ಕೊರಿಂಥದವರಿಗೆ ಬರೆದ ಎರಡನೇ ಪತ್ರ 6:1-18

  • ದೇವರ ಕೃಪೆಯನ್ನ ತಪ್ಪಾಗಿ ಬಳಸಬಾರದು (1, 2)

  • ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ (3-13)

  • ಕ್ರೈಸ್ತರಲ್ಲದವ್ರಿಗೆ ಜೋಡಿ ಆಗಬೇಡಿ (14-18)

6  ದೇವರ ಜೊತೆ ಕೆಲಸಮಾಡೋ+ ನಾವು ನಿಮ್ಮ ಹತ್ರ ಇನ್ನೊಂದು ವಿಷ್ಯನೂ ಬೇಡ್ಕೊಳ್ತೀವಿ. ಅದೇನಂದ್ರೆ, ದೇವರ ಅಪಾರ ಕೃಪೆ ಪಡ್ಕೊಂಡಿರೋ ನಿಮಗೆ ಆ ಕೃಪೆಯನ್ನ ಆತನು ಯಾಕೆ ತೋರಿಸಿದನು ಅನ್ನೋದನ್ನ ಮರಿಬೇಡಿ.+  ಯಾಕಂದ್ರೆ, “ಕೃಪೆ ತೋರಿಸೋ ಕಾಲದಲ್ಲಿ ನಾನು ನಿನ್ನ ಮಾತನ್ನ ಕೇಳಿಸ್ಕೊಂಡೆ. ರಕ್ಷಣೆಯ ದಿನ ನಾನು ನಿನಗೆ ಸಹಾಯ ಮಾಡಿದೆ” ಅಂತ ದೇವರು ಹೇಳ್ತಾನೆ.+ ಆತನು ವಿಶೇಷವಾಗಿ ಕೃಪೆ ತೋರಿಸೋ ಕಾಲ ಇದೇ. ಇದೇ ರಕ್ಷಣೆಯ ದಿನ.  ನಮ್ಮ ಸೇವೆ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಬಾರದಂತ ನಾವು ಯಾರಿಗೂ ಯಾವ ರೀತಿಯಲ್ಲೂ ನೋವಾಗದ ಹಾಗೆ* ನಡ್ಕೊಳ್ತಾ ಇದ್ದೀವಿ.+  ನಾವು ಎಲ್ಲ ತರದಲ್ಲೂ ದೇವರ ಸೇವಕರು ಅಂತ ತೋರಿಸ್ಕೊಡ್ತಾ ಇದ್ದೀವಿ.+ ನಾವು ಬೇರೆ ಬೇರೆ ಕಷ್ಟಪರೀಕ್ಷೆ, ತೊಂದ್ರೆ-ನೋವು, ಬಿಕ್ಕಟ್ಟು, ಸಮಸ್ಯೆ ಇದನ್ನೆಲ್ಲ ಸಹಿಸ್ಕೊಂಡ್ವಿ.+  ತುಂಬ ಒದೆ ತಿಂದ್ವಿ, ಜೈಲಲ್ಲಿದ್ವಿ,+ ದೊಂಬಿ ಎದ್ದ ಜನ್ರ ದಾಳಿಗೆ ತುತ್ತಾದ್ವಿ, ಕಷ್ಟಪಟ್ಟು ಕೆಲಸ ಮಾಡಿದ್ವಿ, ಎಷ್ಟೋ ರಾತ್ರಿ ನಿದ್ದೆನೇ ಮಾಡಲಿಲ್ಲ, ಹೊಟ್ಟೆಗಿಲ್ಲದೆ ಇದ್ವಿ.+  ನಾವು ಶುದ್ಧ ಜೀವನ ನಡೆಸಿದ್ವಿ. ಜ್ಞಾನಕ್ಕೆ ತಕ್ಕ ಹಾಗೆ ಬಾಳಿದ್ವಿ. ತಾಳ್ಮೆ,+ ದಯೆ,+ ನಿಜವಾದ ಪ್ರೀತಿ ತೋರಿಸಿದ್ವಿ,+ ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿದ್ವಿ.  ಸತ್ಯವನ್ನೇ ಹೇಳಿದ್ವಿ, ದೇವರ ಶಕ್ತಿ ಮೇಲೆ ಹೊಂದಿಕೊಂಡ್ವಿ,+ ಎಡ* ಬಲ* ಕೈಗಳಲ್ಲಿ ನೀತಿಯ ಆಯುಧಗಳನ್ನ ಹಿಡ್ಕೊಂಡ್ವಿ.+  ನಮಗೆ ಮಾನಮರ್ಯಾದೆ ಸಿಕ್ತು, ಅವಮಾನನೂ ಆಯ್ತು, ಹೊಗಳಿಕೆ ತೆಗಳಿಕೆ ಎರಡೂ ಬಂತು. ಜನ ನಮಗೆ ಮೋಸಗಾರರು ಅನ್ನೋ ಪಟ್ಟ ಕಟ್ಟಿದ್ರೂ ನಾವು ಸತ್ಯವಂತರಾಗೇ ಇದ್ವಿ,  ನಮ್ಮನ್ನ ಬೇರೆಯವರು ಗುರುತಿಸದೇ ಇದ್ರೂ ದೇವರು ಗುರುತಿಸಿದನು, ಸಾವಿನಂಚಿನಲ್ಲಿ ಇರೋ ತರ ಆದ್ರೂ* ಬದುಕಿ ಉಳಿದ್ವಿ.+ ಜನ ನಮ್ಮನ್ನ ಶಿಕ್ಷೆ ಅನುಭವಿಸೋರ ತರ ನೋಡ್ತಿದ್ದಾರೆ, ಆದ್ರೆ ನಾವು ಸತ್ತಿಲ್ಲ.+ 10  ದುಃಖದಲ್ಲಿರೋ ತರ ಕಂಡ್ರೂ ನಾವು ಯಾವಾಗ್ಲೂ ಖುಷಿಖುಷಿಯಾಗಿದ್ವಿ, ಬಡವ್ರ ತರ ಕಂಡ್ರೂ ತುಂಬ ಜನ್ರನ್ನ ಶ್ರೀಮಂತರಾಗಿ ಮಾಡ್ತೀವಿ, ಏನೂ ಇಲ್ಲದವ್ರ ತರ ಕಂಡ್ರೂ ನಮ್ಮ ಹತ್ರ ಎಲ್ಲ ಇದೆ.+ 11  ಕೊರಿಂಥದ ಸಹೋದರರೇ, ನಾವು ನಿಮ್ಮ ಜೊತೆ ಮುಚ್ಚುಮರೆ ಇಲ್ಲದೆ ಮಾತಾಡಿದ್ದೀವಿ, ನಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೆದಿದ್ದೀವಿ. 12  ನಾವು ನಿಮಗೆ ಪ್ರೀತಿಯ ಹೊಳೆನೇ ಹರಿಸಿದ್ದೀವಿ,+ ಆದ್ರೆ ನೀವು ನಮಗೆ ತೋರಿಸಬೇಕಾದ ಪ್ರೀತಿಗೆ ಅಡ್ಡಗೋಡೆ ಕಟ್ಟಿದ್ದೀರ. 13  ಹಾಗಾಗಿ ನನ್ನ ಮಕ್ಕಳು ಅಂದ್ಕೊಂಡು ನಿಮಗೆ ಹೇಳ್ತಿದ್ದೀನಿ, ನೀವೂ ನಿಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೀರಿ.+ 14  ಕ್ರೈಸ್ತರಲ್ಲದವ್ರ ಜೊತೆ ಜೋಡಿ ಆಗಬೇಡಿ.*+ ಯಾಕಂದ್ರೆ, ನೀತಿಗೂ ಅನೀತಿಗೂ* ಸ್ನೇಹ ಇರುತ್ತಾ?+ ಬೆಳಕೂ ಕತ್ತಲೂ ಒಂದೇನಾ?+ 15  ಅಷ್ಟೇ ಅಲ್ಲ ಕ್ರಿಸ್ತ ಮತ್ತು ಸೈತಾನನ* ಮಧ್ಯ ಒಡನಾಟ ಇರುತ್ತಾ?+ ಕ್ರೈಸ್ತನು* ಮತ್ತು ಕ್ರೈಸ್ತನಲ್ಲದವನು ಒಂದೇನಾ?+ 16  ದೇವರ ಆಲಯಕ್ಕೂ ಮೂರ್ತಿಗಳಿಗೂ ವ್ಯತ್ಯಾಸ ಇಲ್ವಾ?+ ನಾವು ಜೀವ ಇರೋ ದೇವರ ಆಲಯ ಆಗಿದ್ದೀವಿ.+ ಇದ್ರ ಬಗ್ಗೆ ದೇವರು ಹೇಳೋದು ಏನಂದ್ರೆ “ನಾನು ಅವ್ರ ಮಧ್ಯ ವಾಸಿಸ್ತೀನಿ,+ ನಾನು ಅವ್ರ ಮಧ್ಯ ನಡೆದಾಡ್ತೀನಿ, ನಾನು ಅವ್ರ ದೇವರಾಗಿ ಇರ್ತಿನಿ. ಅವರು ನನ್ನ ಜನ್ರಾಗಿ ಇರ್ತಾರೆ.”+ 17  “ಯೆಹೋವ* ಹೇಳೋದು ಏನಂದ್ರೆ ‘ಹಾಗಾಗಿ ಅವ್ರನ್ನ ಬಿಟ್ಟು ಬನ್ನಿ, ನೀವು ಅವ್ರಿಂದ ಬೇರೆಯಾಗಿ. ಅಶುದ್ಧವಾಗಿದ್ದನ್ನ ಇನ್ನು ಮುಟ್ಟಬೇಡಿ,+ ನಾನು ನಿಮ್ಮನ್ನ ಸೇರಿಸ್ಕೊಳ್ತೀನಿ.’”+ 18  “ಸರ್ವಶಕ್ತ ಯೆಹೋವ* ಹೇಳೋದು ಏನಂದ್ರೆ ‘ನಾನು ನಿಮಗೆ ತಂದೆ ಆಗ್ತೀನಿ,+ ನೀವು ನನಗೆ ಮಕ್ಕಳಾಗ್ತೀರ.’”+

ಪಾದಟಿಪ್ಪಣಿ

ಅಕ್ಷ. “ಯಾರನ್ನೂ ಎಡವಿಸದ ಹಾಗೆ.”
ಎದುರಿಸೋಕೆ ಇರಬಹುದು.
ರಕ್ಷಿಸಿಕೊಳ್ಳೋಕೆ ಇರಬಹುದು.
ಅಥವಾ “ಸಾಯೋಕೆ ಯೋಗ್ಯರಾಗಿದ್ರೂ.”
ಅಕ್ಷ. “ಏರುಪೇರಾದ ನೊಗದ ಕೆಳಗೆ ಬರಬೇಡಿ.”
ಅಂದ್ರೆ, ದೇವರ ನಿಯಮಗಳನ್ನ ಪಾಲಿಸದೆ ಇರೋದು.
ಅಕ್ಷ. “ಬಿಲಯೇಲ.” ಇದು “ಕೆಲಸಕ್ಕೆ ಬಾರದವ” ಅನ್ನೋ ಅರ್ಥ ಇರೋ ಹೀಬ್ರು ಪದ.
ಅಥವಾ “ನಂಬಿಗಸ್ತ ವ್ಯಕ್ತಿ.”