡಿದನು.+ 21  ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ತಾನೆ,+ನನ್ನ ಮುಗ್ಧತೆಗೆ* ತಕ್ಕ ಬಹುಮಾನ ಕೊಡ್ತಾನೆ.+ 22  ಯಾಕಂದ್ರೆ ಯೆಹೋವನ ದಾರಿಯಲ್ಲೇ ನಡಿತಿದ್ದೀನಿ,ನನ್ನ ದೇವರನ್ನ ಬಿಟ್ಟು ನಾನು ಕೆಟ್ಟದು ಮಾಡಲಿಲ್ಲ. 23  ಆತನ ತೀರ್ಪುಗಳೆಲ್ಲ+ ನನ್ನ ಮುಂದೆ ಇದೆ,ಆತನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿಯಲ್ಲ.+ 24  ನಾನು ಅವನ ಮುಂದೆ ತಪ್ಪಿಲ್ಲದವನಾಗಿ+ ಇರ್ತಿನಿ,ತಪ್ಪಿಂದ ದೂರ ಇರ್ತಿನಿ.+ 25  ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ಲಿ,+ಆತನು ಕಣ್ಣಾರೆ ನೋಡಿದ ನನ್ನ ಮುಗ್ಧತೆಗೆ ತಕ್ಕಂತೆ ಬಹುಮಾನ ಕೊಡ್ಲಿ.+ 26  ನಿಷ್ಠಾವಂತನ ಜೊತೆ ನಿಷ್ಠೆಯಿಂದ ನಡ್ಕೊಳ್ತೀಯ,+ನಿಷ್ಕಳಂಕನ ಜೊತೆ ನಿಷ್ಕಳಂಕವಾಗಿ ವ್ಯವಹರಿಸ್ತೀಯ.+ 27  ಪ್ರಾಮಾಣಿಕನ ಜೊತೆ ಪ್ರಾಮಾಣಿಕನಾಗಿ ಇರ್ತಿಯ,+ವಕ್ರನ ಜೊತೆ ಜಾಣನಾಗಿ ಇರ್ತಿಯ.+ 28  ದೀನರನ್ನ ರಕ್ಷಿಸ್ತೀಯ,+ಆದ್ರೆ ಗರ್ವಿಷ್ಠರನ್ನ, ನೋಡೋಕ್ಕೂ ಇಷ್ಟಪಡದೆ ತಳ್ಳಿಹಾಕ್ತೀಯ.+ 29  ಯೆಹೋವನೇ, ನೀನೇ ನನ್ನ ದೀಪ.+ ಯೆಹೋವನೇ ನನ್ನ ಅಂಧಕಾರವನ್ನ ಬೆಳಗಿಸುವವನು.+ 30  ನಿನ್ನ ಸಹಾಯದಿಂದ ಲೂಟಿಗಾರರ ಮೇಲೆ ದಾಳಿ ಮಾಡಬಲ್ಲೆ,ದೇವರ ಬಲದಿಂದ ನಾನು ಗೋಡೆ ಜಿಗಿಬಲ್ಲೆ.+ 31  ಸತ್ಯ ದೇವರ ದಾರಿ ಪರಿಪೂರ್ಣ,+ಯೆಹೋವನ ಮಾತುಗಳು ಶುದ್ಧ.+ ಆತನಲ್ಲಿ ಆಶ್ರಯಪಡೆಯೋ ಎಲ್ರಿಗೂ ಆತನು ಗುರಾಣಿ.+ 32  ಯೆಹೋವನನ್ನ ಬಿಟ್ಟು ಬೇರೆ ದೇವರಿದ್ದಾನಾ?+ ನಮ್ಮ ದೇವರನ್ನ ಬಿಟ್ಟು ಬೇರೆ ಬಂಡೆ ಇದ್ಯಾ?+ 33  ಸತ್ಯ ದೇವರು ನನ್ನ ಬಲವಾದ ಕೋಟೆ,+ಆತನು ನನ್ನ ದಾರಿ ಸುಗಮ ಮಾಡ್ತಾನೆ.+ 34  ನನ್ನ ಕಾಲುಗಳನ್ನ ಜಿಂಕೆ ಕಾಲುಗಳ ತರ ಮಾಡ್ತಾನೆ,ನನ್ನನ್ನ ಉನ್ನತ ಸ್ಥಳಗಳಲ್ಲಿ ನಿಲ್ಲಿಸ್ತಾನೆ.+ 35  ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತಿ ಕೊಡ್ತಾನೆ,ಹಾಗಾಗಿ ನನ್ನ ಕೈಗಳು ತಾಮ್ರದ ಬಿಲ್ಲನ್ನೂ ಬಗ್ಗಿಸುತ್ತೆ. 36  ನನಗೆ ನಿನ್ನ ರಕ್ಷಣೆಯ ಗುರಾಣಿ ಕೊಡ್ತೀಯ,ನಿನ್ನ ದೀನತೆ ನನ್ನನ್ನ ಮೇಲೆ ಏರಿಸುತ್ತೆ.+ 37  ನನ್ನ ಕಾಲು* ಜಾರದ ಹಾಗೆ,+ನೀನು ದಾರಿಯನ್ನ ಅಗಲ ಮಾಡ್ತೀಯ. 38  ನನ್ನ ಶತ್ರುಗಳ ಹಿಂದೆ ಹೋಗಿ ಸರ್ವನಾಶ ಮಾಡ್ತೀಯ,ಅವರು ನಾಶ ಆಗೋ ತನಕ ನಾನು ವಾಪಸ್‌ ಬರಲ್ಲ. 39  ಅವರು ಎದ್ದೇಳದ ಹಾಗೆ ಅಳಿಸಿಹಾಕ್ತೀನಿ, ತುಳಿದುಬಿಡ್ತಿನಿ.+ ಅವರು ನನ್ನ ಕಾಲ ಕೆಳಗೆ ಬೀಳ್ತಾರೆ. 40  ಯುದ್ಧಕ್ಕೆ ಬೇಕಾದ ಬಲ ಕೊಟ್ಟು ನನ್ನನ್ನ ಸಜ್ಜು ಮಾಡ್ತೀಯ,+ಶತ್ರುಗಳು ಕುಸಿದು ನನ್ನ ಕೆಳಗೆ ಬೀಳೋ ಹಾಗೆ ಮಾಡ್ತೀಯ.+ 41  ಶತ್ರುಗಳು ನನ್ನನ್ನ ಬಿಟ್ಟು ಓಡಿ ಹೋಗೋ ತರ ಮಾಡ್ತೀಯ,+ನನ್ನನ್ನ ದ್ವೇಷಿಸುವವರನ್ನ ನಾಶ ಮಾಡ್ತೀಯ.*+ 42  ಅವರು ಸಹಾಯಕ್ಕಾಗಿ ಕೂಗ್ತಾರೆ ಆದ್ರೆ ಯಾರೂ ಬರಲ್ಲ,ಯೆಹೋವನನ್ನ ಕೂಗಿದ್ರೂ ಆತನು ಉತ್ತರ ಕೊಡಲ್ಲ.+ 43  ಅವರನ್ನ ಕುಟ್ಟಿ ಧೂಳಿನ ತರ ಮಾಡ್ತೀನಿ,ತುಳಿದು, ಬೀದಿಯ ಮಣ್ಣಿನ ತರ ಪುಡಿಪುಡಿ ಮಾಡ್ತೀನಿ. 44  ತಪ್ಪು ಹುಡುಕೋ ಜನ್ರಿಂದ ನನ್ನನ್ನ ಕಾಪಾಡ್ತೀಯ,+ನನ್ನನ್ನ ಕಾಪಾಡಿ ದೇಶದ ಮುಖ್ಯಸ್ಥ ಆಗೋ ಹಾಗೆ ಮಾಡ್ತೀಯ,+ನನಗೆ ಪರಿಚಯನೇ ಇಲ್ಲದ ಜನ್ರು ನನ್ನ ಸೇವೆ ಮಾಡ್ತಾರೆ.+ 45  ವಿದೇಶಿಯರು ನನ್ನ ಮುಂದೆ ಅಂಗಲಾಚ್ತಾರೆ,+ನನ್ನ ಬಗ್ಗೆ ಕೇಳಿಸ್ಕೊಳ್ಳೋ ವಿಷ್ಯಗಳಿಂದ ನನಗೆ ಬೆಲೆ ಕೊಡ್ತಾರೆ. 46  ವಿದೇಶಿಯರು ಧೈರ್ಯ ಕಳ್ಕೊಳ್ತಾರೆ,ತಮ್ಮ ಆಶ್ರಯ ಸ್ಥಳಗಳಿಂದ ನಡುಗ್ತಾ ಹೊರಗೆ ಬರ್ತಾರೆ. 47  ಯೆಹೋವ ಜೀವ ಇರೋ ದೇವರು! ನನ್ನ ಬಂಡೆಯಾಗಿರೋ ಆತನಿಗೆ ಹೊಗಳಿಕೆ ಸಿಗಲಿ!+ ನನ್ನ ರಕ್ಷಣೆಯ ಬಂಡೆಯಾಗಿರೋ ದೇವರಿಗೆ ಗೌರವ ಸಲ್ಲಲಿ.+ 48  ಸತ್ಯ ದೇವರು ನನ್ನ ಪರವಾಗಿ ಸೇಡು ತೀರಿಸ್ತಾನೆ,+ಜನ್ರನ್ನ ನನ್ನ ಅಧೀನಕ್ಕೆ ತರ್ತಾನೆ.+ 49  ಶತ್ರುಗಳಿಂದ ನನ್ನನ್ನ ಕಾಪಾಡ್ತಾನೆ. ದಾಳಿ ಮಾಡೋರಿಂದ ನನ್ನನ್ನ ನೀನು ಮೇಲೆ ಎತ್ತಿದೆ,+ಹಿಂಸೆ ಕೊಡುವವನ ಕೈಯಿಂದ ನನ್ನನ್ನ ಬಿಡಿಸಿದೆ.+ 50  ಯೆಹೋವನೇ, ನಿನಗೆ ದೇಶಗಳ ಮಧ್ಯದಲ್ಲಿ ಧನ್ಯವಾದ ಹೇಳ್ತೀನಿ,+ನಿನ್ನ ಹೆಸ್ರನ್ನ ಗೌರವಿಸೋಕೆ ಹಾಡು ಹಾಡ್ತೀನಿ.*+ 51  ಆತನು ನೇಮಿಸಿದ ರಾಜನಿಗಾಗಿ ದೊಡ್ಡದೊಡ್ಡ ರಕ್ಷಣಾ ಕಾರ್ಯಗಳನ್ನ ಮಾಡ್ತಾನೆ,*+ತನ್ನ ಅಭಿಷಿಕ್ತನಾದ ದಾವೀದನ ಕಡೆಗೆ,ಅವನ ಸಂತತಿ ಕಡೆಗೆ ಶಾಶ್ವತ ಪ್ರೀತಿಯನ್ನ ಯಾವಾಗ್ಲೂ ತೋರಿಸ್ತಾನೆ.+

ಪಾದಟಿಪ್ಪಣಿ

ಅಥವಾ “ನನ್ನ ಬಲಿಷ್ಠ ರಕ್ಷಕನ.”
ಅಥವಾ “ಉನ್ನತ ಸ್ಥಳ.”
ಅಥವಾ “ಷಿಯೋಲ್‌.” ಅದು ಮಾನವಕುಲದ ಸಾಮಾನ್ಯ ಸಮಾಧಿಯನ್ನ ಸೂಚಿಸುತ್ತೆ. ಪದವಿವರಣೆ ನೋಡಿ.
ಅಥವಾ “ಗಾಳಿಯ.”
ಅಥವಾ “ವಿಶಾಲ ಜಾಗಕ್ಕೆ.”
ಅಕ್ಷ. “ಕೈಗಳ ಶುದ್ಧತೆಗೆ.”
ಅಥವಾ “ಕಣಕಾಲು.”
ಅಕ್ಷ. “ಸದ್ದಡಗಿಸ್ತೀಯ.”
ಅಥವಾ “ಸಂಗೀತ ರಚಿಸ್ತೀನಿ.”
ಅಥವಾ “ಭಾರೀ ಜಯ ಕೊಡ್ತಾನೆ.”