ವಿಮೋಚನಕಾಂಡ 17:1-16

  • ನೀರಿಲ್ಲ ಅಂತ ಹೋರೇಬಲ್ಲಿ ದೂರು (1-4)

  • ಬಂಡೆಯಿಂದ ನೀರು (5-7)

  • ಅಮಾಲೇಕ್ಯರ ದಾಳಿ, ಸೋಲು (8-16)

17  ಇಸ್ರಾಯೇಲ್ಯರೆಲ್ಲ ಸೀನ್‌+ ಕಾಡಿಂದ ಮುಂದಕ್ಕೆ ಬಂದ್ರು. ಯೆಹೋವ ಅವರಿಗೆ ಎಲ್ಲೆಲ್ಲಿ ಡೇರೆ ಹಾಕೋಕೆ ಹೇಳಿದ್ನೋ+ ಅಲ್ಲೇ ಡೇರೆ ಹಾಕ್ತಾ ಮುಂದೆಮುಂದೆ ಪ್ರಯಾಣಿಸ್ತಾ ಹೋದ್ರು. ಕೊನೆಗೆ ರೆಫೀದೀಮಿಗೆ+ ಬಂದು ಡೇರೆ ಹಾಕೊಂಡ್ರು. ಆದ್ರೆ ಅಲ್ಲಿ ಅವರಿಗೆ ಕುಡಿಯೋಕೆ ನೀರು ಇರಲಿಲ್ಲ.  ಜನ್ರು ಮೋಶೆಗೆ “ನಮಗೆ ಕುಡಿಯೋಕೆ ನೀರು ಕೊಡು” ಅಂತ ಅವನ ಜೊತೆ ಜಗಳ ಮಾಡೋಕೆ ಶುರುಮಾಡಿದ್ರು.+ ಆಗ ಮೋಶೆ “ನೀವ್ಯಾಕೆ ನನ್ನ ಜೊತೆ ಜಗಳ ಮಾಡ್ತೀರ? ಯೆಹೋವನನ್ನ ಮತ್ತೆಮತ್ತೆ ಯಾಕೆ ಪರೀಕ್ಷಿಸ್ತೀರ?”+ ಅಂದ.  ಜನ್ರಿಗೆ ತುಂಬ ಬಾಯಾರಿಕೆ ಆಗಿತ್ತು. ಹಾಗಾಗಿ ಅವರು ಮೋಶೆ ವಿರುದ್ಧ ಗೊಣಗ್ತಾನೇ ಇದ್ರು.+ “ನಮ್ಮನ್ನ ಈಜಿಪ್ಟಿಂದ ಯಾಕೆ ಕರ್ಕೊಂಡು ಬಂದೆ? ಬಾಯಾರಿಕೆಯಿಂದ ಸಾಯಿಸಕ್ಕಾ? ನಾವು, ನಮ್ಮ ಮಕ್ಕಳು, ಪ್ರಾಣಿಗಳು ನೀರಿಲ್ಲದೆ ಸಾಯ್ತೀವಿ” ಅಂದ್ರು.  ಕೊನೆಗೆ ಮೋಶೆ ಯೆಹೋವನಿಗೆ ಪ್ರಾರ್ಥಿಸಿ “ನಾನೇನ್‌ ಮಾಡ್ಲಿ? ಇನ್ನು ಸ್ವಲ್ಪ ಹೊತ್ತು ಬಿಟ್ರೆ ಇವರು ನನ್ನನ್ನ ಕಲ್ಲು ಹೊಡೆದು ಸಾಯಿಸ್ತಾರೆ!” ಅಂದ.  ಅದಕ್ಕೆ ಯೆಹೋವ ಮೋಶೆಗೆ “ನೀನು ನೈಲ್‌ ನದಿಯನ್ನ+ ಹೊಡೆದ ಕೋಲನ್ನ ಹಿಡ್ಕೊ. ಇಸ್ರಾಯೇಲ್ಯರ ಹಿರಿಯರಲ್ಲಿ ಕೆಲವರನ್ನ ಆರಿಸಿ ಅವರನ್ನ ಕರ್ಕೊಂಡು ಜನ್ರ ಮುಂದೆ ನಡಿತಾ  ಹೋರೇಬ್‌ಗೆ ಹೋಗು. ಅಲ್ಲಿ ನಾನು ನಿನ್ನ ಮುಂದೆ ಬಂಡೆ ಮೇಲೆ ನಿಂತಿರ್ತೀನಿ. ನೀನು ಆ ಬಂಡೆನ ಕೋಲಿಂದ ಹೊಡಿ. ಆಗ ಆ ಬಂಡೆಯಿಂದ ನೀರು ಬರುತ್ತೆ. ಜನ್ರು ಅದನ್ನ ಕುಡಿತಾರೆ” ಅಂದನು.+ ಮೋಶೆ ಇಸ್ರಾಯೇಲ್ಯರ ಹಿರಿಯರ ಕಣ್ಮುಂದೆ ಹಾಗೇ ಮಾಡಿದ.  ಇಸ್ರಾಯೇಲ್ಯರು ಮೋಶೆ ಜೊತೆ ಜಗಳ ಮಾಡಿದ್ರಿಂದ, “ಯೆಹೋವ ನಮ್ಮ ಜೊತೆ ಇದ್ದಾನೋ ಇಲ್ವೋ?” ಅಂತ ಹೇಳಿ ಯೆಹೋವನನ್ನ ಪರೀಕ್ಷಿಸಿದ್ರಿಂದ+ ಮೋಶೆ ಆ ಜಾಗಕ್ಕೆ ಮಸ್ಸ*+ ಮತ್ತು ಮೆರೀಬಾ*+ ಅಂತ ಹೆಸರಿಟ್ಟ.  ಆಮೇಲೆ ಅಮಾಲೇಕ್ಯರು+ ರೆಫೀದೀಮಿನಲ್ಲಿದ್ದ+ ಇಸ್ರಾಯೇಲ್ಯರ ಮೇಲೆ ದಾಳಿ ಮಾಡಿದ್ರು.  ಆಗ ಮೋಶೆ ಯೆಹೋಶುವಗೆ+ “ನೀನು ಸ್ವಲ್ಪ ಜನ್ರನ್ನ ಆರಿಸ್ಕೊಂಡು ನಾಳೆ ಅಮಾಲೇಕ್ಯರ ವಿರುದ್ಧ ಯುದ್ಧಕ್ಕೆ ಹೋಗು. ಸತ್ಯ ದೇವರು ಹೇಳಿದ್ದ ಕೋಲನ್ನ ನಾನು ಹಿಡ್ಕೊಂಡು ಬೆಟ್ಟದ ತುದಿಗೆ ಹೋಗಿ ನಿಂತ್ಕೊಳ್ತೀನಿ” ಅಂದ. 10  ಮೋಶೆ ಹೇಳಿದ ತರಾನೇ ಯೆಹೋಶುವ ಮಾಡಿದ.+ ಅವನು ಅಮಾಲೇಕ್ಯರ ವಿರುದ್ಧ ಯುದ್ಧ ಮಾಡೋಕೆ ಹೋದ. ಮೋಶೆ, ಆರೋನ, ಹೂರ+ ಬೆಟ್ಟದ ತುದಿಗೆ ಹೋದ್ರು. 11  ಮೋಶೆ ಅಲ್ಲಿ ಕೈಗಳನ್ನ ಮೇಲಕ್ಕೆ ಎತ್ತಿ ಹಾಗೇ ನಿಂತ್ಕೊಂಡ. ಅವನು ಎಷ್ಟರ ತನಕ ಕೈಗಳನ್ನ ಎತ್ಕೊಂಡು ನಿಂತಿದ್ನೋ ಅಷ್ಟರ ತನಕ ಇಸ್ರಾಯೇಲ್ಯರು ಗೆಲ್ತಿದ್ರು. ಆದ್ರೆ ಅವನು ಕೈಗಳನ್ನ ಕೆಳಗೆ ಇಳಿಸಿದ್ರೆ ಅಮಾಲೇಕ್ಯರು ಗೆಲ್ತಿದ್ರು. 12  ಮೋಶೆ ಕೈಗಳು ಸೋತುಹೋದಾಗ ಆರೋನ ಮತ್ತು ಹೂರ ಅವನಿಗೆ ಕೂತ್ಕೊಳ್ಳೋಕೆ ಒಂದು ಕಲ್ಲು ತಂದ್ರು. ಮೋಶೆ ಅದ್ರ ಮೇಲೆ ಕೂತ. ಆಮೇಲೆ ಆರೋನ ಮತ್ತು ಹೂರ ಇಬ್ರೂ ಮೋಶೆಯ ಅಕ್ಕಪಕ್ಕ ನಿಂತು ಅವನ ಕೈಗಳನ್ನ ಎತ್ತಿ ಹಿಡಿದ್ರು. ಹೀಗೆ ಸೂರ್ಯ ಮುಳುಗೋ ತನಕ ಮೋಶೆ ಕೈಗಳು ಮೇಲೆನೇ ಇತ್ತು. 13  ಆಗ ಯೆಹೋಶುವ ಅಮಾಲೇಕ್ಯರನ್ನ ಸೋಲಿಸಿದ.+ 14  ಆಮೇಲೆ ಯೆಹೋವ ಮೋಶೆಗೆ “‘ಅಮಾಲೇಕ್ಯರನ್ನ ಯಾರೂ ಯಾವತ್ತೂ ನೆನಪಿಸ್ಕೊಳ್ಳದೆ ಇರೋ ತರ ನಾನು ಅವರನ್ನ ಭೂಮಿ ಮೇಲಿಂದ ಪೂರ್ತಿ ನಾಶಮಾಡ್ತೀನಿ.’+ ಇದನ್ನ ಯೆಹೋಶುವಗೆ ಹೇಳು, ಇದನ್ನ ನೆನಪಿಡೋಕೆ ಪುಸ್ತಕದಲ್ಲಿ ಬರಿ” ಅಂದನು. 15  ಆಮೇಲೆ ಮೋಶೆ ಒಂದು ಯಜ್ಞವೇದಿ ಕಟ್ಟಿ ಅದಕ್ಕೆ ಯೆಹೋವ-ನಿಸ್ಸಿ* ಅಂತ ಹೆಸರಿಟ್ಟು, 16  “ಅಮಾಲೇಕ್ಯರು ಯಾಹು ಸಿಂಹಾಸನದ ವಿರುದ್ಧ ಕೈ ಎತ್ತಿದ+ ಕಾರಣ ಯೆಹೋವ ಅವರ ಮುಂದಿನ ಪೀಳಿಗೆಗಳ ವಿರುದ್ಧನೂ ಯುದ್ಧ ಮಾಡ್ತಾನೆ” ಅಂದನು.+

ಪಾದಟಿಪ್ಪಣಿ

ಅರ್ಥ “ಪರೀಕ್ಷಿಸೋದು.”
ಅರ್ಥ “ಜಗಳ ಮಾಡೋದು.”
ಅರ್ಥ “ಯೆಹೋವ ನನ್ನ ಸೂಚನಾ ಕಂಬ.”