ಕೊರಿಂಥದವರಿಗೆ ಬರೆದ ಎರಡನೇ ಪತ್ರ 13:1-14

  • ಕೊನೇಲಿ ಕೊಟ್ಟ ಎಚ್ಚರಿಕೆ, ಪ್ರೋತ್ಸಾಹ (1-14)

    • ‘ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಪರೀಕ್ಷಿಸಿ’ (5)

    • ಸರಿ ದಾರೀಲಿ ನಡಿರಿ, ಯೋಚ್ನೆ ಒಂದೇ ತರ ಇರಲಿ (11)

13  ನಾನು ನಿಮ್ಮ ಹತ್ರ ಬರ್ತಿರೋದು ಇದು ಮೂರನೇ ಸಲ. “ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಜನ ಸಾಕ್ಷಿಗಳು ಇರಬೇಕು.”+  ಈಗ ನಾನು ನಿಮ್ಮ ಜೊತೆ ಇಲ್ಲದಿದ್ರೂ ಎರಡ್ನೇ ಸಲ ನಾನು ನಿಮ್ಮ ಹತ್ರ ಬಂದಿದ್ದೀನಿ ಅಂತ ನೆನಸಿ ನನ್ನ ಮಾತನ್ನ ಕೇಳಿ. ನಾನು ಬೇರೆಯವ್ರಿಗೆ ಎಚ್ಚರಿಸಿದ ತರಾನೇ ಈ ಮುಂಚೆ ಪಾಪ ಮಾಡಿದವ್ರಿಗೂ ಎಚ್ಚರಿಸ್ತಾ ಇದ್ದೀನಿ. ನಾನು ಅಲ್ಲಿಗೆ ಬಂದಾಗ ಪಾಪ ಮಾಡ್ತಿರುವವ್ರನ್ನ ಸುಮ್ನೆ ಬಿಡಲ್ಲ.  ಹೀಗೆ ಮಾಡೋದ್ರಿಂದ ಕ್ರಿಸ್ತ ನನ್ನ ಮೂಲಕ ಮಾತಾಡ್ತಿದ್ದಾನೆ ಅಂತ ನಿಮಗೆ ತೋರಿಸ್ತೀನಿ. ಆತನು ನಿಮ್ಮ ಜೊತೆ ಬಲ ಇಲ್ಲದವ್ರ ತರ ಅಲ್ಲ ಬಲಶಾಲಿಯಾಗಿ ನಡ್ಕೊಳ್ತಾನೆ.  ನಿಜ ಹೇಳಬೇಕಾದ್ರೆ, ಆತನು ಬಲಹೀನನಾಗಿ ಇದ್ದಾಗ ಆತನನ್ನ ಕಂಬಕ್ಕೆ ಜಡಿದು ಸಾಯಿಸಿದ್ರು, ಆದ್ರೆ ದೇವರ ಶಕ್ತಿಯಿಂದ+ ಆತನು ಈಗ ಜೀವಂತವಾಗಿದ್ದಾನೆ. ಆತನು ಮೊದ್ಲು ಇದ್ದ ಹಾಗೆ ನಾವೂ ಬಲಹೀನರಾಗಿದ್ದೀವಿ ಅನ್ನೋದು ನಿಜ, ಆದ್ರೆ ನಿಮ್ಮಲ್ಲಿ ಕೆಲಸಮಾಡೋ+ ದೇವರ ಶಕ್ತಿಯಿಂದ ನಾವು ಕ್ರಿಸ್ತನ ಜೊತೆ ಜೀವಿಸ್ತೀವಿ.+  ನೀವು ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಇಲ್ವಾ ಅಂತ ಪರೀಕ್ಷಿಸ್ಕೊಳ್ತಾ ಇರಿ, ನೀವು ಎಂಥವರಾಗಿದ್ದೀರ ಅಂತ ನಿಮ್ಮನ್ನೇ ಕೇಳಿಕೊಳ್ತಾ ಇರಿ.+ ಯೇಸು ಕ್ರಿಸ್ತ ನಿಮ್ಮ ಜೊತೆ ಒಂದಾಗಿರೋದು ನಿಮಗೆ ಅರ್ಥ ಆಗ್ತಿಲ್ವಾ? ದೇವರನ್ನ ಮೆಚ್ಚಿಸಲಿಲ್ಲ ಅಂದ್ರೆ ಕ್ರಿಸ್ತ ನಿಮ್ಮ ಜೊತೆ ಒಂದಾಗಿ ಇರಲ್ಲ.  ನಮ್ಮನ್ನ ದೇವರು ಮೆಚ್ಚಿದ್ದಾನೆ ಅನ್ನೋದನ್ನ ನೀವು ಅರ್ಥ ಮಾಡ್ಕೊಬೇಕಂತ ನಾನು ಇಷ್ಟಪಡ್ತೀನಿ.  ನೀವು ಯಾವ ತಪ್ಪನ್ನೂ ಮಾಡಬಾರದು ಅಂತ ನಾವು ದೇವರಿಗೆ ಪ್ರಾರ್ಥಿಸ್ತಿದ್ದೀವಿ. ನನ್ನ ಉದ್ದೇಶ, ಬೇರೆಯವರು ನಮ್ಮನ್ನ ಮೆಚ್ಚಿದ್ದಾರೆ ಅಂತ ತೋರಿಸೋದಲ್ಲ, ಬದಲಿಗೆ ಬೇರೆಯವರು ನಮ್ಮನ್ನ ಮೆಚ್ಚದೆ ಇದ್ರೂ ನೀವು ಒಳ್ಳೇದನ್ನ ಮಾಡಬೇಕು ಅನ್ನೋದೇ.  ನಾವು ಸತ್ಯಕ್ಕೆ ವಿರುದ್ಧವಾಗಿ ಏನೂ ಮಾಡಕ್ಕಾಗಲ್ಲ, ಸತ್ಯಕೋಸ್ಕರ ಏನು ಬೇಕಾದ್ರೂ ಮಾಡಬಹುದು.  ನಾವು ಬಲಹೀನರಾಗಿದ್ದಾಗ ನೀವು ಬಲಿಷ್ಠರಾಗಿದ್ರೆ ನಾವು ನಿಜವಾಗ್ಲೂ ಖುಷಿಪಡ್ತೀವಿ. ನೀವು ಮತ್ತೆ ಸರಿ ದಾರಿಗೆ ಬರಬೇಕಂತ ನಾವು ಪ್ರಾರ್ಥಿಸ್ತಿದ್ದೀವಿ. 10  ನಾನು ಅಲ್ಲಿಗೆ ಬರೋ ಮುಂಚೆನೇ ಇದನ್ನ ನಿಮಗೆ ಬರೀತಾ ಇದ್ದೀನಿ, ಯಾಕಂದ್ರೆ ಪ್ರಭು ನನಗೆ ಕೊಟ್ಟ ಅಧಿಕಾರವನ್ನ ನಾನು ಅಲ್ಲಿಗೆ ಬಂದಾಗ ಕಠಿಣವಾಗಿ ಬಳಸಬಾರದು ಅಂತ ಅಂದ್ಕೊಂಡಿದ್ದೀನಿ. ಆತನು ನನಗೆ ಆ ಅಧಿಕಾರ ಕೊಟ್ಟಿರೋದು+ ನಿಮ್ಮ ನಂಬಿಕೆ ಬಲಪಡಿಸೋಕೆ, ಹಾಳು ಮಾಡೋಕ್ಕಲ್ಲ. 11  ಸಹೋದರರೇ, ಕೊನೇಲಿ ನಾನು ಪ್ರೋತ್ಸಾಹಿಸೋದು ಏನಂದ್ರೆ ಯಾವಾಗ್ಲೂ ಖುಷಿಯಾಗಿರಿ, ಸರಿ ದಾರೀಲಿ ನಡಿತಾ ಇರಿ, ಸಾಂತ್ವನ ಪಡ್ಕೊಳ್ತಾ ಇರಿ,+ ಯಾವಾಗ್ಲೂ ನಿಮ್ಮ ಯೋಚ್ನೆ ಒಂದೇ ತರ ಇರಲಿ,+ ಶಾಂತಿಯಿಂದ ಜೀವಿಸಿ.+ ಆಗ ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ.+ 12  ಒಬ್ರು ಇನ್ನೊಬ್ರಿಗೆ ಪವಿತ್ರವಾದ ಮುತ್ತಿಟ್ಟು ವಂದಿಸಿ. 13  ಪವಿತ್ರ ಜನ್ರೆಲ್ಲ ನಿಮಗೆ ವಂದನೆ ಹೇಳಿದ್ದಾರೆ. 14  ಪ್ರಭು ಯೇಸು ಕ್ರಿಸ್ತನ ಅಪಾರ ಕೃಪೆ, ದೇವರ ಪ್ರೀತಿ ಮತ್ತು ನಾವೆಲ್ಲ ಪ್ರಯೋಜನ ಪಡಿತಿರೋ ಆತನ ಪವಿತ್ರಶಕ್ತಿ ನಿಮ್ಮೆಲ್ರ ಜೊತೆ ಇರಲಿ.

ಪಾದಟಿಪ್ಪಣಿ