ಒಂದನೇ ಸಮುವೇಲ 12:1-25

  • ಸಮುವೇಲನ ಕೊನೇ ಮಾತುಗಳು (1-25)

    • ‘ಟೊಳ್ಳು ವಿಷ್ಯಗಳ ಕಡೆ ತಿರುಗಬೇಡಿ’ (21)

    • ಯೆಹೋವ ತನ್ನ ಜನ್ರ ಕೈ ಬಿಡಲ್ಲ (22)

12  ಕೊನೆಗೆ ಸಮುವೇಲ ಎಲ್ಲ ಇಸ್ರಾಯೇಲ್ಯರಿಗೆ ಹೀಗಂದ: “ನೀವು ಕೇಳಿದ್ದೆಲ್ಲ ನಾನು ಮಾಡಿದ್ದೀನಿ.* ನಿಮ್ಮನ್ನ ಆಳೋಕೆ ಒಬ್ಬ ರಾಜನನ್ನ ನೇಮಿಸಿದ್ದೀನಿ.+  ಇನ್ಮುಂದೆ ನಿಮ್ಮನ್ನ ಮುನ್ನಡೆಸೋ* ರಾಜ ಇವನೇ!+ ನನಗೆ ವಯಸ್ಸಾಗಿ ನರೆಗೂದಲು ಬಂದಿದೆ. ಇಲ್ಲಿ ನಿಮ್ಮ ಜೊತೆ ನನ್ನ ಗಂಡು ಮಕ್ಕಳು ಇದ್ದಾರೆ.+ ನನ್ನ ಯೌವನದಿಂದ ಈ ಮುದಿ ಪ್ರಾಯದ ತನಕ ನಿಮ್ಮನ್ನ ಮುನ್ನಡೆಸಿದ್ದೀನಿ.+  ನಾನೀಗ ನಿಮ್ಮ ಮುಂದೆ ನಿಂತಿದ್ದೀನಿ. ಯಾರಿಗಾದ್ರೂ ನನ್ನ ಮೇಲೆ ದೂರು ಇದ್ರೆ ಯೆಹೋವನ ಮತ್ತು ಆತನ ಅಭಿಷಿಕ್ತನ ಮುಂದೆ ಹೇಳಿ.+ ನಾನು ಯಾರ ಹೋರಿನಾದ್ರೂ ಕತ್ತೆನಾದ್ರೂ ತಗೊಂಡಿದ್ದೀನಾ?+ ನಾನು ಯಾರನ್ನಾದ್ರೂ ದೋಚಿದ್ದೀನಾ ಮೋಸ ಮಾಡಿದ್ದೀನಾ? ಯಾರಿಂದಾದ್ರೂ ಲಂಚ ತಗೊಂಡು ತಪ್ಪಾದ ತೀರ್ಪು ಕೊಟ್ಟು ಅನ್ಯಾಯ ಮಾಡಿದ್ದೀನಾ?+ ಹಾಗೆ ಮಾಡಿದ್ರೆ ಹೇಳಿ, ಅದನ್ನ ವಾಪಸ್‌ ಕೊಡ್ತೀನಿ”+ ಅಂದ.  ಅದಕ್ಕೆ ಅವರು “ನೀನು ನಮ್ಮನ್ನ ದೋಚಿಲ್ಲ, ಮೋಸ ಮಾಡಿಲ್ಲ. ಯಾರಿಂದನೂ ಏನೂ ತಗೊಂಡಿಲ್ಲ” ಅಂದ್ರು.  ಆಗ ಅವನು “ನನ್ನ ಮೇಲೆ ದೂರು ಹೊರಿಸೋಕೆ ನಿಮಗೆ ಯಾವುದೇ ಕಾರಣ ಸಿಗಲಿಲ್ಲ ಅನ್ನೋದಕ್ಕೆ ಇವತ್ತು ಯೆಹೋವನೇ ಸಾಕ್ಷಿ, ಆತನ ಅಭಿಷಿಕ್ತನೇ ಸಾಕ್ಷಿ” ಅಂದ. ಅದಕ್ಕೆ ಅವರು “ಹೌದು, ಆತನೇ ಸಾಕ್ಷಿ” ಅಂದ್ರು.  ಸಮುವೇಲ ಜನ್ರಿಗೆ “ನಿಮ್ಮ ಪೂರ್ವಜರನ್ನ ಈಜಿಪ್ಟ್‌ ದೇಶದಿಂದ ಬಿಡಿಸ್ಕೊಂಡು ಬಂದ ಮೋಶೆ ಮತ್ತು ಆರೋನರನ್ನ ನೇಮಿಸಿದ+ ಯೆಹೋವನೇ ಇದಕ್ಕೆ ಸಾಕ್ಷಿ.  ಈಗ ನೀವೆಲ್ಲ ಮುಂದೆ ಬನ್ನಿ. ಯೆಹೋವ ನಿಮಗೆ, ನಿಮ್ಮ ಪೂರ್ವಜರಿಗೆ ಮಾಡಿದ ಎಲ್ಲ ಒಳ್ಳೇ ಕೆಲಸಗಳ ಆಧಾರದ ಮೇಲೆ ನಾನು ನಿಮಗೆ ಯೆಹೋವನ ಮುಂದೆ ನ್ಯಾಯತೀರಿಸ್ತೀನಿ.  ಯಾಕೋಬ ಈಜಿಪ್ಟಿಗೆ ಬಂದಾಗ,+ ನಿಮ್ಮ ಪೂರ್ವಜರು ಸಹಾಯಕ್ಕಾಗಿ ಯೆಹೋವನನ್ನ ಕರೆದಾಗ+ ಯೆಹೋವ ತಕ್ಷಣ ಮೋಶೆ+ ಮತ್ತು ಆರೋನನನ್ನ ಕಳಿಸಿ ನಿಮ್ಮ ಪೂರ್ವಜರನ್ನ ಈಜಿಪ್ಟಿಂದ ಕರ್ಕೊಂಡು ಬಂದು ಈ ಸ್ಥಳದಲ್ಲಿ ವಾಸಿಸೋ ತರ ಮಾಡಿದನು.+  ಆದ್ರೆ ನಿಮ್ಮ ಪೂರ್ವಜರು ತಮ್ಮ ದೇವರಾದ ಯೆಹೋವನನ್ನ ಮರೆತುಬಿಟ್ರು. ಆಗ ಆತನು ಅವ್ರನ್ನ ಹಾಚೋರಿನ ಸೇನಾಪತಿ ಸಿಸೆರನ+ ಕೈಗೆ, ಫಿಲಿಷ್ಟಿಯರ ಕೈಗೆ+ ಮತ್ತು ಮೋವಾಬಿನ ರಾಜನ+ ಕೈಗೆ ಮಾರಿಬಿಟ್ಟನು.+ ಅವರು ನಿಮ್ಮ ಪೂರ್ವಜರ ವಿರುದ್ಧ ಹೋರಾಡಿದ್ರು. 10  ಸಹಾಯಕ್ಕಾಗಿ ನಿಮ್ಮ ಪೂರ್ವಜರು ಯೆಹೋವನಿಗೆ ಬೇಡ್ಕೊಂಡು+ ‘ನಾವು ಪಾಪ ಮಾಡಿದ್ವಿ.+ ಯೆಹೋವನನ್ನ ಬಿಟ್ಟು ಬಾಳ್‌ ದೇವರುಗಳನ್ನ,+ ಅಷ್ಟೋರೆತ್‌+ ಮೂರ್ತಿಗಳನ್ನ ಆರಾಧಿಸಿದ್ವಿ. ನಿನ್ನನ್ನ ಆರಾಧಿಸೋಕೆ ಆಗೋ ಹಾಗೆ ಈಗ ನಮ್ಮನ್ನ ಈ ಶತ್ರುಗಳ ಕೈಯಿಂದ ಬಿಡಿಸು’ ಅಂದ್ರು. 11  ನೀವು ಸುರಕ್ಷಿತವಾಗಿ ಜೀವಿಸೋಕೆ ಆಗೋ ಹಾಗೆ ಯೆಹೋವ ಯೆರುಬ್ಬಾಳನನ್ನ,+ ಬೆದಾನನನ್ನ, ಯೆಫ್ತಾಹನನ್ನ,+ ಸಮುವೇಲನನ್ನ+ ಕಳಿಸಿ ನಿಮ್ಮ ಸುತ್ತ ಇರೋ ಶತ್ರುಗಳ ಕೈಯಿಂದ ಕಾಪಾಡಿದನು.+ 12  ಅಮ್ಮೋನಿಯರ ರಾಜ ನಾಹಾಷ+ ನಿಮ್ಮ ವಿರುದ್ಧ ಬರ್ತಾನೆ ಅಂತ ಗೊತ್ತಾದಾಗ ನಿಮ್ಮ ದೇವರಾದ ಯೆಹೋವನೇ ನಿಮಗೆ ರಾಜನಾಗಿದ್ರೂ+ ನನ್ನ ಹತ್ರ ಬಂದು ‘ನಮಗೆ ಒಬ್ಬ ರಾಜ ಬೇಕೇ ಬೇಕು!’+ ಅಂತ ಹೇಳ್ತಾ ಇದ್ರಿ. 13  ನೋಡಿ, ನೀವು ಆರಿಸಿದ, ನೀವು ಕೇಳಿದ ಆ ರಾಜ ಇವನೇ. ನೋಡಿ! ಯೆಹೋವ ನಿಮ್ಮ ಮೇಲೆ ಒಬ್ಬ ರಾಜನನ್ನ ನೇಮಿಸಿದ್ದಾನೆ.+ 14  ನೀವು ಯೆಹೋವನಿಗೆ ಭಯಪಟ್ಟು+ ಆತನನ್ನೇ ಆರಾಧಿಸಬೇಕು,+ ಆತನ ಮಾತು ಕೇಳಬೇಕು,+ ಯೆಹೋವನ ಆಜ್ಞೆ ಪ್ರಕಾರ ನಡೀಬೇಕು, ದಂಗೆ ಏಳಬಾರದು, ನಿಮ್ಮನ್ನ ಆಳೋ ರಾಜನ ಸಮೇತ ನೀವೆಲ್ರೂ ನಿಮ್ಮ ದೇವರಾದ ಯೆಹೋವನ ಹಿಂದೆನೇ ಹೋದ್ರೆ ಒಳ್ಳೇದು. 15  ನೀವು ಯೆಹೋವನ ಮಾತು ಕೇಳದೇ ಇದ್ರೆ, ಯೆಹೋವನ ಆಜ್ಞೆ ಪ್ರಕಾರ ನಡಿದೇ ಇದ್ರೆ ಯೆಹೋವ ನಿಮಗೆ ಮತ್ತು ನಿಮ್ಮ ತಂದೆಯಂದಿರಿಗೆ ಶಿಕ್ಷೆ ಕೊಡ್ತಾನೆ.+ 16  ಈಗ ನೀವೆಲ್ರೂ ಮುಂದೆ ಬಂದು ನಿಂತ್ಕೊಳ್ಳಿ. ಯೆಹೋವ ನಿಮ್ಮ ಕಣ್ಮುಂದೆ ಮಾಡೋ ಈ ಮಹಾನ್‌ ಕೆಲಸ ನೋಡಿ. 17  ಈಗ ಗೋದಿಯ ಸುಗ್ಗಿಕಾಲ ಅಲ್ವಾ? ಆದ್ರೂ ಗುಡುಗು, ಮಳೆ ಬರಿಸು ಅಂತ ಯೆಹೋವನನ್ನ ಬೇಡ್ಕೊಳ್ತೀನಿ. ನೀವು ನಿಮಗೋಸ್ಕರ ರಾಜನನ್ನ ಕೇಳಿ ಯೆಹೋವನ ವಿರುದ್ಧ ಎಂಥ ದೊಡ್ಡ ತಪ್ಪು ಮಾಡಿದ್ದೀರ ಅಂತ ಆಗ ನಿಮಗೆ ಗೊತ್ತಾಗುತ್ತೆ, ಅರ್ಥ ಆಗುತ್ತೆ.”+ 18  ಹೀಗೆ ಹೇಳಿ ಸಮುವೇಲ ಯೆಹೋವನಿಗೆ ಪ್ರಾರ್ಥಿಸಿದ. ಯೆಹೋವ ಆ ದಿನ ಗುಡುಗು, ಮಳೆ ಬರೋ ತರ ಮಾಡಿದನು. ಇದನ್ನ ನೋಡಿ ಜನ್ರೆಲ್ಲ ಯೆಹೋವನಿಗೆ ಮತ್ತು ಸಮುವೇಲನಿಗೆ ತುಂಬ ಭಯಪಟ್ರು. 19  ಆಮೇಲೆ ಜನ್ರೆಲ್ಲ ಸಮುವೇಲನಿಗೆ “ರಾಜ ಬೇಕಂತ ಕೇಳೋ ಮೂಲಕ ನಮ್ಮ ಎಲ್ಲ ಪಾಪಗಳಿಗೆ ಇನ್ನೊಂದನ್ನ ಸೇರಿಸಿದ ಹಾಗಾಯ್ತು. ನಮಗೆ ಸಾಯೋಕೆ ಇಷ್ಟ ಇಲ್ಲ, ದಯವಿಟ್ಟು ನಮಗೋಸ್ಕರ ನಿನ್ನ ದೇವರಾದ ಯೆಹೋವನ ಹತ್ರ ಬೇಡ್ಕೊ”+ ಅಂದ್ರು. 20  ಅದಕ್ಕೆ ಸಮುವೇಲ ಜನ್ರಿಗೆ “ಹೆದರಬೇಡಿ. ನೀವು ಪಾಪ ಮಾಡಿದ್ದೀರ ನಿಜ. ಆದ್ರೆ ಇನ್ನು ಮುಂದಾದ್ರೂ ಯೆಹೋವ ದೇವರನ್ನ ಬಿಟ್ಟು ಬಿಡಬೇಡಿ,+ ನಿಮ್ಮ ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸಿ.+ 21  ಟೊಳ್ಳು ವಿಷ್ಯಗಳ ಕಡೆ ತಿರುಗಬೇಡಿ.+ ಅದ್ರಿಂದೇನೂ ಪ್ರಯೋಜನ ಇಲ್ಲ.+ ಅದು ನಿಮ್ಮನ್ನ ಕಾಪಾಡಲ್ಲ. ಯಾಕಂದ್ರೆ ಅವೆಲ್ಲ ಬರೀ ಸುಳ್ಳು. 22  ಸ್ವತಃ ಯೆಹೋವನೇ ನಿಮ್ಮನ್ನ ತನ್ನ ಜನ್ರನ್ನಾಗಿ ಆರಿಸ್ಕೊಂಡಿದ್ದಾನೆ.+ ಹಾಗಾಗಿ ತನ್ನ ಮಹಾ ಹೆಸ್ರಿಗೋಸ್ಕರ+ ಯೆಹೋವ ತನ್ನ ಜನ್ರ ಕೈಹಿಡಿದೇ ಹಿಡಿತಾನೆ, ಬಿಡಲ್ಲ.+ 23  ನನ್ನ ವಿಷ್ಯಕ್ಕೆ ಬರೋದಾದ್ರೆ ನಾನು ನಿಮಗಾಗಿ ಪ್ರಾರ್ಥಿಸೋದನ್ನ ನಿಲ್ಲಿಸೋ ಯೋಚ್ನೆ ಕನಸು-ಮನಸ್ಸಲ್ಲೂ ಬರಲ್ಲ. ಹಾಗೆ ಮಾಡಿದ್ರೆ ಯೆಹೋವನ ವಿರುದ್ಧ ಪಾಪ ಮಾಡಿದ ಹಾಗಾಗುತ್ತೆ. ಮುಂದಕ್ಕೂ ನೀವು ಒಳ್ಳೇ ದಾರೀಲಿ, ಸರಿಯಾದ ದಾರೀಲಿ ನಡಿಯೋಕೆ ನಿಮಗೆ ಮಾರ್ಗದರ್ಶನ ಕೊಡ್ತಾ ಇರ್ತೀನಿ. 24  ದೇವರು ನಿಮಗೋಸ್ಕರ ಮಾಡಿರೋ ಮಹಾನ್‌ ಕೆಲಸಗಳನ್ನ ನೆನಪಿಸ್ಕೊಂಡು ಯೆಹೋವನೊಬ್ಬನಿಗೆ ಭಯಪಡಿ.+ ನಂಬಿಗಸ್ತರಾಗಿದ್ದು* ಆತನನ್ನ ನಿಮ್ಮ ಪೂರ್ಣ ಹೃದಯದಿಂದ ಆರಾಧಿಸಿ.+ 25  ನೀವು ಕೆಟ್ಟದ್ದನ್ನ ಮಾಡ್ತಾ ಹೋದ್ರೆ ನೀವು, ನಿಮ್ಮ ರಾಜ+ ಇಬ್ರೂ ನಾಶವಾಗಿ ಹೋಗ್ತೀರ.”+

ಪಾದಟಿಪ್ಪಣಿ

ಅಕ್ಷ. “ನಿಮ್ಮ ಮಾತುಗಳಿಗೆ ಗೌರವ ಕೊಟ್ಟಿದ್ದೀನಿ.”
ಅಕ್ಷ. “ಮುಂದೆ ನಡೆಯೋ.”
ಅಥವಾ “ಸತ್ಯದಲ್ಲಿದ್ದು.”