ಕೊರಿಂಥದವರಿಗೆ ಬರೆದ ಎರಡನೇ ಪತ್ರ 4:1-18

  • ಸಿಹಿಸುದ್ದಿಯ ಬೆಳಕು (1-6)

    • ನಂಬಿಕೆ ಇಲ್ಲದವ್ರ ಮನಸ್ಸನ್ನ ಕುರುಡು ಮಾಡಲಾಗಿದೆ (4)

  • ಮಣ್ಣಿನ ಪಾತ್ರೆಗಳಲ್ಲಿ ನಿಧಿ (7-18)

4  ದೇವರು ನಮಗೆ ಕರುಣೆ ತೋರಿಸಿ ಈ ಸೇವೆಯನ್ನ ಕೊಟ್ಟಿರೋದ್ರಿಂದ ನಾವಿದನ್ನ ಬಿಟ್ಟುಬಿಡಲ್ಲ.  ಗುಟ್ಟಾಗಿ ಮಾಡೋ ನಾಚಿಕೆಗೆಟ್ಟ ಕೆಲಸಗಳನ್ನ ನಾವು ದ್ವೇಷಿಸಿದ್ದೀವಿ. ಕುತಂತ್ರ ಮಾಡದೆ, ದೇವರ ಸಂದೇಶಕ್ಕೆ ಕಲಬೆರಕೆ ಮಾಡದೆ+ ಸತ್ಯವನ್ನೇ ಸಾರ್ತಾ ಇದ್ದೀವಿ. ಹೀಗೆ ದೇವರ ಮುಂದೆ ನಾವು ಎಲ್ಲ ಮನುಷ್ಯರಿಗೆ* ಒಳ್ಳೇ ಮಾದರಿ ಆಗಿದ್ದೀವಿ.+  ನಾವು ಹೇಳೋ ಸಿಹಿಸುದ್ದಿ ಮುಸುಕಿಂದ ಮರೆಯಾಗಿ ಇರೋದಾದ್ರೆ ನಾಶದ ದಾರಿಯಲ್ಲಿ ಇರುವವ್ರಿಗೆ ಮರೆಯಾಗಿದೆ.  ನಂಬಿಕೆಯಿಲ್ಲದ ಆ ಜನ್ರ ಮನಸ್ಸನ್ನ+ ಈ ಲೋಕದ* ದೇವರು+ ಕುರುಡು ಮಾಡಿದ್ದಾನೆ. ದೇವರ ಸ್ವರೂಪದಲ್ಲಿರೋ ಕ್ರಿಸ್ತನ ಬಗ್ಗೆ+ ಇರೋ ಮಹಿಮಾಭರಿತ ಸಿಹಿಸುದ್ದಿಯ ಬೆಳಕು ಅವ್ರಿಗೆ ಕಾಣಬಾರದು ಅಂತ ಹಾಗೆ ಮಾಡಿದ್ದಾನೆ.+  ನಾವು ನಮ್ಮ ಬಗ್ಗೆ ಸಾರುತ್ತಿಲ್ಲ. ಯೇಸು ಕ್ರಿಸ್ತನೇ ಪ್ರಭು ಮತ್ತು ಯೇಸುಗೋಸ್ಕರ ನಾವು ನಿಮ್ಮ ದಾಸರು ಅನ್ನೋದ್ರ ಬಗ್ಗೆ ಸಾರುತ್ತಾ ಇದ್ದೀವಿ.  “ಕತ್ತಲೊಳಗಿಂದ ಬೆಳಕು ಪ್ರಕಾಶಿಸ್ಲಿ”+ ಅಂತ ದೇವರು ಹೇಳಿದನು. ಆತನೇ ತನ್ನ ಮಹಿಮಾಭರಿತ ಜ್ಞಾನವನ್ನ ಕ್ರಿಸ್ತನ ಮುಖದ ಮೂಲಕ ನಮ್ಮ ಹೃದಯದಲ್ಲಿ ಹೊಳಿಯೋ ತರ ಮಾಡಿದ್ದಾನೆ.+  ನಮಗೆ ಗೊತ್ತು, ನಾವು ಮಣ್ಣಿನ ಪಾತ್ರೆಗಳ+ ತರ* ಇದ್ರೂ ನಮ್ಮಲ್ಲಿ ಈ ನಿಧಿ ಇದೆ.+ ಇದ್ರಿಂದ, ಮನುಷ್ಯನಿಗೆ ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ ನಾವು ಪಡ್ಕೊಂಡಿದ್ದೀವಿ. ಆ ಶಕ್ತಿ ನಮ್ಮದಲ್ಲ, ದೇವರು ಕೊಟ್ಟಿದ್ದು.+  ಎಲ್ಲ ತರದಲ್ಲೂ ನಮ್ಮನ್ನ ಜಜ್ಜಲಾಗಿದೆ, ಆದ್ರೆ ನಾವು ಸ್ವಲ್ಪನೂ ಅಲುಗಾಡೋಕೆ ಆಗದ ಸ್ಥಿತಿಯಲ್ಲಿಲ್ಲ. ನಾವು ದಾರಿ ಕಾಣದೆ ಒದ್ದಾಡ್ತಾ ಇದ್ದೀವಿ, ಆದ್ರೆ ಯಾವ ದಾರಿನೂ ಇಲ್ಲ ಅಂತಲ್ಲ.*+  ನಮಗೆ ಹಿಂಸೆ ಬರ್ತಾನೇ ಇದೆ, ಆದ್ರೆ ದೇವರು ನಮ್ಮ ಕೈಬಿಟ್ಟಿಲ್ಲ.+ ಶತ್ರುಗಳು ನಮ್ಮನ್ನ ಕೆಳಗೆ ಬೀಳಿಸಿದ್ದಾರೆ, ಆದ್ರೆ ನಾವು ನಾಶವಾಗಿಲ್ಲ.+ 10  ನಾವು* ಯೇಸು ತರ ಜೀವನ ನಡಿಸ್ತೀವಿ ಅಂತ ತೋರಿಸೋಕೆ ಯೇಸು ಅನುಭವಿಸಿದ+ ಹಾಗೆ ಜೀವಕ್ಕೆ ಅಪಾಯ ತರೋ ಕಷ್ಟಗಳನ್ನ ಯಾವಾಗ್ಲೂ ಸಹಿಸ್ಕೊಳ್ತೀವಿ. 11  ನಾವು ಜೀವನದಲ್ಲಿ ಯೇಸುಗೋಸ್ಕರ ಯಾವಾಗ್ಲೂ ಸಾವನ್ನ ಎದುರಿಸ್ತೀವಿ.+ ಇದ್ರಿಂದ ನಾವು* ಯೇಸು ತರ ಜೀವನ ಮಾಡ್ತೀವಿ ಅಂತ ತೋರಿಸ್ತೀವಿ. 12  ಹೀಗೆ ನಾವು ಸಾವನ್ನ ಎದುರಿಸೋದಾದ್ರೂ ಅದ್ರಿಂದ ನಿಮಗೆ ಜೀವ ಸಿಗುತ್ತೆ. 13  “ನಾನು ನಂಬಿಕೆ ಇಟ್ಟೆ, ಅದಕ್ಕೇ ಮಾತಾಡಿದೆ”+ ಅಂತ ವಚನ ಹೇಳುತ್ತೆ. ಅದೇ ತರದ ನಂಬಿಕೆ ನಮಗೂ ಇದೆ ಅಂತ ನಾವು ತೋರಿಸ್ತೀವಿ, ಅದಕ್ಕೇ ಮಾತಾಡ್ತೀವಿ. 14  ನಮಗೆ ಗೊತ್ತು, ಯೇಸುಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದ ದೇವರು, ಯೇಸು ಜೊತೆ ಇರಬೇಕು ಅಂತಾನೇ ನಮಗೂ ಮತ್ತೆ ಜೀವ ಕೊಟ್ಟು ಎಬ್ಬಿಸ್ತಾನೆ. ಅಷ್ಟೇ ಅಲ್ಲ, ನಮ್ಮನ್ನ ನಿಮ್ಮ ಜೊತೆ ಆತನ ಮುಂದೆ ತರ್ತಾನೆ.+ 15  ಇನ್ನೂ ತುಂಬ ಜನ ದೇವರ ಅಪಾರ ಕೃಪೆ ಪಡಿಬೇಕು ಅಂತ ಇದೆಲ್ಲ ನಿಮಗೋಸ್ಕರ ಆಗ್ತಿದೆ. ಇದ್ರಿಂದ ತುಂಬ ಜನ ಆತನಿಗೆ ಧನ್ಯವಾದ ಹೇಳ್ತಿದ್ದಾರೆ. ಹೀಗೆ ಆತನಿಗೆ ಗೌರವ ಕೊಡ್ತಿದ್ದಾರೆ.+ 16  ಹಾಗಾಗಿ ನಾವು ಸೇವೆ ಬಿಟ್ಟುಬಿಡಲ್ಲ. ನಮ್ಮ ದೇಹ ಅಳಿದು ಹೋಗ್ತಿದ್ರೂ ನಮ್ಮ ಹೃದಯ, ಮನಸ್ಸಂತೂ ನಿಜವಾಗ್ಲೂ ದಿನದಿನ ಹೊಸದಾಗ್ತಿದೆ. 17  ನಾವು ಅನುಭವಿಸ್ತಿರೋ ಕಷ್ಟಗಳು ಸ್ವಲ್ಪ ಕಾಲಕ್ಕಷ್ಟೇ ಮತ್ತು ಅವೆಲ್ಲ ತುಂಬಾ ಚಿಕ್ಕದು. ಆದ್ರೆ ಇದ್ರಿಂದ ನಾವು ಪಡ್ಕೊಳ್ಳೋ ಮಹಿಮೆ ತುಂಬ ಶ್ರೇಷ್ಠ, ಶಾಶ್ವತ.+ 18  ನಾವು ಕಣ್ಣಿಗೆ ಕಾಣೋ ವಿಷ್ಯಗಳ ಮೇಲಲ್ಲ, ಕಣ್ಣಿಗೆ ಕಾಣದೆ ಇರೋ ವಿಷ್ಯಗಳ ಮೇಲೆ ದೃಷ್ಟಿ ಇಡ್ತೀವಿ.+ ಯಾಕಂದ್ರೆ ಕಾಣುವಂಥದ್ದು ಸ್ವಲ್ಪ ದಿನ ಇರುತ್ತೆ ಆಮೇಲೆ ಹೋಗುತ್ತೆ ಆದ್ರೆ ಕಾಣದೆ ಇರೋದು ಶಾಶ್ವತ ಇರುತ್ತೆ.

ಪಾದಟಿಪ್ಪಣಿ

ಅಕ್ಷ. “ಪ್ರತಿಯೊಬ್ಬನ ಮನಸ್ಸಾಕ್ಷಿಗೆ.”
ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
ಅಥವಾ “ಜಾಡಿಗಳಂತೆ.”
ಬಹುಶಃ, “ನಿರಾಶೆಯಲ್ಲೇ ಇರುವಂತೆ ಬಿಟ್ಟಿಲ್ಲ.”
ಅಕ್ಷ. “ಸಾಯುವ ನಮ್ಮ ದೇಹದಲ್ಲಿ.”
ಅಕ್ಷ. “ಸಾಯುವ ನಮ್ಮ ದೇಹದಲ್ಲಿ.”